ವಯಸ್ಸಲ್ಲಿ 10 ವರ್ಷ ದೊಡ್ಡವ, 2 ಮಕ್ಕಳ ತಂದೆ... "ಮಗಳೇ" ಅಂತ ಬಾಯ್ತುಂಬ ಕರೆದವಳನ್ನೇ 2ನೇ ಮದ್ವೆಯಾದ ಖ್ಯಾತ ಹಿರಿಯ ನಟ!

saif ali khan and Kareena kapoor love story: ಪ್ರೀತಿಗೆ ಕಣ್ಣಿಲ್ಲ... ವಯಸ್ಸಂತು ಇಲ್ಲವೇ ಇಲ್ಲ! ಇತ್ತೀಚಿನ ದಿನಗಳಲ್ಲಂತೂ ವಯಸ್ಸಿನ ಅಂತರವನ್ನೇ ಪರಿಗಣಿಸದೆ ದಾಂಪತ್ಯಕ್ಕೆ ಕಾಲಿಡುವ ಅನೇಕ ಜೋಡಿಗಳನ್ನು ನೋಡಿರಬಹುದು. ಇದಕ್ಕೆ ಹೊರತಾಗಿಲ್ಲ ಬಾಲಿವುಡ್‌ನ ಈ ಜೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /7

ಪ್ರೀತಿಗೆ ಕಣ್ಣಿಲ್ಲ... ವಯಸ್ಸಂತು ಇಲ್ಲವೇ ಇಲ್ಲ! ಇತ್ತೀಚಿನ ದಿನಗಳಲ್ಲಂತೂ ವಯಸ್ಸಿನ ಅಂತರವನ್ನೇ ಪರಿಗಣಿಸದೆ ದಾಂಪತ್ಯಕ್ಕೆ ಕಾಲಿಡುವ ಅನೇಕ ಜೋಡಿಗಳನ್ನು ನೋಡಿರಬಹುದು. ಇದಕ್ಕೆ ಹೊರತಾಗಿಲ್ಲ ಬಾಲಿವುಡ್‌ನ ಈ ಜೋಡಿ.

2 /7

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ. ತಶನ್ ಚಿತ್ರದ ಶೂಟಿಂಗ್ ವೇಳೆ ಈ ಜೋಡಿ ನಡುವೆ ಪ್ರೇಮಾಂಕುರವಾಗಿತ್ತು ಎಂದು ಅನೇಕರು ಹೇಳುತ್ತಾರೆ. ಆದರೆ ಸೆಲೆಬ್ರಿಟಿ ಛಾಯಾಗ್ರಾಹಕ ದಬ್ಬೂ ರತ್ನಾನಿ ಅವರು ಸೈಫ್ ಮತ್ತು ಕರೀನಾ ಲವ್ ಸ್ಟೋರಿ ಬಗ್ಗೆ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.  

3 /7

ಕರೀನಾ ಮತ್ತು ಸೈಫ್ ಅವರ ಪ್ರೇಮಕಥೆಯು 2005 ರಲ್ಲಿ ತನ್ನ ಸ್ಟುಡಿಯೋದಿಂದ ಪ್ರಾರಂಭವಾಯಿತು ಎಂದು ಹೇಳಿದ್ದಾರೆ. ದಬ್ಬೂ ರತ್ನಾನಿ ಅವರು ರೆಡ್ಡಿಟ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ್ದರು. ಈ ವೇಳೆ ಯೂಸರ್‌ ಒಬ್ಬರು ಪ್ರಶ್ನೆ ಕೇಳಿದ್ದಕ್ಕೆ  ಉತ್ತರಿಸಿದ್ದರು.  

4 /7

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಹಳೆಯ ಫೋಟೋವನ್ನು ಹಂಚಿಕೊಂಡು, ನೀವು ಕ್ಲಿಕ್ ಮಾಡಿದ ಈ ಫೋಟೋದ ಹಿಂದಿನ ಕಥೆಯನ್ನು ಹೇಳಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದಬ್ಬೂ ರತ್ನಾನಿ, 'ಇಬ್ಬರೂ ನನ್ನ ಸ್ಟುಡಿಯೋದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇದು ಎಲ್ಲವೂ ಆರಂಭವಾದ ಸ್ಥಳʼ ಎಂದು ಬರೆದುಕೊಂಡಿದ್ದಾರೆ.  

5 /7

ಕರೀನಾ ಕಪೂರ್ ಜೊತೆ ಡೇಟಿಂಗ್ ಮಾಡುವ ಮೊದಲು ಸೈಫ್ ಅಲಿಖಾನ್ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ 13 ವರ್ಷಗಳ ದಾಂಪತ್ಯದ ನಂತರ, ಸೈಫ್ ಮತ್ತು ಅಮೃತಾ 2004 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು.  

6 /7

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಇದಾದ ಬಳಿಕ 2012ರಲ್ಲಿ ದಂಪತಿ ವಿವಾಹವಾದರು. ಈ  ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಅವರ ಹೆಸರುಗಳು ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್.  

7 /7

ಅಂದಹಾಗೆ ಸೈಫ್‌ ಮತ್ತು ಅಮೃತ ಅವರ ವಿವಾಹ ಸಂದರ್ಭದಲ್ಲಿ ಕರೀನಾ ಕಾಣಿಸಿಕೊಂಡಿದ್ದು, ಸೈಫ್‌ಗೆ ಕಂಗ್ರಾಟ್ಸ್‌ ಅಂಕಲ್‌ ಎಂದು ವಿಶ್‌ ಮಾಡಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಸೈಫ್‌ "ಥ್ಯಾಂಕ್ಯೂ ಮಗಳೇ" ಎಂದು ಹೇಳಿದ್ದರು. ಆದರೆ ಇದೀಗ ಮಗಳೇ ಅಂತ ಕರೆದಿದ್ದವಳನ್ನೇ ಸೈಫ್‌ ಮದುವೆಯಾಗಿದ್ದಾರೆ.