ನಿಧಿ ಅಗರ್ವಾಲ್ ಹಿಂದಿ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2017 ರಲ್ಲಿ, ಟೈಗರ್ ಶ್ರಾಫ್ ರ ಮುನ್ನಾ ಮೈಕೆಲ್ ಚಿತ್ರದ ಮೂಲಕ ಬಾಲಿವುಡ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಯಮಹಾ ಫ್ಯಾಸಿನೊ ಮಿಸ್ ದಿವಾ 2014 ಫೈನಲಿಸ್ಟ್ ಕೂಡ ಆಗಿದ್ದಾರೆ.
ಹಿಂದಿ ಮಾತನಾಡುವ ಮಾರ್ವಾರಿ ಕುಟುಂಬದಲ್ಲಿ ಜನಿಸಿದ ನಿಧಿ ತೆಲುಗು, ತಮಿಳು ಮತ್ತು ಕನ್ನಡವನ್ನು ಮಾತನಾಡಬಲ್ಲರು.ಶಿಕ್ಷಣ ವಿದ್ಯಾಶಿಲ್ಪ್ ಅಕಾಡೆಮಿ ಮತ್ತು ವಿದ್ಯಾ ನಿಕೇತನ್ ಶಾಲೆಯಲ್ಲಾಗಿದೆ. ಅವರು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಬ್ಯಾಲೆ, ಕಥಕ್ ಮತ್ತು ಬೆಲ್ಲಿ ನೃತ್ಯದಲ್ಲಿ ಚೆನ್ನಾಗಿ ತರಬೇತಿ ಪಡೆದಿದ್ದಾರೆ.
Photos:Facebook (Nidhhi Agerwal)