Actress Samantha kidnap : ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ಸಮಂತಾ ಅವರನ್ನು ನಿರ್ಮಾಪಕರೊಬ್ಬರು ಕಿಡ್ನಾಪ್ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ನಟಿಯ ಅಭಿಮಾನಿಗಳು ಆತಂಕಗೊಂಡಿದ್ದಾರೆ.. ಬನ್ನಿ ಈ ಸುದ್ದಿಯ ಅಸಲಿಯತ್ತನ್ನು ನೋಡೋಣ..
ಇಂಡಿಯನ್ ಸ್ಟಾರ್ ಹೀರೋಯಿನ್ ಗಳಲ್ಲಿ ಸಮಂತಾ ಲಕ್ಕಿ ಹೀರೋಯಿನ್ ಅಂತ ಹೆಸರು ಗಳಿಸಿದ್ದಾರೆ. ಹಲವು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸಿದ್ದ ಸಮಂತಾ ಬ್ಲಾಕ್ ಬಸ್ಟರ್ ಸಕ್ಸಸ್ ಪಡೆದಿದ್ದಾರೆ.
ಇತ್ತೀಚಿಗೆ ಕೆಲವು ವೈಯಕ್ತಿಕ ಕಾರಣಗಳಿಂದ ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ಸಮಂತಾ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಈ ನಡುವೆ ಸಮಂತಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಂತಾ ಅವರನ್ನು ದೊಡ್ಡ ನಿರ್ಮಾಪಕರೊಬ್ಬರು ಕಿಡ್ನಾಪ್ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನ್ನಿ ಈ ಸುದ್ದಿಯ ಹಿಂದಿರುವ ಅಸಲಿ ವಿಚಾರವನ್ನು ತಿಳಿಯೋಣ..
ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದ ಚಿತ್ರ ರಾಮಯ್ಯ ವಸ್ತಾವಯ್ಯ.. ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಶ್ರುತಿ ಹಾಸನ್ ಮತ್ತು ಸಮಂತಾ ನಟಿಸಿದ್ದಾರೆ..
ಈ ಚಿತ್ರದ ಶೂಟಿಂಗ್ ವೇಳೆ ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ.. ಸಮಂತಾ ಅವರನ್ನು ಕಿಡ್ನಾಪ್ ಮಾಡಿ ಕೆಲವು ದಿನಗಳ ಕಾಲ ಅವರ ಫಾರ್ಮ್ ಹೌಸ್ ನಲ್ಲಿ ಬೀಗ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಆದರೆ ಸಮಂತಾ ಅವರನ್ನು ಹಾಗೆ ಬಂಧಿಸಲು ಕಾರಣ ಏನು ಎಂಬ ವಿಚಾರವನ್ನು ನೋಡುವುದಾದರೆ.. ಟಾಲಿವುಡ್ ನ ಎಲ್ಲಾ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲೂ ಸಮಂತಾ ನಟಿಸಿದ್ದಾರೆ. ಒಂದು ಸಮಯದಲ್ಲಿ ಸ್ಯಾಮ್ ಸಿನಿಮಾ ಬೇಡ ಎನ್ನುತ್ತಿದ್ದರಿಂದ ಈ ರೀತಿ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಸಮಂತಾ ಅವರನ್ನು ಆ ದೊಡ್ಡ ನಿರ್ಮಾಪಕ ಕಿಡ್ನಾಪ್ ಮಾಡಿದ್ದಾರೆ ಎಂಬ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ. ಆದರೆ ಇದೀಗ ಮತ್ತೊಮ್ಮೆ ಈ ವಿಷಯ ಮುನ್ನೆಲೆಗೆ ಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಮೇಲಾಗಿ ಕಿಡ್ನಾಪ್ ಮಾಡಿದ ನಿರ್ಮಾಪಕರ ಮಗ ಕೂಡ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿದ್ದಾರಂತೆ. ಅಲ್ಲದೆ, ಆ ಸಮಯದಲ್ಲಿ ಸಮಂತಾ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರಿಂದ ಈ ವದಂತಿಗಳು ನಿಜವೆಂದು ಅನೇಕ ನೆಟಿಜನ್‌ಗಳು ನಂಬಿದ್ದರು.. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.. ಇದೊಂದು ಸುಳ್ಳು ಸುದ್ದಿ... ಯಾರೂ ಇದನ್ನು ನಂಬಬಾರದು..