ಬೆಂಗಳೂರು: ಇತ್ತೀಚಿಗೆ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕದಲ್ಲಿ ಪರಿಶುದ್ದ ವ್ಯಕ್ತಿಯನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಸಿದ್ದರಾಮಯ್ಯ ಮೋದಿಗೆ ಸವಾಲು ಎಸೆದಿದ್ದಾರೆ.
I am glad PM @narendramodi is talking about corruption. I now invite him to #WalktheTalk . For a start can you
1. Appoint Lok Pal
2. Investigate #JudgeLoya ‘s death
3. Investigate the astronomical rise of #Jayshah
4. Appoint an untainted person as your CM candidate ?— Siddaramaiah (@siddaramaiah) February 6, 2018
ಈ ಕುರಿತಾಗಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರ ಕರ್ನಾಟಕದಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಯಿಸುತ್ತಾ "ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಕುರಿತಾಗಿ ಮಾತನಾಡುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ, ಆದ್ದರಿಂದ ಈಗ ಅವರನ್ನು ನಾನು ನುಡಿದಂತೆ ನಡೆಯಲು ಆಹ್ವಾನಿಸುತ್ತೇನೆ.ಅದಕ್ಕೆ ಪ್ರಾರಂಭಿಕವಾಗಿ ನೀವು..
* ಲೋಕಪಾಲರನ್ನು ನೇಮಿಸುತ್ತಿರಾ
* ನ್ಯಾಯಮೂರ್ತಿ ಲೋಯಾ ಸಾವಿನ ತನಿಖೆ
* ಜಯ ಶಾರವರ ಆಸ್ತಿಯಲ್ಲಿ ಗಣನೀಯ ಪ್ರಮಾಣದ ಏರಿಕೆಯಲ್ಲಿನ ತನಿಖೆ
* ಪರಿಶುದ್ದ ವ್ಯಕ್ತಿಯನ್ನು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಕ ಮಾಡುತ್ತೀರಾ...?
ಎಂದು ಪ್ರಧಾನಿ ಮೋದಿಯವರಿಗೆ ಸಿದ್ದರಾಮಯ್ಯ ನೇರ ಸವಾಲನ್ನು ಎಸೆದಿದ್ದಾರೆ.