ಈ ಮೋದಿ ಈಗ ಭಾರತ ಎರಡನೇಯ ಅತಿ ಪ್ರಸಿದ್ದ ಮಿಸ್ಟರ್ ಎನ್.ಮೋದಿ. ಹೌದು, ಹಾಗಂತ ಈತನ ಕುರಿತಾಗಿ ವರ್ಣನೆ ಮಾಡಿದ್ದು ಬಿಬಿಸಿ ಸುದ್ದಿ ವಾಹಿನಿ. ಇವರು ಮೂಲತವಾಗಿ ಬಾಲಿವುಡ್ ಮತ್ತು ಹಾಲಿವುಡ್ ನಟ ನಟಿಯರಿಗೆ ವಜ್ರ ಮತ್ತು ಆಭರಣಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ.,ಆದರೆ ಈಗ ಏಕಾಏಕಿ ಇತ ಸುದ್ದಿಯಾಗುತ್ತಿರುವುದು ಬೇರೆ ಕಾರಣಕ್ಕಾಗಿ,ಹಾಗಾದ್ರೆ ಅದೇನಂತಿರಾ? ಇಲ್ಲಿ ಓದಿ..
ಕಳೆದ ತಿಂಗಳಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮೋದಿಯು 2.8 ಬಿಲಿಯನ್ ರೂಗಳಷ್ಟು ಹಣವನ್ನು ವಂಚಿಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ. ಈಗ ಮತ್ತೆ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ 1.8 ಬಿಲಿಯನ್ ಡಾಲರ್ ಹಣವನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆ ಮೂಲಕ ಸಾರ್ವಜನಿಕ ಬ್ಯಾಂಕಿನಲ್ಲಿ ಇತ್ತೀಚಿಗೆ ಆದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದೆ.
ವಜ್ರ ವ್ಯಾಪಾರದ ಕುಟುಂಬದಲ್ಲಿ ಜನಿಸಿದ ನಿರವ್ ಮೋದಿ ಫೈರ್ ಸ್ಟಾರ್ ಎನ್ನುವ ವಜ್ರದ ಕಂಪನಿಯನ್ನು ಸುಮಾರು 20 ವರ್ಷಗಳ ಹಿಂದೆ ಸ್ಥಾಪಿಸಿದರು. ನಂತರ 2010 ರಲ್ಲಿ ತಮ್ಮದೇ ಹೆಸರಿನ ವಜ್ರದ ವ್ಯಾಪಾರಕ್ಕೆ ಚಾಲನೆ ನೀಡಿ ಅತಿ ಕಡಿಮೆ ಅವಧಿಯಲ್ಲಿ ಅವರು ಈ ವ್ಯಾಪಾರದಲ್ಲಿ ತಮ್ಮ ಬ್ರ್ಯಾಂಡ್ ಸೃಷ್ಟಿಸಿದರು. ಅದರ ಭಾಗವಾಗಿ ಫೋರ್ಬ್ಸ್ ಇವರನ್ನು ಭಾರತದ 84 ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಘೋಷಣೆ ಮಾಡಿದೆ.ಇವರ ವಜ್ರದ ವಿನ್ಯಾಸಗಳನ್ನು ಕೇಟ್ ವಿನ್ಸ್ಲೆಟ್ ಮತ್ತು ರೋಸಿ ಹಂಟಿಂಗ್ಟನ್-ವೈಟ್ಲೆರವರು ಹಾಲಿವುಡ್ ನ ರೆಡ್ ಕಾರ್ಪೆಟ್ ನಲ್ಲಿ ಧರಿಸುವ ಮೂಲಕ ಮೋದಿ ಕಂಪನಿಗೆ ಜಾಗತಿಕವಾಗಿಯೂ ಕೂಡಾ ಮನ್ನಣೆ ದೊರೆತಿದೆ.
ಭಾರತದಲ್ಲಿ ಪ್ರಿಯಾಂಕಾ ಚೋಪ್ರಾ ರವರು ನೀರವ್ ಮೋದಿ ಬ್ರ್ಯಾಂಡ ಅಂಬಾಸಿಡರ್ ಆಗಿದ್ದಾರೆ. ಈಗಲೂ ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಅವಳ ಚಿತ್ರವನ್ನು ಹೊಂದಿರುವ ಜಾಹೀರಾತು ಫಲಕಗಳು ರಾರಾಜಿಸುತ್ತವೆ.