ಮಹಿಳೆಯರಿಗಾಗಿ ವಿಶೇಷ ಬ್ಯಾಂಕ್ ಖಾತೆಯನ್ನು ಪರಿಚಯಿಸಿದೆ ಈ Bank, ಬಡ್ಡಿ ಎಷ್ಟು ಸಿಗಲಿದೆ ಗೊತ್ತಾ?

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್  (Equitas Small Finance Bank) ಮಹಿಳೆಯರಿಗಾಗಿ ಮಾತ್ರ ವಿಶೇಷ ಉಳಿತಾಯ ಖಾತೆ (Unique Savings Account)ಯನ್ನು ಪ್ರಾರಂಭಿಸಿದೆ, ಅದರ ಮೇಲೆ ಮಹಿಳೆಯರಿಗೆ ಶೇಕಡಾ 7 ರಷ್ಟು ಬಡ್ಡಿ ನೀಡಲಾಗುವುದು.

Last Updated : Nov 17, 2020, 04:07 PM IST
  • ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವತಿಯಿಂದ ಮಹಿಳೆಯರಿಗಾಗಿ ವಿಶೇಷ ಉಳಿತಾಯ ಖಾತೆ.
  • ಇವಾ ಸೇವಿಂಗ್ಸ್ ಅಕೌಂಟ್ ಖಾತೆಯ ಮೇಲೆ ಶೇ.7ರಷ್ಟು ಬಡ್ಡಿ ನೀಡುವುದಾಗಿ ಹೇಳಿದ ಬ್ಯಾಂಕ್.
  • ಖ್ಯಾತ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಈ ಉತ್ಪನ್ನದ ಬ್ರಾಂಡ್ ರಾಯಭಾರಿಯಾಗಿದ್ದಾರೆ.
ಮಹಿಳೆಯರಿಗಾಗಿ ವಿಶೇಷ ಬ್ಯಾಂಕ್ ಖಾತೆಯನ್ನು ಪರಿಚಯಿಸಿದೆ ಈ Bank, ಬಡ್ಡಿ ಎಷ್ಟು ಸಿಗಲಿದೆ ಗೊತ್ತಾ? title=

ನವದೆಹಲಿ: ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್  (Equitas Small Finance Bank) ಮಹಿಳೆಯರಿಗಾಗಿ ಮಾತ್ರ ವಿಶೇಷ ಉಳಿತಾಯ ಖಾತೆ (Unique Savings Account)ಯನ್ನು ಪ್ರಾರಂಭಿಸಿದೆ, ಅದರ ಮೇಲೆ ಮಹಿಳೆಯರಿಗೆ ಶೇಕಡಾ 7 ರಷ್ಟು ಬಡ್ಡಿ ನೀಡಲಾಗುವುದು ಎಂದು ಹೇಳಿದೆ. ಈ ಉಳಿತಾಯ ಖಾತೆಗೆ 'ಇವಾ ಸೇವಿಂಗ್ಸ್ ಅಕೌಂಟ್ (Eva Savings Account) ಎಂದು ಹೆಸರಿಡಲಾಗಿದೆ.  ಇದಕ್ಕಾಗಿ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ (Smriti Mandhana) ಅವರನ್ನು ಬ್ಯಾಂಕ್ ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿದೆ.

ಇದನ್ನು ಓದಿ- #AskSmriti Session : ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಏನ್ ಹೇಳಿದ್ರು ಸ್ಮೃತಿ ಮಂಧನಾ?

Eva Savings Account ನಲ್ಲಿ ಈ ಸೌಕರ್ಯಗಳು ಸಿಗಲಿವೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 'ಇವಾ ಎಲ್ಲಾ ಮಹಿಳೆಯರಿಗಾಗಿ ಆಗಿದೆ. ಸಂಬಳ / ಗೃಹಿಣಿಯರು / ಉದ್ಯಮಿಗಳು / ಹಿರಿಯ ನಾಗರಿಕರು / ಟ್ರಾನ್ಸ್‌ವುಮೆನ್ ಮತ್ತು ಅನಿವಾಸಿ ಮಹಿಳೆಯರು ಎಲ್ಲರೂ ಇದರಿಂದ ಪ್ರಯೋಜನ ಪಡೆಯಬಹುದು. ಬ್ಯಾಂಕ್ ಪ್ರಕಾರ, 7% ಬಡ್ಡಿದರದ ಜೊತೆಗೆ, ಈ ಉಳಿತಾಯ ಖಾತೆಯು ಉಚಿತ ಆರೋಗ್ಯ ತಪಾಸಣೆ ಮತ್ತು ಮಹಿಳಾ ವೈದ್ಯರು, ಸ್ತ್ರೀರೋಗತಜ್ಞರು ಮತ್ತು ಮನೋವೈದ್ಯರೊಂದಿಗೆ ಅನಿಯಮಿತ ಟೆಲಿ ಸಮಾಲೋಚನೆಯನ್ನು ಸಹ ಒದಗಿಸುತ್ತದೆ.' ಎಂದು ಹೇಳಿದೆ.

ಇದನ್ನು ಓದಿ- ಬಳಕೆಯಲ್ಲಿ ಇರದ ನಿಮ್ಮ Bank Account ಅನ್ನು ಶೀಘ್ರವೆ ಬಂದ್ ಮಾಡಿ... ಇಲ್ಲದಿದ್ದರೆ ...!

ಯಾವುದೇ ರೀತಿಯ ನಿರ್ವಹಣಾ ಶುಲ್ಕ ಇಲ್ಲ
ಈ ಬ್ಯಾಂಕ್ ಖಾತೆ ಲಾಕರ್‌ಗಳಿಗೆ 25 ರಿಂದ 50 ಪ್ರತಿಶತದಷ್ಟು ರಿಯಾಯಿತಿ ಸಹ ನೀಡುತ್ತದೆ, ಜೊತೆಗೆ ಮಹಿಳೆಯರಿಗೆ ಚಿನ್ನದ ಸಾಲದ ಬಡ್ಡಿದರ ಕಡಿತ  ಮತ್ತು ರಿಯಾಯಿತಿಯನ್ನು ಸಹ ನೀಡುತ್ತದೆ. ಈ ಖಾತೆಗೆ ನಿರ್ವಹಣಾ ಶುಲ್ಕವೂ ಇಲ್ಲ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ 'ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಎಲ್ಲ ಅಂಶಗಳಲ್ಲೂ ಭಾರತೀಯ ಮಹಿಳೆಯರ ಯೋಗಕ್ಷೇಮವನ್ನು ಪರಿಹರಿಸಲು ಪ್ರಯತ್ನಿಸುವ ಇದು ಒಂದು  ವಿಶಿಷ್ಟ ಉಳಿತಾಯ ಖಾತೆಯಾಗಿದೆ' ಎಂದು ಹೇಳಿಕೊಂಡಿದೆ.

ಇದನ್ನು ಓದಿ- ನಿಮ್ಮ Aadhaar ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ? ಇಲ್ಲವೇ? ಎಂದು ತಿಳಿಯಿರಿ

ಸ್ಮೃತಿ ಮಂಧಾನ ಬ್ರಾಂಡ್ ರಾಯಭಾರಿ
ಈ ಕುರಿತು ಹೇಳಿಕೆ ನೀಡಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ಕಂಟ್ರಿ ಹೆಡ್ (ಶಾಖೆ ಬ್ಯಾಂಕಿಂಗ್, ಹೊಣೆಗಾರಿಕೆಗಳು, ಉತ್ಪನ್ನ ಮತ್ತು ಸಂಪತ್ತು) ಮುರಳಿ ವೈದ್ಯನಾಥನ್, “ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜನರನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಕೆಲಸವನ್ನು ಮಾಡಿದೆ. ಬ್ಯಾಂಕ್ ತನ್ನ ಉತ್ಪನ್ನಗಳ ಮೂಲಕ ಮಹಿಳೆಯರಿಗೆ ತಮ್ಮ ಹಣಕಾಸಿನ ನಿರ್ಧಾರಗಳನ್ನು ತಿಳಿಸಲು, ತೊಡಗಿಸಿಕೊಳ್ಳಲು ಮತ್ತು ಸ್ವತಂತ್ರವಾಗಿರಲು ಅಧಿಕಾರ ನೀಡಿದೆ" ಎಂದಿದ್ದಾರೆ.

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಈ ಉತ್ಪನ್ನದ  ಪ್ರಚಾರಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಈ ಕುರಿತು ಮಾತನಾಡಿರುವ ಮಂಧಾನ, 'ಸಮಾಜದ ಎಲ್ಲಾ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಈ ಅಭಿಯಾನದೊಂದಿಗೆ ನಾನು ಸಂಬಂಧ ಹೊಂದಿದ್ದೇನೆ ಎಂಬುದು ನನಗೆ ತುಂಬಾ ಸಂತೋಷ ತಂದಿದೆ" ಎಂದು ಹೇಳಿದ್ದಾರೆ.

Trending News