ಫಿರೋಜ್ ಶಾ ಕೋಟ್ಲಾದಲ್ಲಿ ಅರುಣ್ ಜೈಟ್ಲಿ ಪ್ರತಿಮೆ, ಅಮಿತ್ ಶಾ ಹೇಳಿದ್ದೇನು?

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿಯ ಪ್ರತಿಮೆಯನ್ನು ಅನಾವರಣಗೊಳಿಸಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ 'ಕ್ರಿಕೆಟ್‌ನಲ್ಲಿ ಎರಡು ರೀತಿಯ ಜನರಿದ್ದಾರೆ' ಎಂದು ಹೇಳುವ ಮೂಲಕ ಇಂದು ಬಿಶನ್ ಸಿಂಗ್ ಬೇಡಿ ಅವರ ವಿವಾದವನ್ನು ಅಲ್ಲಗಳೆದಿದ್ದಾರೆ.

Last Updated : Dec 28, 2020, 08:40 PM IST
ಫಿರೋಜ್ ಶಾ ಕೋಟ್ಲಾದಲ್ಲಿ ಅರುಣ್ ಜೈಟ್ಲಿ ಪ್ರತಿಮೆ, ಅಮಿತ್ ಶಾ ಹೇಳಿದ್ದೇನು? title=
file photo

ನವದೆಹಲಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿಯ ಪ್ರತಿಮೆಯನ್ನು ಅನಾವರಣಗೊಳಿಸಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ 'ಕ್ರಿಕೆಟ್‌ನಲ್ಲಿ ಎರಡು ರೀತಿಯ ಜನರಿದ್ದಾರೆ' ಎಂದು ಹೇಳುವ ಮೂಲಕ ಇಂದು ಬಿಶನ್ ಸಿಂಗ್ ಬೇಡಿ ಅವರ ವಿವಾದವನ್ನು ಅಲ್ಲಗಳೆದಿದ್ದಾರೆ.

'ಒಬ್ಬರು ಆಡುವ ಜನರು. ಎರಡನೆಯವರು ಕ್ರಿಕೆಟ್ ಆಡುವ ವಾತಾವರಣವನ್ನು ರೂಪಿಸುವ ಜನರು. ಅವರ ಕೊಡುಗೆ ಕೂಡ ಸಾಕಷ್ಟು ಇದೆ. ಅದಕ್ಕಾಗಿ ನಾವು ಪ್ರತಿಮೆಯನ್ನು ಅನಾವರಣಗೊಳಿಸುತ್ತಿದ್ದೇವೆ" ಎಂದು ಅರುಣ್ ಜೇಟ್ಲಿಯ ಜಯಂತಿಯಂದು ಪ್ರತಿಮೆಯನ್ನು ಅನಾವರಣಗೊಳಿಸುವಾಗ ಶಾ ಹೇಳಿದರು.

ಕೇಂದ್ರದ ಮಾಜಿ ಸಚಿವ ಮತ್ತು ಡಿಡಿಸಿಎ ಮುಖ್ಯಸ್ಥರಾಗಿದ್ದ ಅರುಣ್ ಜೈಟ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ನಿಧನ ಹೊಂದಿದ್ದರು. ಆದರೆ ಅವರ ಪ್ರತಿಮೆಯನ್ನು ದೆಹಲಿಯ ಪ್ರಧಾನ ಕ್ರಿಕೆಟ್ ಮೈದಾನದಲ್ಲಿ ಅನಾವರಣಗೊಳಿಸುವ ವಿಚಾರವಾಗಿ ಸಾಕಷ್ಟು ವಿರೋಧವಾಗಿತ್ತು.

ಕೋಟ್ಲಾದಲ್ಲಿ ಅರುಣ್ ಜೈಟ್ಲಿ ಮೂರ್ತಿ ಸ್ಥಾಪನೆ ವಿಚಾರ, ಬಿಷನ್ ಸಿಂಗ್ ಬೇಡಿ ರಾಜೀನಾಮೆ

ಅರುಣ್ ಜೇಟ್ಲಿಯವರ ಮಗ ರೋಹನ್ ಜೇಟ್ಲಿಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನು ತ್ಯಜಿಸಿ, 2017 ರಲ್ಲಿ ತಮ್ಮ ಹೆಸರಿನ ಪ್ರೇಕ್ಷಕರ ಸ್ಟಾಂಡ್ ನ್ನುತೆಗೆದುಹಾಕುವಂತೆ ಕೇಳಿಕೊಂಡರು.ಡಿಡಿಸಿಎ ಸಂಸ್ಕೃತಿಯನ್ನು ಖಂಡಿಸಿ, ಅವರು ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಾರೆ ಮತ್ತು "ನಿರ್ವಾಹಕರನ್ನು ಕ್ರಿಕೆಟಿಗರಿಗಿಂತ ಮುಂದಿಡುತ್ತಾರೆ" ಎಂದು ಬೇಡಿ ಬರೆದಿದ್ದರು.

ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಮಿತ್ ಶಾ "ಐಪಿಎಲ್ ಅನ್ನು ಪರಿಗಣಿಸಿದಾಗ, ನನ್ನಂತಹ ಜನರು ದೂರದಿಂದ ನೋಡುತ್ತಿದ್ದರು. ನಿಯಮಿತ ಪಂದ್ಯಗಳು, ಕಾನೂನು ಚೌಕಟ್ಟು ಇತ್ಯಾದಿಗಳ ಬಗ್ಗೆ ನಮ್ಮ ಮನಸ್ಸಿನಲ್ಲಿ ಬಹಳಷ್ಟು ಪ್ರಶ್ನೆಗಳು ಇದ್ದವು ... ನಾನು ಜೇಟ್ಲಿಯೊಂದಿಗೆ ಮಾತನಾಡುತ್ತಿದ್ದೆ. ಅವರು ಇದಕ್ಕಾಗಿ ಎಲ್ಲ ಉತ್ತರಗಳನ್ನು ಹೊಂದಿದ್ದರು' ಎಂದು ಶಾ ಹೇಳಿದರು.
 

Trending News