ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಅಹಿಂದ ವರ್ಗ ನೆನಪಾಗುವುದೇಕೆ? : ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಅಹಿಂದ ವರ್ಗ ನೆನಪಾಗುವುದೇಕೆ? ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ  

Written by - Ranjitha R K | Last Updated : Feb 11, 2021, 07:05 PM IST
  • ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಅಸ್ತ್ರದ ಮೊರೆ - ಬಿಜೆಪಿ
  • ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವವರು ಜಾತ್ಯಾತೀತರು ಹೇಗಾಗುತ್ತಾರೆ? ಎಂದು ಪ್ರಶ್ನಿಸಿದ ಬಿಜೆಪಿ
  • ಅಧಿಕಾರ ಇಲ್ಲದಾಗಲೆಲ್ಲ ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ನೆನಪಾಗುತ್ತದೆ - ಬಿಜೆಪಿ
ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಅಹಿಂದ ವರ್ಗ ನೆನಪಾಗುವುದೇಕೆ? : ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ title=
ಬಿಜೆಪಿ ಸರಣಿ ಟ್ವೀಟ್ (file photo)

ಬೆಂಗಳೂರು : ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಅಹಿಂದ ವರ್ಗ ನೆನಪಾಗುವುದೇಕೆ? ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಬಿಜೆಪಿ ಪ್ರಶ್ನಿಸಿದೆ. ಅಧಿಕಾರದಲ್ಲಿದ್ದಾಗ ದಲಿತರ, ಹಿಂದುಳಿದವರ ವಿರೋಧವಿದ್ದಾಗಲೂ ಒಂದು ಸಮುದಾಯವನ್ನು ಓಲೈಸಲು ಟಿಪ್ಪುವಿನ ಜಯಂತಿ ಆಚರಿಸಿದಿರಿ. ಈಗ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಅಸ್ತ್ರದ ಮೊರೆ ಹೋಗಿದ್ದೀರಿ ಎಂದು ಬಿಜೆಪಿ (BJP) ಹೇಳಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ (BJP), ವೀರಶೈವ-ಲಿಂಗಾಯತ‌ ಎಂದು ಸಮಾಜ ಒಡೆಯಲು ಹೋಗಿದ್ದು ನೀವೇ ಅಲ್ವೇ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು (Dalitha) ಎಂಬ ಸಮಾವೇಶ ಮಾಡಿಕೊಂಡು ತಾನು ಜಾತ್ಯಾತೀತ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲು ನಿಮ್ಮ ಮನಸ್ಸು ಒಪ್ಪುತ್ತದೆಯೇ? ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವವರು ಜಾತ್ಯಾತೀತರು ಹೇಗಾಗುತ್ತಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.

 

ಇದನ್ನೂ ಓದಿ : Siddaramaiah: 'ಕುರುಬ ಸಮುದಾಯಕ್ಕೆ ಏಕಾಏಕಿ ಎಸ್‌ಟಿ ಮೀಸಲಾತಿ ಸಿಗಲ್ಲ'

ಅಧಿಕಾರ ಇಲ್ಲದಾಗಲೆಲ್ಲ ಸಿದ್ದರಾಮಯ್ಯ (Siddaramaiah)ಅವರಿಗೆ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ನೆನಪಾಗುತ್ತದೆ. ಅಧಿಕಾರ ಇದ್ದಾಗ ಅಹಿಂದ ವರ್ಗವನ್ನು ದೂರ ಸರಿಸುತ್ತಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಪಸಂಖ್ಯಾತರನ್ನು ಬಿಟ್ಟು, ಹಿಂದುಳಿದವರ ಮತ್ತು ದಲಿತರ ಸಂಘಟನೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಸ್ವಾಭಾವಿಕವಾಗಿ ರಾಜ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಅರ್ಹರಾಗಿದ್ದರೂ, ದಲಿತ ಎಂಬ ಕಾರಣಕ್ಕೆ ಅಡ್ಡಗಾಲು ಹಾಕಿದ್ದು ನೀವೇ ಅಲ್ವೇ ಎಂದು ಬಿಜೆಪಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ. ಅಲ್ಲದೆ, ಈಗ ಹಿಂದ ಸಮಾವೇಶದ ಮೂಲಕ ದಲಿತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ನಾಟಕ ಮಾಡುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕೇಳಿದೆ. 

 

ಇದನ್ನೂ ಓದಿ : H Vishwanath: 'ನಾನು-ಹೊರಟ್ಟಿ ಮಂತ್ರಿಯಾಗಿದ್ದರೆ ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ'

ಅಲ್ಲದೆ, 2013 ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ, ಪರಮೇಶ್ವರ್‌ (Parameshwar) ಅವರನ್ನು ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ದೂರ ಸರಿಸಿದಿರಿ. ಉಪಮುಖ್ಯಮಂತ್ರಿಯಾಗಿಯೂ ಮುಂದುವರೆಯಲು ಬಿಡಲಿಲ್ಲ. ಈಗ ಹಿಂದ ಎಂಬ ನಾಟಕ, ಚೆನ್ನಾಗಿದೆ ಎಂದು ಹೇಳಿ ಲೇವಡಿ ಮಾಡಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News