ಈಗ ಟ್ವಿಟ್ಟರ್ ನಿಂದಲೂ ಹಣ ಸಂಪಾದಿಸಬಹುದು. ಇದಕ್ಕಾಗಿ ಟ್ವಿಟರ್ ತರುತ್ತಿದೆ ಸೂಪರ್ ಫಾಲೋಸ್ ಫೀಚರ್.
ನವದೆಹಲಿ : ಇನ್ನು ಮುಂದೆ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಟ್ವಿಟರ್ನಲ್ಲಿಯೂ (Twitter) ಹಣ ಗಳಿಸುವುದು ಸಾಧ್ಯವಾಗಲಿದೆ. ಟ್ವಿಟರ್ ಈಗ ತನ್ನ ಎಲ್ಲ ಬಳಕೆದಾರರಿಗೆ ಹಣ ಸಂಪಾದನೆಗೆ ಅನುಕೂಲವಾಗುವಂಥಹ ವಿಶೇಷ ಫೀಚರ್ ಅನ್ನು ಪರಿಚಯಿಸುತ್ತಿದೆ. Super Follows Feature ಮೂಲಕ ಪ್ರತೀ ಟ್ವೀಟ್ ನಿಂದ ಹಣ ಸಂಪಾದಿಸಬಹುದಾಗಿದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶೀಘ್ರದಲ್ಲೇ, ಟ್ವಿಟರ್ Super Follows Feature ಅನ್ನುಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ, ನಿಮ್ಮ Extra Content ಗಾಗಿ ನಿಮ್ಮ ಫಾಲೋವರ್ಸ್ ಗಳಿಗೆ ಹಣವನ್ನು ವಿಧಿಸಬಹುದು.
ಟ್ವಿಟ್ಟರ್ ನ ಈ, Super Follows Feature ನಲ್ಲಿ ಬೋನಸ್ ಟ್ವೀಟ್, ಕಮ್ಯನಿಟಿ ಗ್ರೂಪ್ ಎಂಟ್ರಿ ಮತ್ತು ನ್ಯೂಸ್ ಲೆಟರ್ ಗಾಗಿ ಹಣವನ್ನು ಜಾರ್ಜ್ ಮಾಡಬಹುದಾಗಿದೆ.
ಟ್ವಿಟರ್ ಕೂಡಾ ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ಫಾಲೋ ಮಾಡುತ್ತಿದೆ. facebook, youtube ಮತ್ತು github ನಂತಹ ಅಪ್ಲಿಕೇಶನ್ಗಳು ತಮ್ಮ ಬಳಕೆದಾರರಿಗೆ ಹಣಗಳಿಸುವ ಆಯ್ಕೆಯನ್ನು ನೀಡಿದೆ. ಈಗ ಟ್ವಿಟರ್ ಈ ಅನುಕೂಲವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.
ವರದಿಗಳ ಪ್ರಕಾರ, ಈ ಹೊಸ ವೈಶಿಷ್ಟ್ಯಕ್ಕಾಗಿ ಟ್ವಿಟರ್ ಬಳಕೆದಾರರಿಂದ ಕಮಿಷನ್ ತೆಗೆದುಕೊಳ್ಳಬಹುದು. ಆದರೆ, ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಇನ್ನೂ ಬಿಡುಗಡೆಯಾಗಿಲ್ಲ.
ಮಾಹಿತಿಯ ಪ್ರಕಾರ, ಕಂಪನಿಯು 2023 ರ ವೇಳೆಗೆ ತನ್ನ ಗಳಿಕೆಯನ್ನು ದ್ವಿಗುಣಗೊಳಿಸುವ ಇರಾದೆಯನ್ನುಇಟ್ಟುಕೊಂಡಿದೆ. ಈ ಕಾರಣದಿಂದಾಗಿ, ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ಸಹಾ ಹೊಂದಿದೆ.