ಬಾಲಿವುಡ್'ನ ಅತ್ಯಂತ ಯಶಸ್ವಿ ನಟಿಯರಲ್ಲಿ ಅಲಿಯಾ ಭಟ್ ಕೂಡ ಒಬ್ಬರು. ಇಂದು ಈ ನಟಿ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಮಾರ್ಚ್ 15, 1933ರಲ್ಲಿ ಮುಂಬೈನಲ್ಲಿ ಜನಿಸಿದ ಈಕೆ 1999ರಲ್ಲಿ ಬಾಲ ಕಲಾವಿದೆಯಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. 2012ರಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಚಿತ್ರದಲ್ಲಿ ಪ್ರಬುದ್ಧ ನಟಿಯಾಗಿ ಅಭಿನಯಿಸಿದರು.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿಯನ್ನು ಶಾರುಖ್ ಖಾನ್ 'ಅತಿ ವೇಗವಾಗಿ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ ನಟಿ' ಎಂದು ಶ್ಲಾಘಿಸಿದ್ದಾರೆ.
ಶಾದಾರ್ ಚಿತ್ರವನ್ನು ಹೊರತುಪಡಿಸಿದರೆ ಈಕೆ ನಟಿಸಿದ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. 'ಸ್ಟೂಡೆಂಟ್ ಆಫ್ ದ ಇಯರ್' ಚಿತ್ರದಲ್ಲಿ ಅಲಿಯಾ ಮನೋಜ್ಞವಾಗಿ ನಟಿಸಿ ಪ್ರತಿಭಾವಂತೆ ಎಂದು ನಿರೂಪಿಸಿದ್ದರು.
ಈಕೆ ಉತ್ತಮ ನಟಿಯಷ್ಟೇ ಅಲ್ಲ, ಫ್ಯಾಶನಿಸ್ಟ್ ಕೂಡಾ. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಎಲ್ಲರಿಗಿಂತ ವಿಭಿನ್ನವಾಗಿ, ವಿಶೇಷವಾಗಿ ಈಕೆ ಕಾಣಿಸಿಕೊಳ್ಳುತ್ತಾರೆ. ಈಕೆಯ ಉಡುಗೆ ತೊಡುಗೆಗಳೂ ಅಷ್ಟೇ ಆಕರ್ಷಕ.
ಸ್ಟೈಲ್, ಕ್ಲಾಸಿಕ್ ಮತ್ತು ಕಂಫರ್ಟ್ ಔಟ್'ಫಿಟ್ ಗಳಲ್ಲಿ ಸಮತೋಲನ ಸಾಧಿಸುವ ಅತೀ ವಿರಳ ಮಹಿಳೆಯರಲ್ಲಿ ಈಕೆ ಕೂಡ ಒಬ್ಬರು.
ತಮ್ಮ ಅದ್ಭುತ ಅಭಿನಯಕ್ಕಾಗಿ ಹಲವು ಫ್ಲಿಂ ಫೇರ್ ಪ್ರಶಸ್ತಿಗಳು, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಉತ್ತಮ ನಟಿಯೊಂದಿಗೆ ಗಾಯಕಿಯೂ ಆಗಿರುವ ಅಲಿಯಾ, ತನ್ನ 6 ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲ, ಹಲವು ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡುವ ಮೂಲಕ ತಮ್ಮದೇ ಅಭಿಮಾನಿಗಳನ್ನು ಗಳಿಸಿದ್ದಾರೆ.
ಚಿತ್ರರಂಗದಲ್ಲಿ ಈಕೆ ಮತ್ತಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸೋಣ. (All Pics courtesy: India.com)