ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೀರೋನ ಅಗ್ಗದ ಬೈಕು ಬಿಡುಗಡೆ..!

Hero HF 100ರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 8,000 RPM ನಲ್ಲಿ  7.91 bhp  ಮತ್ತು 5000 RPM ನಲ್ಲಿ 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 

Written by - Ranjitha R K | Last Updated : Apr 20, 2021, 07:16 PM IST
  • ಹೀರೋ ಎಚ್‌ಎಫ್ 100 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ
  • ಇದರ ಎಕ್ಸ್‌ ಶೋರೂಂ ಬೆಲೆ 49,400 ರೂ.
  • ಇದು ಹೀರೋದ ಅಗ್ಗದ ಬೈಕು ಎನ್ನಲಾಗಿದೆ
ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೀರೋನ ಅಗ್ಗದ ಬೈಕು ಬಿಡುಗಡೆ..!  title=
ಹೀರೋ ಎಚ್‌ಎಫ್ 100 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ (photo india.com)

ನವದೆಹಲಿ : Hero HF 100 Launched : ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ತನ್ನ ಜನಪ್ರಿಯ ಬೈಕು ಹೀರೋ ಎಚ್‌ಎಫ್ 100 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಶೋರೂಂ ಬೆಲೆ 49,400 ರೂ. ಇದು ಹೀರೋದ ಅಗ್ಗದ ಬೈಕು ಎನ್ನಲಾಗಿದೆ. ಈ ಬೈಕ್ ಕಪ್ಪು ಮತ್ತು ಕೆಂಪು ಬಣ್ಣಗಳ ಮಿಶ್ರಣದಲ್ಲಿ ಮಾತ್ರ ಲಭ್ಯವಿರಲಿದೆ. 

Hero HF 100 Specification: 
Hero HF 100ರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 8,000 RPM ನಲ್ಲಿ  7.91 bhp  ಮತ್ತು 5000 RPM ನಲ್ಲಿ 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ 4 ಸ್ಪೀಡ್ ಗೇರ್‌ಬಾಕ್ಸ್ ಗಳನ್ನು ನೀಡಲಾಗಿದೆ.  ಬೈಕ್‌ನಲ್ಲಿರುವ 130 ಮಿಲಿಮೀಟರ್ ಡ್ರಮ್ ಬ್ರೇಕ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹೈಡ್ರಾಲಿಕ್ ಶಾಕ್ ಅಬ್ ಸರ್ ವರ್ ಈ ಬೈಕ್‌ನ (Bike) ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತವೆ. 

ಇದನ್ನೂ ಓದಿ : ನಿಮ್ಮ Aadhar Card ಕಳೆದುಕೊಂಡಿದ್ದೀರಾ? ಹಾಗಾದ್ರೆ ತಕ್ಷಣವೆ ಈ ರೀತಿ ಲಾಕ್ ಮಾಡಿಸಿ!

ಈ ಬೈಕ್ 110 ಕೆಜಿಯಷ್ಟಿದೆ. ಇದರ ನೋಟ HF Deluxe ಅನ್ನು ಹೋಲುತ್ತದೆ. ಈ ಬೈಕ್‌ನಲ್ಲಿ Hero ನ XSens ಮತ್ತು ಹೀರೋನ ಪೇಟೆಂಟ್ i3s ವ್ಯವಸ್ಥೆಯನ್ನು ನೀಡಲಾಗಿದೆ. ಈ ಕಾರಣಕ್ಕಾಗಿ, ಈ ಬೈಕು ಬಹಳ ಕಡಿಮೆ ಪೆಟ್ರೋಲ್ (Petrol) ಅನ್ನು ಬಳಸುತ್ತದೆ. ದೆಹಲಿಯ ಈ ಬೈಕ್‌ನ ಎಕ್ಸ್‌ಶೋರೂಂ ಬೆಲೆ 49,400 ರೂ. 

ಇದನ್ನೂ ಓದಿ : Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ 20 ಲಕ್ಷ ರೂ. ಪಡೆಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News