US Experts On Covid-19 Origin: 'Corona ಎಲ್ಲಿಂದ ಬಂತು ಬೇಗ ಪತ್ತೆಹಚ್ಚಿ, ಇಲ್ಲದಿದ್ದರೆ ಕೊವಿಡ್-26, ಕೊವಿಡ್-32 ಎದುರಿಸಲು ಸಿದ್ಧರಾಗಿ'

US Experts On Covid-19 Origin: ಭವಿಷ್ಯದಲ್ಲಿ ಮಹಾಮಾರಿಯ (Corona Pandemic) ಅಪಾಯವನ್ನು ತಡೆಗಟ್ಟಲು ಕೊವಿಡ್-19 ಮೂಲ ಕಂಡುಹಿಡಿಯಲು ಚೀನಾ ಸರ್ಕಾರದ ಸಹಕಾರದ ಅವಶ್ಯಕತೆ ಇದೆ ಎಂದು ಅಮೆರಿಕಾದ ಇಬ್ಬರು ತಜ್ಞರು (US Experts On Covid-19 Origin) ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. 

Written by - Nitin Tabib | Last Updated : May 31, 2021, 09:49 PM IST
  • Covid-19 ಮೂಲ ಪತ್ತೆಹಚ್ಚುವುದು ತುಂಬಾ ಮಹತ್ವದ್ದಾಗಿದೆ.
  • ಇಲ್ಲದಿದ್ದರೆ ಭವಿಷ್ಯದಲ್ಲಿ ಕೊವಿಡ್-26 ಅಥವಾ ಕೊವಿಡ್-32 ಅಪಾಯ ಎದುರಾಗುವ ಸಾಧ್ಯತೆ.
  • ಇದಕ್ಕಾಗಿ ಚೀನಾ ಸರ್ಕಾರದ ಬೆಂಬಲದ ಅವಶ್ಯಕತೆ ಇದೆ ಎಂದ US ತಜ್ಞರು.
US Experts On Covid-19 Origin: 'Corona ಎಲ್ಲಿಂದ ಬಂತು ಬೇಗ ಪತ್ತೆಹಚ್ಚಿ, ಇಲ್ಲದಿದ್ದರೆ ಕೊವಿಡ್-26, ಕೊವಿಡ್-32 ಎದುರಿಸಲು ಸಿದ್ಧರಾಗಿ' title=
US Experts On Covid-19 Origin (File Photo)

US Experts On Covid-19 Origin: ಭವಿಷ್ಯದಲ್ಲಿ ಮಹಾಮಾರಿಯ (Corona Pandemic) ಅಪಾಯವನ್ನು ತಡೆಗಟ್ಟಲು ಕೊವಿಡ್-19 ಮೂಲ ಕಂಡುಹಿಡಿಯಲು ಚೀನಾ ಸರ್ಕಾರದ ಸಹಕಾರದ ಅವಶ್ಯಕತೆ ಇದೆ ಎಂದು ಅಮೆರಿಕಾದ ಇಬ್ಬರು ತಜ್ಞರು (US Experts On Covid-19 Origin) ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಸರ್ಕಾರದ ಕಾಲಾವಧಿಯಲ್ಲಿ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (Food And Drugs Administration) ನಲ್ಲಿ ಕಮೀಷನರ್ ಆಗಿದ್ದ ಹಾಗೂ ಫೈಜರ್ ಕಂಪನಿಯ (Pfizer Company) ನಿರ್ದೇಶಕ ಮಂಡಳಿಯಲ್ಲಿ ಒಬ್ಬರಾಗಿರುವ ಸ್ಕಾಟ್ ಗಾಟ್ಲಿಬ್, ಚೀನಾದ ವುಹಾನ್ ಲ್ಯಾಬ್ ನಿಂದ (Wuhan Laboratary) ವೈರಸ್ ಹೊರಹೊಮ್ಮಿರುವ ಥಿಯರಿಯ ಬೆಂಬಲಿಸಿ ಸೂಚನೆಗಳು ಸಿಗುತ್ತಿವೆ ಎಂದಿದ್ದಾರೆ.(coronavirus origin news today)

ಸಿಬಿಎಸ್ ನ್ಯೂಸ್ (CBS News) ಗೆ ನೀಡಲಾಗಿರುವ ಸಂದರ್ಶನದಲ್ಲಿ ಮಾತನಾಡಿರುವ ಗಾಟ್ಲಿಬ್, 'ಈ ಥಿಯರಿಯನ್ನು ಖಂಡಿಸಿ ಚೀನಾ ಇದುವರೆಗೆ ಯಾವುದೇ ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಇನ್ನೊಂದೆಡೆ ವನ್ಯಜೀವಿಗಳಿಂದ ವೈರಸ್ ಬಂದಿರುವ ಕುರಿತು ತನಿಖೆಯಲ್ಲಿ ಯಾವುದೇ ಸಂಕೇತಗಳು ದೊರೆತಿಲ್ಲ" ಎಂದಿದ್ದಾರೆ. ಮತ್ತೊಂದು ಟಿ.ವಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಟೆಕ್ಸಸ್ ಚಿಲ್ಡ್ರನ್ ಹಾಸ್ಪಿಟಲ್ ಸೆಂಟರ್ ಫಾರ್ ವ್ಯಾಕ್ಸಿನ್ ಡೆವಲಪ್ಮೆಂಟ್ ನ ಸಹನಿರ್ದೇಶಕ ಪೀಟರ್ ಹ್ಯೋತ್ಸ್, ವೈರಸ್ ನ ಉತ್ಪತ್ತಿ ಪತ್ತೆಯಾಗದಿದ್ದರೆ, ಭವಿಷ್ಯದಲ್ಲಿ ಮಹಾಮಾರಿಯ ಅಪಾಯ ಹೆಚ್ಚಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ- Coronavirus ಮೂರನೇ ಅಲೆ ಸಾಧ್ಯತೆ ಹೇಗೆ ಕಡಿಮೆಯಾಗಲಿದೆ? ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?

NBC ಚಾನೆಲ್ ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪೀಟರ್, "ಒಂದು ವೇಳೆ ನಾವು ಕೊವಿಡ್-19 (Covid-19) ಮೂಲವನ್ನು ಸರಿಯಾಗಿ ತಿಳಿದುಕೊಳ್ಳದೆ ಹೋದರೆ, ಕೊವಿಡ್-26 (Covid-26)ಅಥವಾ ಕೊವಿಡ್-32 (Covid-32) ಗಳೂ ಕೂಡ ಬರಲಿವೆ" ಎಂದಿದ್ದಾರೆ. ಚೀನಾದ ವುಹಾನ್ ಸೀಫುಡ್ ಮಾರ್ಕೆಟ್ ನಲ್ಲಿ ವೈರಸ್ ದೊರೆತ ಒಂದು ವರ್ಷದ ಬಳಿಕವೂ ಕೂಡ ಇದುವರೆಗೆ ಅದರ ಸರಿಯಾದ ಮೂಲ ಪತ್ತೆಯಾಗಿಲ್ಲ. ಇನ್ನೊಂದೆಡೆ ಕಾಡುಪ್ರಾನಿಯೊಂದರಿಂದ ಈ ವೈರಸ್ ಮನುಷ್ಯರವರೆಗೆ ತಲುಪಿದೆ ಎಂದು ವಿಜ್ಞಾನಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ರಂಪ್ ಸರ್ಕಾರದ (Trump Government) ಕೆಲ ತಜ್ಞರು ಕೂಡ ವೈರಸ್, ಬೈಮಿಸ್ಟೇಕ್ ಚೀನಾದ ವುಹಾನ್ ಲ್ಯಾಬ್ (Wuhan Institute Of Virology) ನಿಂದ ಹೊರಬಂದಿರುವ ಸಾಧ್ಯತೆಯನ್ನು ಕೂಡ ವರ್ತಿಸಿದ್ದಾರೆ. ಇದೀಗ ಟ್ರಂಪ್ ಆಡಳಿತದ (Trump Administration) ವೈಯಿಂದ ಕೂಡ ಇದಕ್ಕೆ ಬೆಂಬಲ ನೀಡಲಾಗುತ್ತಿದೆ (latest update on corona virus origin).

ಇದನ್ನೂ ಓದಿ- MIS-C Affecting Kids Post-Covid-19: Corona ಹಾಗೂ Black Fungus ನಡುವೆಯೇ ಮಕ್ಕಳಲ್ಲಿ ಹರಡುತ್ತಿದೆ ಈ ಕಾಯಿಲೆ

ಈ ಕುರಿತು ಕಳೆದ ಬುಧವಾರ ಹೇಳಿದೆ ನೀಡಿದ ಹಾಲಿ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ವೈರಸ್ ನ ಮೂಲ ಕಂಡುಹಿಡಿಯುವ ಅವಶ್ಯಕತೆ ಇದೆ ಎಂದು ಹೇಳಿ, ಏಜೆನ್ಸಿ ಗಳಿಗೆ ಈ ಕುರಿತು ಪತ್ತೆಹಚ್ಚಿ 90 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇದೆ ವೇಳೆ ವೈರಸ್ ನೈಸರ್ಗಿಕವಾಗಿ ಮನುಷ್ಯರವರೆಗೆ ತಲುಪಿದೆ ಅಥವಾ ವುಹಾನ್ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬುದರ ಕುರಿತು ಅಮೆರಿಕಾದ ಇಂಟೆಲಿಜೆನ್ಸ್ ಏಜೆನ್ಸಿಗಳು ಮಧ್ಯೆ ಮತಭೇದವಿರುವುದನ್ನು ಕೂಡ ಅವರು ಹೇಳಿದ್ದರು (Coronavirus Origin latest news).

ಇದನ್ನೂ ಓದಿ-EPFO Good News: PF ಖಾತೆದಾರರಿಗೊಂದು ಸಂತಸದ ಸುದ್ದಿ, ಎರಡನೇ ಬಾರಿಗೆ ಈ ಅವಕಾಶ ಸಿಗುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News