ಈ ದೇವಾಲಯದ ಛಾವಣಿಯಿಂದ ಬೀಳುವ ನೀರ ಹನಿಗಳ ಬಗ್ಗೆ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದರೆ ಇದುವರೆಗೂ ಈ ರಹಸ್ಯ ರಹಸ್ಯವಾಗಿಯೇ ಉಳಿದಿದೆ.
ಉತ್ತರಪ್ರದೇಶ : ಉತ್ತರಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ಒಂದು ದೇವಾಲಯವಿದೆ. ಇದ್ದಕ್ಕಿದ್ದಂತೆ ಈ ದೇವಾಲಯದ ಛಾವಣಿಯಿಂದ ನೀರು ಬೀಳು ಆರಂಭವಾಗುತ್ತದೆ. ಮಳೆ ಬೀಳುತ್ತಿದ್ದಂತೆ ಮತ್ತೆ ಈ ನೀರ ಹನಿ ನಿಂತು ಬಿಡುತ್ತವೆ. ಈ ದೇವಾಲಯವು ಕಾನ್ಪುರ ಜಿಲ್ಲೆಯ ಭಿತಾರ್ಗಾಂವ್ ಪ್ರದೇಶದಿಂದ ನಿಖರವಾಗಿ ಮೂರು ಕಿಲೋಮೀಟರ್ ದೂರದಲ್ಲಿರುವ ಬೆಹ್ತಾ ಗ್ರಾಮದಲ್ಲಿದೆ. ಈ ಪುರಾತನ ದೇವಾಲಯದಲ್ಲಿ ಜಗನ್ನಾಥನನ್ನು ಪೂಜಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ದೇವಾಲಯದ ಛಾವಣಿಯಿಂದ ಬೀಳುವ ನೀರ ಹನಿಗಳ ಬಗ್ಗೆ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದರೆ ಇದುವರೆಗೂ ಈ ರಹಸ್ಯ ರಹಸ್ಯವಾಗಿಯೇ ಉಳಿದಿದೆ. ನಿಜ ಹೇಳಬೇಕೆಂದರೆ ಶತಮಾನಗಳಿಂದ ಈ ದೇವಾಲಯದಲ್ಲಿ ರಹಸ್ಯ ಅಡಗಿದೆ.
ಈ ದೇವಾಲಯ 5000 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಇಲ್ಲಿ ಭಗವಾನ್ ಜಗನ್ನಾಥ್, ಬಲರಾಮ ಮತ್ತು ಸುಭದ್ರಾ ದೇವಿಯನ್ನು ಪೂಜಿಸಲಾಗುತ್ತದೆ. ಇವುಗಳಲ್ಲದೆ ದೇವಾಲಯದಲ್ಲಿ ಪದ್ಮನಾಭ ವಿಗ್ರಹವನ್ನೂ ಸ್ಥಾಪಿಸಲಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ದೇವಾಲಯದ ಛಾವಣಿಯಿಂದ ಹನಿಗಳು ಬೀಳುತ್ತಿದ್ದಂತೆ ಮುಂಗಾರು ಆಗಮನವಾಗುತ್ತದೆ ಎಂಬ ಸಂದೇಶ ಸಿಗುತ್ತದೆಯಂತೆ. ಈ ದೇವಾಲಯದ ಛಾವಣಿಯಿಂದ ಬೀಳುವ ಹನಿಗಳ ಪ್ರಕಾರವೇ ಮಳೆ ಕೂಡ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಈ ದೇವಾಲಯದ ಗುಮ್ಮಟದಿಂದ ಹನಿಗಳು ಯಾವ ಪ್ರಮಾಣದಲ್ಲಿ ಬೀಳುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಮಳೆಯಾಗುತ್ತದೆಯಂತೆ. ಅಂದರೆ ಗುಮ್ಮಟದಿಂದ ಬೀಳುವ ಹನಿ ಕಡಿಮೆಯಾಗಿದ್ದರೆ, ಮಳೆ ಕಡಿಮೆಯಾಗುತ್ತದೆ ಎಂದರ್ಥ. ಅದೇ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹನಿ ಬೀಳಲು ಶುರು ಮಾಡಿದರೆ, ಆ ವರ್ಷ ಮಳೆ ಕೂಡಾ ಭಾರೀ ಪ್ರಮಾಣದಲ್ಲಿ ಆಗುತ್ತದೆ ಎಂದರ್ಥ. ಇದರ ಪ್ರಕಾರ ಈ ಬಾರಿ ಕಡಿಮೆ ಮಳೆಯಾಗುತ್ತದೆ ಎನ್ನುತ್ತಾರೆ ಈ ದೇವಾಲಯದ ಅರ್ಚಕರು.
ಜಗನ್ನಾಥ ದೇವಾಲಯವು ಪುರಾತತ್ತ್ವ ಇಲಾಖೆಯ ಅಧೀನದಲ್ಲಿದೆ. ಒರಿಸ್ಸಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ ಪ್ರಾರಂಭವಾಗುವಂತೆಯೇ, ಅದೇ ರೀತಿ ರಥಯಾತ್ರೆಯನ್ನು ಇಲ್ಲಿಯೂ ನಡೆಸಲಾಗುತ್ತದೆ. ಕಾನ್ಪುರ ಪುರಾತತ್ವ ಇಲಾಖೆಯ ಅಧಿಕಾರಿಯ ಪ್ರಕಾರ, ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಜೀರ್ಣೋದ್ದಾರಗೊಳಿಸಲಾಗಿತ್ತು.