ನವದೆಹಲಿ: National Covid-19 Vaccination Program - ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವ ಘೋಷಣೆಯನ್ನು ಮಾಡಿದ್ದರು. ಪ್ರಧಾನಿ ಅವರ ಈ ಘೋಷಣೆಯ ಬಳಿಕ ಇದೀಗ ಲಸೀಕಾಕರಣದ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ (Government Of India) ಮೇಲಿದೆ. ಇದಕ್ಕಾಗಿ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ (Health Ministry) ತನ್ನ ಸಿದ್ಧತೆಗಳನ್ನು ಕೂಡ ಆರಂಭಿಸಿದೆ. ಬರುವ ಜೂನ್ 21 ರಂದು, ಅಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು (International Yoga Day 2021) ಈ ರಾಷ್ಟ್ರೀಯ ವ್ಯಾಕ್ಸಿನೆಶನ್ ಅಭಿಯಾನ ಆರಂಭಗೊಳ್ಳಲಿದೆ. ಇದಕ್ಕಾಗಿ ಭಾರಿ ಪ್ರಮಾಣದಲ್ಲಿ ವ್ಯಾಕ್ಸಿನ್ ಗಳಿವೆ ಆರ್ಡರ್ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಘೋಷಣೆಯ ಬಳಿಕ
ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ (Serum Institute Of India) ಕೋವಿಶೀಲ್ಡ್ (Covishield) ನ ಸುಮಾರು 25 ಕೋಟಿ ಪ್ರಮಾಣಗಳನ್ನು ಹಾಗೂ ಭಾರತ್ ಬಯೋಟೆಕ್ (Bharat Biotech) ಗೆ ಸುಮಾರು 19 ಕೋಟಿ Covaxin ಪ್ರಮಾಣಗಳಿಗೆ ಆರ್ಡರ್ ನೀಡಿದೆ. Covid-19 ಲಸಿಕೆಗಳ ಈ 44 ಕೋಟಿ ಪ್ರಮಾಣಗಳು ಇಂದಿನಿಂದ ಡಿಸೆಂಬರ್ 2021ರವರೆಗೆ ಲಭ್ಯವಿರಲಿವೆ.
ಇದಲ್ಲದೆ ಈ ಎರಡೂ ಲಸಿಕೆಗಳ (Covid-19 Vaccine) ಖರೀದಿಗಾಗಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳಿಗೆ ಶೇ.30 ರಷ್ಟು ಹಣವನ್ನು ಅಡ್ವಾನ್ಸ್ ರೂಪದಲ್ಲಿ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ-Good News: Coronavirus Third Wave ಮಕ್ಕಳಿಗೆ ಅಪಾಯಕಾರಿ ಎಂಬ ಸಂಗತಿ ತಪ್ಪು: AIIMS
ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಯೊಬ್ಬರು ಕೇಂದ್ರ ಸರ್ಕಾರ ಈ ವರ್ಷದ ಜನವರಿ 16 ರಿಂದ 'ಸರ್ಕಾರದ ಸಮಗ್ರ ದೃಷ್ಟಿಕೋನ'ದ ಅಡಿ ಜಾರಿಯಲ್ಲಿರುವ ಲಸಿಕಾಕರಣ ಅಭಿಯಾನಕ್ಕಾಗಿ ರಾಜ್ಯಗಳು (States) ಹಾಗೂ ಕೇಂದ್ರಾಡಳಿತ ಪ್ರದೇಶಗಳ(Union Teritories) ಪ್ರಯತ್ನಗಳನ್ನು ಬೆಂಬಲಿಸುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಲಭಿಸಿರುವ ವಿಭಿನ್ನ ಮನವಿಗಳ ಆಧಾರದ ಮೇಲೆ ಲಸಿಕಾಕರಣದ ರಣತಂತ್ರದ ಭಾಗವಾಗಿ ಮೂರನೇ ಹಂತದಲ್ಲಿ18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವಯಸ್ಕರರಿಗೆ ಲಸಿಕಾಕರಣ ಅಭಿಯಾನ ಆರಂಭಿಸಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ-ವ್ಯಾಕ್ಸಿನ್ ಪ್ರೋಗ್ರಾಮ್ ಗಾಗಿ ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿಗಳು, ಜೂನ್ 21ರಿಂದ ಅನ್ವಯ
"ಇದೀಗ ದೇಶಾದ್ಯಂತ ಲಸಿಕಾಕರಣ ಅಭಿಯಾನವನ್ನು ಮತ್ತಷ್ಟು ವ್ಯಾಪಕಗೊಳಿಸುವ ಉದ್ದೇಶದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (Government Health Centres) ಕೊವಿಡ್ ಲಸಿಕೆಯ ಪ್ರಮಾಣವನ್ನು ಉಚಿತವಾಗಿ ಹಾಕಿಸಿಕೊಳ್ಳಬಹುದು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ-Alert! ದೇಶಕ್ಕೆ ಎಂಟ್ರಿ ಕೊಟ್ಟ Coronavirus ಹೊಸ ರೂಪಾಂತರಿ! ಯಾರಿಗೆ ಹೆಚ್ಚು ಅಪಾಯ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.