ಈ ರಾಶಿಯ ಹೆಣ್ಣು ಮಕ್ಕಳ ಮೂಗ ತುದಿಯಲ್ಲಿರುತ್ತದೆಯಂತೆ ಕೋಪ, ಹಠದಿಂದಲೇ ಕೆಲಸ ಸಾಧಿಸಿ ಬಿಡುತ್ತಾರಂತೆ ಇವರು

ಜ್ಯೋತಿಷ್ಯದ ಪ್ರಕಾರ ಈ ರಾಶಿಯ ಹೆಣ್ಣು ಮಕ್ಕಳಿಗೆ ಬಹಳ ಕೋಪ ಬರುತ್ತದೆಯಂತೆ.  ಇವರ ತಮ್ಮ ಕೋಪದ ಸಹಾಯದಿಂದಲೇ ತಮ್ಮ ಕೆಲಸವನ್ನು ಸಾಧಿಸಿಕೊಂಡು ಬಿಡುತ್ತಾರೆ. 

ನವದೆಹಲಿ : ಹೊಸಬರನ್ನು ಭೇಟಿ ಮಾಡುವಾಗ, ಅವರ ಸ್ವಭಾವವು ಶೀಘ್ರದಲ್ಲೇ ಅರಿವಾಗುತ್ತದೆ. ಒಬ್ಬರ ಸ್ವಭಾವ ಅರ್ಥವಾದರೆ ಅವರನ್ನು ನಿಭಾಯಿಸುವುದು ಕೂಡಾ ಸಾಧ್ಯವಾಗುತ್ತದೆ. ಇದಲ್ಲದೆ, ಅವರು ಇಷ್ಟಪಡದ ಕೆಲಸಗಳನ್ನು ಮಾಡುವುದನ್ನು ಸಹ ಇದರಿಂದ ತಪ್ಪಿಸಬಹುದು. ಹಾಗಾದಾಗ ಸಂಬಂಧವು ಚೆನ್ನಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯ ಹೆಣ್ಣು ಮಕ್ಕಳಿಗೆ ಬಹಳ ಕೋಪ ಬರುತ್ತದೆಯಂತೆ.  ಇವರ ತಮ್ಮ ಕೋಪದ ಸಹಾಯದಿಂದಲೇ ತಮ್ಮ ಕೆಲಸವನ್ನು ಸಾಧಿಸಿಕೊಂಡು ಬಿಡುತ್ತಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮೇಷ ರಾಶಿಯ ಹುಡುಗಿಯರು ತುಂಬಾ ಧೈರ್ಯಶಾಲಿಗಳು.. ಆದರೆ ಮಹಾ ಕೋಪವುಳ್ಳವರು.  ಈ ಹುಡುಗಿಯರು ಸಣ್ಣ ಸಣ್ಣ  ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಇದಲ್ಲದೆ, ತಮ್ಮ ಹಟವನ್ನು ಸಾಧಿಸುವುದರಲ್ಲಿಯೂ ಇವರು ಎತ್ತಿದ ಕೈ.  ಏನಾದರು ಕೆಲಸ ಮಾಡಲು ನಿರ್ಧರಿಸಿದರೆ ಅದನ್ನು ಮಾಡಿಯೇ ಮುಗಿಸುತ್ತಾರೆ.    

2 /5

 ವೃಷಭ ರಾಶಿಯ ಹುಡುಗಿಯರು ಹುಟ್ಟಿನಿಂದಲೂ ಹಠಮಾರಿ ಮತ್ತು ಕೋಪಡ ಸ್ವಭಾವದವರಾಗಿರುತ್ತಾರೆ. ಇವರು ಸುಳ್ಳನ್ನು ಎಂದಿಗೂ ಸಹಿಸುವುದಿಲ್ಲ. ಇವರಿಗೆ ಯಾರಾದರು ಮೋಸ ಮಾಡಿದರೆ, ಆ ವ್ಯಕ್ತಿಯನ್ನು ತನ್ನ ಜೀವನದಿಂದ ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಒಂದೊಂದು ಸಲ ಇವರ ಮೊಂಡುತನ ವಿಪರೀತಕ್ಕೆ ಹೋಗುತ್ತದೆ.   

3 /5

ಮಿಥುನ ರಾಶಿಯ ಜನರು ರಾಜತಾಂತ್ರಿಕರು. ಆದ್ದರಿಂದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ಅವರಿಗೆ ತಿಳಿದಿದೆ ಮತ್ತು ಅವರು ವಿರಳವಾಗಿ ಕೋಪಗೊಳ್ಳುತ್ತಾರೆ, ಆದರೆ ಕೋಪಗೊಂಡಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ರಾಶಿಚಕ್ರದ ಹುಡುಗಿಯರು ಕೆಟ್ಟ ವರ್ತನೆಗಳನ್ನು ಸಹಿಸುವುದಿಲ್ಲ

4 /5

ಸಿಂಹ ರಾಶಿಯ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ, ಆದರೆ ಸಂಗಾತಿ ಮೋಸ ಮಾಡಲು ಪ್ರಯತ್ನಿಸಿದರೆ, ಸರಿಯಾಗಿಯೇ ಪಾಠ ಕಲಿಸುತ್ತಾರೆ. ಈ ಹುಡುಗಿಯರು ಸ್ವಾವಲಂಬಿಗಳಾಗಿರುತ್ತಾರೆ. ಅವರ ಹಠದಿಂದಲೇ ಜೀವನದಲ್ಲಿ  ಉತ್ತಮ ಸ್ಥಾನವನ್ನು ಪಡೆಯುತ್ತಾರೆ. 

5 /5

ವೃಶ್ಚಿಕ ರಾಶಿಯ ಹುಡುಗಿಯರು ಕೋಪದಲ್ಲಿ ತಮ್ಮ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಇವರಿಗೆ ಎಷ್ಟು ಬೇಗ ಕೋಪ ಬರುತ್ತದೆಯೋಅಷ್ಟೇ ಬೇಗ ಶಾಂತರಾಗುತ್ತಾರೆ.