ಈ ಸೇವೆಗಳಿಗಾಗಿ ಬ್ಯಾಂಕ್ ಗೆ ಹೋಗುವ ಅಗತ್ಯವಿಲ್ಲ, ಕುಳಿತಲ್ಲೇ ಮುಗಿದು ಬಿಡುತ್ತದೆ ಕೆಲಸ

ಎಸ್‌ಬಿಐ ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಗಾಗಿ ಬ್ಯಾಂಕ್  ಶಾಖೆಗೆ ಹೋಗಬೇಕಾಗಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮನೆಯಿಂದಲೇ  ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಅನೇಕ ಸೇವೆಗಳ ಲಾಭವನ್ನು ಪಡೆಯಬಹುದು.

ನವದೆಹಲಿ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಾಗಿದ್ದರೆ, ಇದು ನಿಮಗೆ ಉಪಯುಕ್ತ ಸುದ್ದಿ. ಈಗ ಎಲ್ಲರೂ  ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸಹ ಬಳಸುತ್ತಾರೆ. ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಸಹ ಬಳಸುತ್ತಾರೆ. ಸಾಮಾನ್ಯವಾಗಿ, ಬ್ಯಾಂಕಿಗೆ ಸಂಬಂಧಿಸಿದ ಕೆಲವು ಕೆಲಸಗಳಿಗಾಗಿ, ನೀವು ಶಾಖೆಗೆ ಭೇಟಿ ನೀಡಬೇಕಾಗುತ್ತದೆ, ಆದರೆ ಎಸ್‌ಬಿಐ ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಸೇವೆಗಾಗಿ ಬ್ಯಾಂಕ್  ಶಾಖೆಗೆ ಹೋಗಬೇಕಾಗಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮನೆಯಿಂದಲೇ  ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಅನೇಕ ಸೇವೆಗಳ ಲಾಭವನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್ ಕಳೆದುಹೋದರೆ, ನೀವು ಅದನ್ನು ತಕ್ಷಣ ಬ್ಲಾಕ್ ಮಾಡಬೇಕು.  Onlinesbi.com ಗೆ ಲಾಗ್ ಇನ್ ಮಾಡುವ ಮೂಲಕ  ಮನೆಯಿಂದಲೇ ಈ ಕೆಲಸವನ್ನು ಪೂರ್ಣಗೊಳಿಸಬಹುದು.  

2 /5

.ಡೆಬಿಟ್ ಕಾರ್ಡ್‌ನ ಪಿನ್ ಅನ್ನು ಕಾಲಕಾಲಕ್ಕೆ ಬದಲಾಯಿಸುವಂತೆ ಬ್ಯಾಂಕುಗಳು ಗ್ರಾಹಕರಿಗೆ ಸಲಹೆ ನೀಡುತ್ತವೆ. ಶಾಖೆಗೆ ಭೇಟಿ ನೀಡದೆ  PIN onlinesbi.com ಮೂಲಕ ಪಿನ್ಫ್ ಅನ್ನು ಜನರೇಟ್ ಮಾಡಿಕೊಳ್ಳಬಹುದು.   

3 /5

 ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಅಂದರೆ ಆನ್‌ಲೈನ್ ಎಸ್‌ಬಿಐ ಪ್ಲಾಟ್‌ಫಾರ್ಮ್‌ಮೂಲಕ  ಹೊಸ ಡೆಬಿಟ್ ಕಾರ್ಡ್ ಗಾಗಿ  ರಿಕ್ವೆಸ್ಟ್ ಸಲ್ಲಿಸಬಹುದು. 

4 /5

 ಇತ್ತೀಚೆಗೆ ಎಸ್‌ಬಿಐ ಡೆಬಿಟ್ ಕಾರ್ಡ್ ಪಡೆದಿದ್ದರೆ, ಅದನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಆಕ್ಟಿವೇಟ್ ಮಾಡಿಕೊಳ್ಳಬಹುದು. ಅದಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗುವ ಅಗತ್ಯವಿಲ್ಲ. 

5 /5

ನಿಮ್ಮ ಡೆಬಿಟ್ ಕಾರ್ಡ್‌ನ ಮಿತಿ ಅಥವಾ ಬಳಕೆಯ ವಿಧಾನವನ್ನು ಬದಲಾಯಿಸಲು ಬಯಸಿದರೆ, ನೀವು ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಈ ಕೆಲಸವನ್ನು ಮಾಡಬಹುದು.