Ola Electric Scooter Booking: ಈಗ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ವ್ಯಾಮೋಹ ವೇಗವಾಗಿ ಹೆಚ್ಚುತ್ತಿದೆ. ಈಗ ಓಲಾ ಕೂಡ ಈ ಓಟದಲ್ಲಿ ಜಿಗಿದಿದ್ದಾರೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric Scooter) ಮಾರಾಟ ಮಾಡಲು ಪ್ರಾರಂಭಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಭಾರತದಲ್ಲಿ ಬುಕಿಂಗ್ ಪ್ರಾರಂಭವಾಗಿದೆ. ಕಂಪನಿಯ ಸಂಸ್ಥಾಪಕ ಭಾವೀಶ್ ಅಗರ್‌ವಾಲ್ ಸ್ವತಃ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ನೀಡಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola Electric Scooter) ಅನ್ನು ಕೇವಲ 499 ರೂ.ಗಳಿಗೆ ಕಾಯ್ದಿರಿಸಬಹುದು. ಈ ಮೊತ್ತವನ್ನು ಸಹ ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಇಷ್ಟು ಕಡಿಮೆ ಮೊತ್ತಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ನ ಬುಕಿಂಗ್ ಲಭ್ಯವಾಗುತ್ತಿರುವುದು ಬಹುಶಃ ಇದೇ ಮೊದಲು. ಕಂಪನಿಯು ಮೊದಲು ಬುಕಿಂಗ್ ಮಾಡುವವರಿಗೆ ಆದ್ಯತೆ ನೀಡಲಿದೆ. ಎಂದರೆ ಮೊದಲು ಬುಕ್ ಮಾಡುವವರಿಗೆ ಮೊದಲು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಇತ್ತೀಚೆಗೆ, ಈ ಸ್ಕೂಟರ್ ಅನ್ನು ಪರೀಕ್ಷೆಯ ಸಮಯದಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ಭಾವೀಶ್ ಅಗರ್‌ವಾಲ್ ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಟೆಸ್ಟ್ ಡ್ರೈವ್ ಮಾಡಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುವ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ- Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್
ತಮಿಳುನಾಡಿನಲ್ಲಿ ನಿರ್ಮಿಸಲಾಗುತ್ತಿರುವ ಫ್ಯೂಚರ್‌ಫ್ಯಾಕ್ಟರಿಯಲ್ಲಿ ಓಲಾ ಸ್ಕೂಟರ್ (Ola Scooter) ಸಿದ್ಧವಾಗಲಿದೆ. ಕಂಪನಿಯ ಈ ಕಾರ್ಖಾನೆ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ 2-ವೀಲರ್ ಕಾರ್ಖಾನೆಯಾಗಿದೆ. ಇದು ವಾರ್ಷಿಕವಾಗಿ 10 ಮಿಲಿಯನ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಮೊದಲ ಹಂತದಲ್ಲಿ ಈ ಕಾರ್ಖಾನೆಯಲ್ಲಿ ಪ್ರತಿ ವರ್ಷ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಾಗುವುದು. ಇತ್ತೀಚೆಗೆ, ಕಂಪನಿಯು ತನ್ನ ಮೊದಲ ಎರಡು ಮಿಲಿಯನ್ ಯುನಿಟ್ ವಾರ್ಷಿಕ ಸಾಮರ್ಥ್ಯದ ಹಂತವು ಬಹುತೇಕ ಪೂರ್ಣಗೊಂಡಿದೆ ಎಂದು ದೃಢಪಡಿಸಿದೆ. ಇದನ್ನೂ ಓದಿ- Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ತಿಳಿಯಿರಿ ಇದರ ವೈಶಿಷ್ಟ್ಯ
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 18 ನಿಮಿಷಗಳಲ್ಲಿ ಶೂನ್ಯದಿಂದ 50% ವರೆಗೆ ಚಾರ್ಜ್ ಮಾಡಬಹುದು. ಇದರಿಂದ ಸುಮಾರು 75 ಕಿ.ಮೀ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಇದರ ವ್ಯಾಪ್ತಿಯು ಪೂರ್ಣ ಚಾರ್ಜ್‌ನಲ್ಲಿ ಸುಮಾರು 150 ಕಿ.ಮೀ. ಇದರಲ್ಲಿ ಕಂಪನಿಯು ಪೂರ್ಣ-ಎಲ್ಇಡಿ ಲೈಟಿಂಗ್, ಫಾಸ್ಟ್ ಚಾರ್ಜಿಂಗ್, ಫ್ರಂಟ್ ಡಿಸ್ಕ್ ಬ್ರೇಕ್ ಮುಂತಾದ ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಎಂದು ಕಂಪನಿಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.