ನಿಮ್ಮ ನೆಚ್ಚಿನ ಭಾಷೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಹೀಗೆ ಮಾಡಿ

ನಿಮ್ಮ ಆಧಾರ್ ಕಾರ್ಡ್ ಅನ್ನು ಇಂಗ್ಲಿಷ್, ಕನ್ನಡ, ಮಲಯಾಳಂ, ತಮಿಳು, ತೆಲುಗು, ಅಸ್ಸಾಂ,  ಉರ್ದು, ಪಂಜಾಬಿ, , ಹಿಂದಿ, ಬಂಗಾಳಿ, ಗುಜರಾತಿ, ಒರಿಯಾ, ಮತ್ತು ಮರಾಠಿ ಭಾಷೆಗಳಲ್ಲಿ ಪರಿವರ್ತಿಸಬಹುದು.

ನವದೆಹಲಿ : Aadhaar Card Update:  ಆಧಾರ್ ಕಾರ್ಡ್ ಈಗ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಿದೆ. ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆಯಾಗಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೇ ಮುದ್ರಣವಿರುತ್ತದೆ. ಆದರೆ, ದೇಶದ ಎಲ್ಲಾ ಭಾಗಗಳಲ್ಲಿರುವ ಎಲ್ಲ ಜನರಿಗೂ ಇಂಗ್ಲಿಷ್ ತಿಳಿದಿರುವುದು ಅನಿವಾರ್ಯವಲ್ಲ. ಆದ್ದರಿಂದ ಈಗ ಯುಐಡಿಎಐ ಪ್ರಾದೇಶಿಕ ಭಾಷೆಗಳಲ್ಲಿ ಆಧಾರ್ ಕಾರ್ಡ್ ಮುದ್ರಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ನಿಮ್ಮ ಆಧಾರ್ ಕಾರ್ಡ್ ಅನ್ನು ಇಂಗ್ಲಿಷ್, ಕನ್ನಡ, ಮಲಯಾಳಂ, ತಮಿಳು, ತೆಲುಗು, ಅಸ್ಸಾಂ,  ಉರ್ದು, ಪಂಜಾಬಿ, , ಹಿಂದಿ, ಬಂಗಾಳಿ, ಗುಜರಾತಿ, ಒರಿಯಾ, ಮತ್ತು ಮರಾಠಿ ಭಾಷೆಗಳಲ್ಲಿ ಪರಿವರ್ತಿಸಬಹುದು. ಆಧಾರ್‌ನಲ್ಲಿ ಭಾಷೆಯನ್ನು ಬದಲಾಯಿಸಲು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆಧಾರ್ ನ ಈ ಹೊಸ ಸೌಲಭ್ಯದ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ. 

2 /5

ಆಧಾರ್‌ನಲ್ಲಿ ಭಾಷೆಯನ್ನು ಅಪ್ಡೇಟ್ ಮಾಡಲು, ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ https://uidai.gov.in/. ಗೆ ಹೋಗಿ. ಇಲ್ಲಿ ಸೆಲ್ಫ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಕಾಣಿಸುತ್ತದೆ. ಈಗ ಈ ಪುಟದಲ್ಲಿ, ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚಾ ಸೆಕ್ಯುರಿಟಿ ಕೋಡ್ ಹಾಕಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ.ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ 6 ಅಂಕೆಗಳ ಒನ್-ಟೈಮ್-ಪಾಸ್ವರ್ಡ್ ಬರುತ್ತದೆ. ಈ  ಒಟಿಪಿಯನ್ನು  ನಮೂದಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ. ಮುಂದಿನ ಸ್ಕ್ರೀನ್ ನಲ್ಲಿ ಅಪ್ಡೆಟ್ ಬಟನ್ ಕ್ಲಿಕ್ ಮಾಡಿ.

3 /5

ಈಗ ಮುಂದಿನ ಪೇಜ್ ನಲ್ಲಿ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಈಗ ನಿಮ್ಮ ಪ್ರಾದೇಶಿಕ ಭಾಷೆಯನ್ನು ಆರಿಸಿ. ಹೆಸರು ಮತ್ತು ವಿಳಾಸವನ್ನು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗುತ್ತದೆ. ಪಾಪ್ಅಪ್ನಲ್ಲಿ ಮಾಹಿತಿಯನ್ನು ಅಪ್ ಡೇಟ್ ಮಾಡಲು ನಿರ್ದಿಷ್ಟ ವಿಧಾನವನ್ನು ಅನುಸರಿಸಿ, ಅರ್ಜಿಯನ್ನು ಸಲ್ಲಿಸಿ. ನಿಮ್ಮ ಹೆಸರನ್ನು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ಸರಿಯಾಗಿ ಬರೆದಿದ್ದರೆ ಇಲ್ಲಿ ಹೆಚ್ಚಿನ ತಿದ್ದುಪಡಿ ಅಗತ್ಯವಿಲ್ಲ. ಕಾಗುಣಿತವನ್ನು ಒಮ್ಮೆ ಪರಿಶೀಲಿಸಿ ಮತ್ತು ಅದನ್ನು ಎಡಿಟ್ ಮಾಡಿ. ಅದೇ ರೀತಿ ವಿಳಾಸವನ್ನು ಕೂಡಾ ಎಡಿಟ್ ಮಾಡಿ.  ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿವ್ಯೂ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಮಾಹಿತಿಯು ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ. ಈಗ ನಿಮ್ಮ ಮೊಬೈಲ್‌ ಗೆ ಬಂದ ಟಿಪಿಯನ್ನು ಹಾಕಿ ಮುಂದುವರಿಯಿರಿ.  

4 /5

ಆಧಾರ್ ಕಾರ್ಡ್‌ನ ಭಾಷೆಯನ್ನು ಬದಲಾಯಿಸಬೇಕಾದರೆ, ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಪಾವತಿ ಮಾಡಬಹುದು. ಇದಾದ ನಂತರ, ಭಾಷಾ ಅಪ್ ಡೇಟ್ ವಿನಂತಿಯನ್ನು ಆಧಾರ್‌ನಲ್ಲಿ ಸಲ್ಲಿಸಲಾಗುತ್ತದೆ. ಹೊಸ ಆಧಾರ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

5 /5

 ಆಧಾರ್ ಕಾರ್ಡ್‌ನಲ್ಲಿ ಭಾಷೆಯನ್ನು ನವೀಕರಿಸುವ ಪ್ರಕ್ರಿಯೆಯು 1 ರಿಂದ 3 ವಾರಗಳವರೆಗೆ ತೆಗೆದುಕೊಳ್ಳಬಹುದು. ಆಧಾರ್ ಸೇವಾ ಕೇಂದ್ರದ ಮೂಲಕ ಕೂಡಾ ನಿಮ್ಮ ಸ್ಥಳೀಯ ಭಾಷೆಯನ್ನು ಆಧಾರ್‌ನಲ್ಲಿ ಬದಲಾಯಿಸಬಹುದು.