ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ಸಾಮಾನ್ಯವಾಗಿ, ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಬದಲಾಗುತ್ತಿರುವ ಉದ್ಯೋಗಗಳು ಅಥವಾ ಬದಲಾಗುತ್ತಿರುವ ನಗರಗಳೊಂದಿಗೆ, ಬ್ಯಾಂಕ್ ಗಳು ಕೂಡಾ ಬದಲಾಗುತ್ತದೆ.

ನವದೆಹಲಿ : ಸಾಮಾನ್ಯವಾಗಿ, ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಬದಲಾಗುತ್ತಿರುವ ಉದ್ಯೋಗಗಳು ಅಥವಾ ಬದಲಾಗುತ್ತಿರುವ ನಗರಗಳೊಂದಿಗೆ, ಬ್ಯಾಂಕ್ ಗಳು ಕೂಡಾ ಬದಲಾಗುತ್ತದೆ. ಹಳೆಯ ಉಳಿತಾಯ ಖಾತೆಯ ಜೊತೆಗೆ ಹೊಸ ಖಾತೆ ತೆರೆಯಬೇಕಾಗುತ್ತದೆ. ಬಹು ಖಾತೆಗಳಿಂದ ಅನೇಕ ಪ್ರಯೋಜನಗಳಿವೆ. ಆದರೆ, ಇದು ಅನೇಕ ಅನಾನುಕೂಲತೆಗಳನ್ನು ಕೂಡ ತಂದೊಡ್ಡುತ್ತದೆ. ಬಹು ಉಳಿತಾಯ ಖಾತೆಗಳ 5 ಪ್ರಮುಖ ಅನಾನುಕೂಲಗಳು ಯಾವುವು ನೋಡೋಣ .. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯುವುದು ಸುಲಭ. ಆದರೆ ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್  ಕಾಯ್ದುಕೊಳ್ಳುವುದು ಕಷ್ಟ. ನಿಮ್ಮ ಬಳಿ ಹೆಚ್ಚು ಉಳಿತಾಯ ಖಾತೆ ಇದ್ದರೆ, ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್   ಉಳಿಸುವುದು ಕೂಡಾ ಅವಶ್ಯವಾಗಿರುತ್ತದೆ. ಒಂದು ವೇಳೆ ಇದಕ್ಕೆ ತಪ್ಪಿದರೆ ದಂಡ ಪಾವತಿಸಬೇಕಾಗುತ್ತದೆ.  

2 /5

ಬೇರೆ ಬೇರೆ ಉಳಿತಾಯ ಖಾತೆಗಳಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಉಳಿಸುವುದರಿಂದ ಬಡ್ಡಿಯ ನಷ್ಟವೂ ಆಗುತ್ತದೆ. ಯಾಕೆಂದರೆ, ಹೆಚ್ಚಿನ ಮೊತ್ತದ ಠೇವಣಿಯನ್ನು ಒಂದೇ ಖಾತೆಯಲ್ಲಿ ಇಟ್ಟರೆ, ಹೆಚ್ಚಿನ ಬಡ್ಡಿ ಸಿಗುತ್ತದೆ. ಅಂದರೆ ಬೇರೆ ಬೇರೆ ಖಾತೆಗಲ್ಲಿ ಸಣ್ಣ ಸಣ್ಣ ಮೊತ್ತವನ್ನು ಇಡುವ ಬದಲು, ಒಂದೇ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಇಡುವುದರಿಂದ ಹೆಚ್ಚಿನ ಲಾಭಾವಾಗುತ್ತದೆ.   

3 /5

ಅನೇಕ ಉಳಿತಾಯ ಖಾತೆಗಳನ್ನು ಹೊಂದಿರುವುದು ಆಟೋ ಟ್ರಾನ್ಸ್ಫರ್ ಸಂದರ್ಭದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಎಲ್ಲಾ ಠೇವಣಿಗಳನ್ನು ಒಂದು ಪೇ-ಚೆಕ್‌ನೊಂದಿಗೆ ಮಾಡಿದರೆ ಆಟೋ ಟ್ರಾನ್ಸ್ಫರ್ ಆಯ್ಕೆಯನ್ನು ಜಟಿಲವಾಗಬಹುದು. ಎಲ್ಲಾ ಖಾತೆಗಳು ಮತ್ತು  ಅವುಗಳಲ್ಲಿನ ಠೇವಣಿ ಮೇಲೆ ನಿಗಾ ಇಡುವುದು ಕಷ್ಟದ ಕೆಲಸವಾಗಿರುತ್ತದೆ.

4 /5

ಕೆಲವು ಬ್ಯಾಂಕುಗಳು ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ಉಳಿಸಿಕೊಂಡರೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ. ಆದ್ದರಿಂದ, ಬಹು ಖಾತೆಗಳನ್ನು ನಿರ್ವಹಿಸುವ ವೆಚ್ಚ ಎಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿರುತ್ತದೆ. ಇದಲ್ಲದೇ, ಬ್ಯಾಂಕುಗಳು ತಮ್ಮ ಗ್ರಾಹಕರಿಂದ ವಾರ್ಷಿಕ ನಿರ್ವಹಣೆ ಶುಲ್ಕ ಮತ್ತು ಸೇವಾ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.  

5 /5

ನೀವು ಅನೇಕ ಉಳಿತಾಯ ಖಾತೆಗಳನ್ನು ಹೊಂದಿದ್ದು, ಅವುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿಸಿಕೊಂಡಿದ್ದೀರಿ ಎಂದೆ ಇರಲಿ. ಆದರೆ,   ದೀರ್ಘಕಾಲ ವಹಿವಾಟುಗಳನ್ನು ಮಾಡದಿದ್ದರೆ, ಆ ಖಾತೆಯು ನಿಷ್ಕ್ರಿಯ ಖಾತೆಯ ವರ್ಗಕ್ಕೆ ಹೋಗುತ್ತದೆ. ಇದನ್ನು ಮತ್ತೆ ಸಕ್ರಿಯಗೊಳಿಸಬೇಕು, ಇದಕ್ಕಾಗಿ ನೀವು ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.