Hair Care Tips: ಮಳೆಗಾಲದಲ್ಲಿ ಕೂದಲುದುರುವಿಕೆ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ಟ್ರೈ ಮಾಡಿ ನೋಡಿ

Foods for Hair Care in Monsoon: ಮಳೆಗಾಲದಲ್ಲಿನ ಕೂದಲು ಉದುರುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಖಂಡಿತವಾಗಿ ಈ ಆಹಾರಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇವು ನಿಮ್ಮ ಕೂದಲಿಗೆ ಕಳೆದುಹೋದ ಪೋಷಣೆಯನ್ನು ಪುನಃಸ್ಥಾಪಿಸಲು ಮತ್ತು ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.

Foods for Hair Care in Monsoon: ಮಳೆಗಾಲದಲ್ಲಿ (Monsoon) ಕೂದಲು ಉದುರುವಿಕೆ ಒಂದು  ಸಾಮಾನ್ಯ ಸಮಸ್ಯೆಯಾಗಿದೆ.  ವಾತಾವರಣದಲ್ಲಿನ ತೇವಾಂಶದಿಂದಾಗಿ, ಕೂದಲಿನ ಬೇರುಗಳಲ್ಲಿ ಕೊಳಕು ಸಂಗ್ರಹವಾಗಲು ಆರಂಭವಾಗುತ್ತದೆ, ಈ ಕಾರಣದಿಂದಾಗಿ ಬೇರುಗಳು ದುರ್ಬಲವಾಗುತ್ತವೆ ಮತ್ತು ಕೂದಲು ಉದುರಲು (Hair Loss Nutritions) ಆರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಹೊಸ-ಹೊಸ ಹೆಯರ್ ಮಾಸ್ಕ್ (Hair Mask)  ಪ್ರಯತ್ನಿಸಲು ಪ್ರಾರಂಭಿಸುತ್ತಾರೆ ಮತ್ತು ಕೂದಲಿನ ಪೋಷಣೆಯ ಕಂಡೆಗೆ ವಿಶೇಷ ಗಮನ ಹರಿಸುವುದಿಲ್ಲ. ಈ ಕಾರಣದಿಂದಾಗಿ ಕೂದಲು ಉದುರುವುದು ನಿಲ್ಲುವುದಿಲ್ಲ. ಈ ಲೇಖನದಲ್ಲಿ ನಾವು ನಿಮಗೆ ಕೆಲ ಆಹಾರಗಳ ಕುರಿತು ಮಾಹಿತಿ ನೀಡುತ್ತಿದ್ದು, ಇವುಗಳ ನಿತ್ಯ ಬಳಕೆಯಿಂದ ನಿಮ್ಮ ಕೂದಲುಗಳು ಗಟ್ಟಿಗೊಂಡು, ಪುನಃ ತನ್ನ ಹೊಳಪನ್ನು ಪಡೆದುಕೊಳ್ಳುತ್ತವೆ.  ಹಾಗಾದರೆ ಬನ್ನಿ ಈ ಫುಡ್ ಗಳು (Foods For Hair Growth) ಯಾವುವು ತಿಳಿದುಕೊಳ್ಳೋಣ. 

 

ಇದನ್ನೂ ಓದಿ-ಈ ಐದು ವಸ್ತುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಲೇ ಬಾರದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /3

1. ನಿತ್ಯ ಮೊಟ್ಟೆಯನ್ನು ಸೇವಿಸಿ - ಕೂದಲಿನ ಆರೋಗ್ಯಕ್ಕೆ ಮೊಟ್ಟೆ ಉತ್ತಮ ಎಂದು ಹೇಳಲಾಗುತ್ತದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಇದರಿಂದ ಕೂದಲಿನ ಬುಡಕ್ಕೆ ಪೋಷಣೆ ಸಿಗುತ್ತದೆ ಹಾಗೂ ಕೂದಲಿನ ಬೇರುಗಳು ಗಟ್ಟಿಗೊಳ್ಳುತ್ತವೆ. ಕೂದಲಿಗೆ ಬೇಕಾಗುವ Keratin ಪ್ರೋಟೀನ್ ಪ್ರಮಾಣ ಹೆಚ್ಚಿಸುವಲ್ಲಿ  ಮೊಟ್ಟೆ ಸಹಕಾರಿಯಾಗಿದೆ. ಇದು ಕೂದಲಿನ ಬೆಳವಣಿಗೆಗೆ ಬೇಕಾಗುವ ಒಂದು ಮಹತ್ವದ ಪ್ರೋಟೀನ್ ಆಗಿದೆ. ಹೀಗಾಗಿ ನಿತ್ಯ ಬೆಳಗ್ಗೆ ತಿಂಡಿಯಲ್ಲಿ ಮೊಟ್ಟೆ ಸೇವಿಸುವುದು ಉತ್ತಮ ಎನ್ನಲಾಗುತ್ತದೆ.

2 /3

2. ಅಕ್ರೋಟ್ ಹಾಗೂ ಬಾದಾಮ್ ಸೇವಿಸಿ - ವಾಲ್ನಟ್ಸ್ ಮತ್ತು ಬಾದಾಮಿ ಸೇವನೆ  ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಈ ಕಾರಣದಿಂದಾಗಿ ಕೂದಲಿನ ತೇವಾಂಶ ಹಾಗೇ ಇರುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಲು, ಈ ಒಣ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಖಂಡಿತವಾಗಿ ಸೇರಿಸಿ.

3 /3

3. ಯೋಗರ್ಟ್ ಹಾಗೂ ಹಾಲು - ಬೆಳಗಿನ  ಉಪಹಾರದಲ್ಲಿ ಹಾಲು ಕುಡಿಯುವುದು ಅಥವಾಯೋಗರ್ಟ್  ತಿನ್ನುವುದು ದೇಹಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಕಳೆದುಹೋದ ತೇವಾಂಶವನ್ನು ಪುನಃಸ್ಥಾಪಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.