ಲಂಡನ್: ಸ್ವೀಡನ್ ಮತ್ತು ಬ್ರಿಟನ್ ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್'ನಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
885ನೇ ಬಸವ ಜಯಂತಿಯ ಹಿನ್ನೆಲೆಯಲ್ಲಿ ಬ್ರಿಟನ್ ಸಂಸತ್ ಭವನದ ಬಳಿಯಿರುವ ಥೇಮ್ಸ್ ನದಿ ದಂಡೆಯಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ಸಮರ್ಪಿಸಿದರಲ್ಲ್ದೆ, ನಂತರ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು.
It is an honour to pay homage to Bhagwan Basaveshwara during my UK visit. The ideals of Bhagwan Basaveshwara motivate people across the entire world. pic.twitter.com/Ul6KGoX6tj
— Narendra Modi (@narendramodi) April 18, 2018
ಇದಕ್ಕೂ ಮುನ್ನ ಬಸವ ಜಯಂತಿ ಅಂಗವಾಗಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದ ಮೋದಿ, "ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದತೆ, ಸಹೋದರತ್ವ, ಏಕತೆ ಮತ್ತು ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ, ನಮಗೆ ಸದಾ ಪ್ರೇರಣೆಯಾಗಿದೆ" ಎಂದು ಬರೆದಿದ್ದರು.
ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದತೆ, ಸಹೋದರತ್ವ, ಏಕತೆ ಮತ್ತು ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ, ನಮಗೆ ಸದಾ ಪ್ರೇರಣೆ.
— Narendra Modi (@narendramodi) April 18, 2018