Photo Gallery: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬಿಹಾರದ ಪರಿಸ್ಥಿತಿ ನೋಡಿ...

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿಹಾರದ ಪ್ರಮುಖ ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ.

ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿಹಾರದ ಪ್ರಮುಖ ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ವರುಣನ ಆರ್ಭಟಕ್ಕೆ ಇಡೀ ಬಿಹಾರ ರಾಜ್ಯವೇ ನಲುಗಿಹೋಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಜನರು ಮನೆಯಿಂದ ಹೊರಬರದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಬಿಹಾರದಲ್ಲಿ ಬಿಟ್ಟುಬಿಡದಂತೆ ನಿರಂತರವಾಗಿ ಮಳೆಯಾಗುತ್ತಿದೆ. ಪರಿಣಾಮ ಯಮುನಾ ಮತ್ತು ಗಂಗಾ ನದಿಗಳು ಸೇರಿದಂತೆ ಉಪನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹೆಚ್ಚವರಿ ನೀರಿನ ಸಂಗ್ರಹದಿಂದ ಬಿಹಾರದ ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಅನೇಕ ಪ್ರದೇಶಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಪರದಾಡುವಂತಾಗಿದೆ.

2 /6

ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಸಲಹೆಯ ಪ್ರಕಾರ, ಮುಂದಿನ 2-3 ದಿನಗಳಲ್ಲಿ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿನ ಮುಖ್ಯ ಗಂಗಾ ಕಾಂಡದ ನೀರಿನ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವುದಾಗಿ ತಿಳಿಸಲಾಗಿದೆ.

3 /6

ಭೀಕರ ಪ್ರವಾಹಕ್ಕೆ ಬಿಹಾರದ ಅನೇಕ ಪ್ರದೇಶಗಳು ತುತ್ತಾಗಿವೆ. ಮುಜಫರ್ ಪುರ್, ದರ್ಭಾಂಗ, ಖಗಾರಿಯಾ, ಸಹರ್ಸಾ, ಪಾಟ್ನಾ, ವೈಶಾಲಿ, ಭೋಜ್ ಪುರ್, ಲಖಿಸರೈ, ಭಾಗಲ್ಪುರ್, ಸರನ್, ಬಕ್ಸಾರ್, ಬೇಗುಸರೈ, ಕತಿಹಾರ್, ಮುಂಗೇರ್ ಮತ್ತು ಸಮಸ್ತಿಪುರ ಜಿಲ್ಲೆಗಳಿಗೆ ಪ್ರವಾಹದಿಂದ ಹೆಚ್ಚಿನ ಹಾನಿಯುಂಟಾಗಿದೆ.

4 /6

ಬಿಹಾರದ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಭೀಕರ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ಸುಮಾರು 2.7 ಮಿಲಿಯನ್ ಜನರು ಮತ್ತು 2,176 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ.

5 /6

ಹೀಗೆ ಮಳೆ ಅಬ್ಬರ ಮುಂದುವರಿದರೆ ಬಿಹಾರ ರಾಜ್ಯದ ಅನೇಕ ಪ್ರದೇಶಗಳಿಗೆ ಹೆಚ್ಚಿನ ಅಪಾಯ ಉಂಟಾಗಲಿದೆ ಅಂತಾ ಕೇಂದ್ರ ಜಲ ಆಯೋಗ(CWC) ಎಚ್ಚರಿಸಿದೆ. ‘ಕಳೆದ ವಾರ ಯಮುನಾ ನದಿಯ ಉಪನದಿಗಳಲ್ಲಿ ಹುಟ್ಟಿಕೊಂಡ ಪ್ರವಾಹವು ಗಂಗಾನದಿಯನ್ನು ಹಾದು ಹೋಗುತ್ತಿದೆ. ಸಂಪೂರ್ಣವಾಗಿ ಇದು ಕಡಿಮೆಯಾಗಲು ಮೂರ್ನಾಲ್ಕು ದಿನಗಳು ಬೇಕಾಗಬಹುದು. ಹೀಗಾಗಿ ಮತ್ತೆ ಮಳೆಯಾದರೆ ಅಪಾಯ ತಪ್ಪಿದ್ದಲ್ಲ’ ಅಂತಾ CWC ಎಚ್ಚರಿಕೆ ನೀಡಿದೆ.

6 /6

ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಇನ್ನುಳಿದ ರಾಜ್ಯಗಳಲ್ಲಿಯೂ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಕೆ ಎಚ್ಚರಿಕೆ ಸಂದೇಶ ನೀಡಿದೆ.