Rose Water: ಚರ್ಮಕ್ಕೆ ಪ್ರಯೋಜನಕಾರಿ ರೋಸ್ ವಾಟರ್

                       

ರೋಸ್ ವಾಟರ್ ಅನ್ನು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ರೋಸ್ ವಾಟರ್/ಗುಲಾಬಿ ನೀರು ಆರೊಮ್ಯಾಟಿಕ್ ಎಣ್ಣೆ ಹೊರತೆಗೆಯುವಿಕೆಯ ಉಪ ಉತ್ಪನ್ನವಾಗಿದೆ. ಇದನ್ನು ಆಹಾರದಲ್ಲಿ ಮಸಾಲೆಯಾಗಿ, ಕೆಲವು ಸೌಂದರ್ಯವರ್ಧಕ ಮತ್ತು ವೈದ್ಯಕೀಯ ಉತ್ಪನ್ನಗಳ ಭಾಗವಾಗಿ ಮತ್ತು ಯುರೋಪ್ ಮತ್ತು ಏಷ್ಯಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.

ಈ ರೋಸ್  ವಾಟರ್ ಚರ್ಮವನ್ನು ಆರೋಗ್ಯವಾಗಿಡಲು ಬಳಸಬಹುದಾದ ವಸ್ತುವಾಗಿದೆ. ರೋಸ್ ವಾಟರ್ ನಿಂದ ಚರ್ಮಕ್ಕೆ ಹಲವು ರೀತಿಯ ಉಪಯೋಗಗಳಿವೆ. ಹಾಗಾದರೆ ರೋಸ್ ವಾಟರ್ ನಮ್ಮ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ ಎಂದು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಒಂದು ಚಮಚ ಲವಂಗದ ಪುಡಿಯನ್ನು ಒಂದು ಟೀಚಮಚ  ರೋಸ್ ವಾಟರ್ ಜೊತೆ ಬೆರೆಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮೊದಲು ಮೊಡವೆಗಳ ಮೇಲೆ ಹಚ್ಚುವುದರಿಂದ ಚರ್ಮದ ಮೇಲಿನ ಮೊಡವೆಗಳು ನಿವಾರಣೆಯಾಗುತ್ತವೆ. 

2 /4

ಮಸುಕಾದ ಚರ್ಮ: ಒಂದು ಬಟ್ಟಲಿನಲ್ಲಿ ಒಂದು ಚಮಚ ನಿಂಬೆ ರಸ (Lemon Juice) ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ, ಅದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದನ್ನೂ ಓದಿ- Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

3 /4

ಮುಖದ ಮೇಲಿನ ಕಲೆ ನಿವಾರಣೆಗೆ: ಒಂದು ಚಮಚ ಹಸಿರು ಕಾಳಿನ ಪುಡಿಗೆ ಅಗತ್ಯ ಪ್ರಮಾಣದ ರೋಸ್ ವಾಟರ್ (Rose Water) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಲಘುವಾಗಿ ಮಸಾಜ್ ಮಾಡಿ. ಬಳಿಕ ಮುಖ ತೊಳೆಯಿರಿ. ವಾರಕ್ಕೆ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಮುಖದ ಮೇಲಿನ ಕಲೆ ನಿವಾರಣೆ ಆಗಿ  ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಇದನ್ನೂ ಓದಿ-  Turmeric Cleanser For Skin: ಮುಖದ ಮೇಲಿನ ಕಲೆ, ಡೆಡ್ ಸ್ಕಿನ್ ನಿವಾರಣೆಗೆ ಬಳಸಿ ಅರಿಶಿನದ ಕ್ಲೆನ್ಸರ್

4 /4

ಒಣ ಕೂದಲು: ಎರಡು ಚಮಚ ಗ್ಲಿಸರಿನ್ ಮತ್ತು ಎರಡು ಚಮಚ ರೋಸ್ ವಾಟರ್  ಬೆರೆಸಿ ತಲೆಗೆ ಹಚ್ಚಿ ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿದರೆ ಕೂದಲು ತುಂಬಾ ಮೃದುವಾಗಿ ಕಾಣುತ್ತದೆ.