Thalaivi Photos: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ಮಿಂಚಿದ KANGANA RANAUT

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ತಲೈವಿ' ಬಿಡುಗಡೆಗೆ ಸಿದ್ಧವಾಗಿದೆ.

ಚೆನ್ನೈ: ದಿವಂಗತ ಮುಖ್ಯಮಂತ್ರಿ ಜಯಲಲಿತಾ (Tamil Nadu's former CM late Jayalalitha) ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ತಲೈವಿ' ಬಿಡುಗಡೆಗೆ ಸಿದ್ಧವಾಗಿದೆ. ತಲೈವಿ ಚಿತ್ರವನ್ನು ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರವನ್ನು ಎ. ಎಲ್. ವಿಜಯ್ ನಿರ್ದೇಶಿಸಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಯಲಲಿತಾ ಪಾತ್ರದಲ್ಲಿ ನಟಿಸಿರುವ ನಟಿ ಕಂಗನಾ ರನೌತ್ ಅವರ ವಿಭಿನ್ನ ಫೋಟೋಗಳನ್ನು ನೀವೂ ಕಣ್ತುಂಬಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿರ್ದೇಶಕ ವಿಜಯ್ ಅವರ ತಲೈವಿ ಚಿತ್ರದಲ್ಲಿ ನಟಿ ಕಂಗನಾ ರನೌತ್  ಮತ್ತು ನಟ ಅರವಿಂದ ಸ್ವಾಮಿ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹು ನಿರೀಕ್ಷಿತ ತಲೈವಿ ಚಿತ್ರವು ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ (J Jayalalithaa) ಅವರ ಜೀವನಚರಿತ್ರೆಯಾಗಿದೆ. 

2 /5

ಬಹುಭಾಷಾ ಚಲನಚಿತ್ರವನ್ನು ಈ ಮೊದಲು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು. ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

3 /5

ಚಿತ್ರದಲ್ಲಿ, ಕಂಗನಾ ರಣಾವತ್ (KANGANA RANAUT) ಜಯಲಲಿತಾ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಅರವಿಂದ ಸ್ವಾಮಿ (Arvind Swami) ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದನ್ನೂ ಓದಿ- Sruthi Hariharan: ಡಾಲಿ ಧನಂಜಯ್ ‘ಹೆಡ್ ಬುಷ್’ ಸಿನಿಮಾಗೆ ಶ್ರುತಿ ಹರಿಹರನ್ ಎಂಟ್ರಿ..!

4 /5

ಕಂಗನಾ ರಣಾವತ್ (KANGANA RANAUT) ಅವರ 34 ನೇ ಹುಟ್ಟುಹಬ್ಬದ ಅಂಗವಾಗಿ ಈ ವರ್ಷದ ಮಾರ್ಚ್ 23 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಲನಚಿತ್ರದ 2 ನಿಮಿಷ ಮತ್ತು 59 ಸೆಕೆಂಡ್ ಉದ್ದದ ಟ್ರೇಲರ್ ದಿವಂಗತ ನಟಿ ಮತ್ತು ರಾಜಕಾರಣಿ ಜಯಲಲಿತಾ ಅವರ ಜೀವನದಿಂದ ಪ್ರಸಿದ್ಧವಾದ ಸನ್ನಿವೇಶಗಳನ್ನು ಒಳಗೊಂಡಿತ್ತು. ಇದನ್ನೂ ಓದಿ- Deepika Padukone: ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ ದೀಪಿಕಾ ಪಡುಕೋಣೆ

5 /5

ತಲೈವಿಯನ್ನು ಬಾಹುಬಲಿ ಖ್ಯಾತಿಯ ಕೆವಿ ವಿಜಯೀಂದ್ರ ಪ್ರಸಾದ್ ಬರೆದಿದ್ದಾರೆ . ಈ ಚಿತ್ರದಲ್ಲಿ ನಟರಾದ ಮಧು, ಪ್ರಕಾಶ್ ರಾಜ್, ಜಿಸ್ಶು ಸೇನ್‌ಗುಪ್ತಾ, ಭಾಗ್ಯಶ್ರೀ ಮತ್ತು ಪೂರ್ಣಾ ನಟಿಸಿದ್ದಾರೆ. ಚಿತ್ರವನ್ನು ವಿಷ್ಣು ವರ್ಧನ್ ಇಂದೂರಿ ಮತ್ತು ಶೈಲೇಶ್ ಸಿಂಗ್ ನಿರ್ಮಿಸಿದ್ದಾರೆ. (ಈ ಎಲ್ಲಾ ಫೋಟೋಗಳನ್ನೂ Zee Hindustan Tamil ಡಿಜಿಟಲ್ ನಿಂದ ತೆಗೆದುಕೊಳ್ಳಲಾಗಿದೆ.)