GOOGLE ಕೂಡಾ ತಪ್ಪು ಮಾಡುತ್ತೆ ಗೊತ್ತೇ? ಭಾರತದ ಮೊದಲ ಪ್ರಧಾನಿ ಪೋಟೋ ಬದಲು ಪ್ರಧಾನಿ ಮೋದಿ ಫೋಟೊ!

  

  • Apr 26, 2018, 16:14 PM IST
1 /5

ಯಾವುದೇ ವಿಚಾರ ಇರಲಿ, ತಮಗೆ ತಿಳಿದಿಲ್ಲ ಎಂದರೆ ಎಲ್ಲರೂ GOOGLE ಮೊರೆ ಹೋಗುತ್ತಾರೆ. ತಮ್ಮ ಪ್ರಶ್ನೆಗೆ ಉತ್ತರವನ್ನು GOOGLE ಸರ್ಚ್'ನಲ್ಲಿ ಹುಡುಕುತ್ತಾರೆ. ಆದರೆ, ವಿಶ್ವದಲ್ಲೇ ಬಹು ದೊಡ್ಡ ಸರ್ಚ್ ಇಂಜಿನ್ ಗೂಗಲ್ ಕೂಡ ತಪ್ಪು ಮಾಡುತ್ತೆ ಅಂದರೆ ನಂಬಲು ಸಾಧ್ಯವೇ? ಆದರೆ ಅಂತ ಬಹುದೊಡ್ಡ ತಪ್ಪನ್ನು ಇಂದು ಗೂಗಲ್ ಮಾಡಿದೆ. ಇದನ್ನು ಟ್ವಿಟ್ಟರ್ ಬಳಕೆದಾರರು ತಕ್ಷಣವೇ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾರೆ. Google searchನಲ್ಲಿ 'ಭಾರತ ಪ್ರಥಮ PM" ಎಂದು ಟೈಪ್ ಮಾಡಿದರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಪೋಟೋ ಕಂಡಿದೆ. ಆದರೆ, ವಿಕಿಪೀಡಿಯಾ ವಿವರಣೆಯಲ್ಲಿ ಜವಾಹರಲಾಲ್ ನೆಹರು ಬಗ್ಗೆ ವಿವರಣೆ ನೀಡಲಾಗಿತ್ತು  

2 /5

ಇದಲ್ಲದೆ, ದೇಶದ ಮೊದಲ ಹಣಕಾಸು ಮಂತ್ರಿ ಎಂದು ಸರ್ಚ್ ಮಾಡಿದರೆ, ಅಲ್ಲೂ ಕೂಡ ಅದೇ ತಪ್ಪು. ಷಣ್ಮುಖ ಶೆಟ್ಟಿ ಎಂದು ಹೆಸರು ತೋರಿಸುತ್ತಿದ್ದರೂ, ಪ್ರಸ್ತುತ ವಿತ್ತ ಸಚಿವ ಅರುಣ್ ಜೇಟ್ಲಿ ಫೋಟೋ ಚಿತ್ರ ತೋರಿಸಿದೆ. ಆದರೆ, ಇಲ್ಲಿಯೂ ಲಿಖಿತ ಮಾಹಿತಿ ಸರಿಯಾಗಿತ್ತು.

3 /5

ದೇಶದ ಮೊದಲ ರಕ್ಷಣಾ ಮಂತ್ರಿ ಎಂದು ಸರ್ಚ್ ಮಾಡಿದರೆ, ನಿರ್ಮಲಾ ಸೀತಾರಾಂ  ಪೋಟೋ ಬರುತ್ತಿತ್ತು. ಹೀಗೆ ಎಲ್ಲೆಡೆ ಫೋಟೋದಲ್ಲಿ ಅವ್ಯವಸ್ಥೆ ಆಗಿತ್ತು. ಈ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಗೂಗಲ್ ತನ್ನ ತಪ್ಪು ಸರಿಪಡಿಸಿದೆ. 

4 /5

ಗೂಗಲ್ ನಲ್ಲಿ ಈ ರೀತಿಯ ತಪ್ಪು ಆಗಿದೆ ಎಂದು ಟ್ವಿಟ್ಟರ್'ನಲ್ಲಿ  ಟ್ರೋಲ್ ಆಗುತ್ತಿದ್ದಂತೆಯೇ, ಎಲ್ಲರೂ ಗಣ್ಯ ವ್ಯಕ್ತಿಗಳ ಹೆಸರನ್ನು ಗೂಗಲ್ ಸರ್ಚ್ ಮಾಡಲು ಆರಂಭಿಸಿದ್ದಾರೆ. ಆಗಲೂ ಅದೇ ತಪ್ಪು. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಹೆಸರು ಇಂದಿರಾ ಗಾಂಧಿ ಎಂದಿದ್ದರೂ ಫೋಟೋ ಮಾತ್ರ ಪ್ರಧಾನಿ ಮೋದಿ ಅವರದ್ದಾಗಿತ್ತು.

5 /5

ಮಹಾತ್ಮ ಗಾಂಧಿ ಎಂದು ಟೈಪ್ ಮಾಡಿದರೆ, ಪ್ರಧಾನಿ ಮೋದಿ ಫೋಟೋ ಬಂದಿದೆ. ಆದರೆ, ಲಿಖಿತ ಮಾಹಿತಿಯಲ್ಲಿ ಮಾತ್ರ ಮಹಾತ್ಮಾ ಗಾಂಧಿ ಅವರ ವಿವರಣೆ ಸರಿಯಾಗಿತ್ತು.