ಲಂಡನ್: ಭಾರತದಲ್ಲಿ ವಿದ್ಯಾವಂತ ಇಂಜಿನಿಯರ್ಗಳು-ವೈದ್ಯರು ಗಳಿಸದ ವೇತನಕ್ಕಿಂತ ಹೆಚ್ಚಿನ ವೇತನವನ್ನು (Salary)ಇಲ್ಲಿ ಟ್ರಕ್ ಚಾಲಕರು ಪಡೆಯುತ್ತಾರೆ. ಯುಕೆ ಸೂಪರ್ಮಾರ್ಕೆಟ್ ಗಳಲ್ಲಿ ಸರಕುಗಳನ್ನು ತಲುಪಿಸಲು ಟ್ರಕ್ ಚಾಲಕರಿಗೆ (Truck driver) 70,000 ಪೌಂಡ್ ಅಂದರೆ 70,88,515 ರೂ ಯನ್ನು ವಾರ್ಷಿಕ ವೇತನವಾಗಿ ನೀಡಲಾಗುತ್ತಿದೆ. ಇಷ್ಟು ಮಾತ್ರವಲ್ಲ, 2000 ಪೌಂಡ್ ಅಂದರೆ 2,02,612 ರೂ. ಬೋನಸ್ ಕೂಡಾ ಸಿಗುತ್ತದೆ.
ಚಾಲಕರು ಏಕೆ ಅಧಿಕ ವೇತನ ಪಡೆಯುತ್ತಾರೆ ?
ಟೆಸ್ಕೊ (Tesco) ಮತ್ತು ಸೇನ್ಸ್ಬರಿಯ (Sainsbury) ಕಂಪನಿಗಳು ರಿಕ್ರೂಟರ್ಸ್ ಟ್ರಕ್ಕ ಚಾಲಕರಿಗೆ ಕಂಪನಿಗಳು ಉತ್ತಮ ಸಂಬಳವನ್ನು ಒದಗಿಸುತ್ತವೆ. ಏಕೆಂದರೆ ಇಲ್ಲಿ ರಾಷ್ಟ್ರೀಯವಾಗಿ 100,000 ಚಾಲಕರ ಕೊರತೆಯಿದೆ. ಈ ಕಾರಣದಿಂದಾಗಿ, ಸೂಪರ್ ಮಾರ್ಕೆಟ್ ಗಳ (Super market) ದಾಸ್ತಾನು ನಿರ್ವಹಿಸಲು, ಅನುಭವಿ ಚಾಲಕರು ಬೇಕಾಗಿರುತ್ತಾರೆ. ಹಾಗಾಗಿ, ಟ್ರಕ್ ಚಾಲಕರು ತಮ್ಮ ಸೇವೆಗಾಗಿ ಅಧಿಕ ವೇತನ (Salary) ಪಡೆಯುತ್ತಾರೆ.
ಇದನ್ನೂ ಓದಿ : Viral News: ಸ್ಮಶಾನದಲ್ಲಿ ಅಸ್ಥಿಪಂಜರಗಳೊಂದಿಗೆ ಕುಣಿಯುತ್ತಿರುವ ಮಹಿಳೆ..!
2 ವರ್ಷದ ಒಪ್ಪಂದದ ಮೇಲೆ ಕೆಲಸದ ಆಫರ್ :
17 ವರ್ಷಗಳಿಂದ ಟ್ರಕ್ ಚಾಲನೆ ಮಾಡುತ್ತಿದ್ದ ಬ್ಯಾರಿ ಎಂಬ ಟ್ರಕ್ ಚಾಲಕ (Truck driver), ಎರಡು ವರ್ಷಗಳ ಒಪ್ಪಂದದ ಮೇಲೆ 2,000 ಪೌಂಡ್ ಬೋನಸ್ ಪೇಪರ್ಗೆ ಸಹಿ ಹಾಕಲು ಏಜೆಂಟರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಹೇಳಿದ್ದಾರೆ. ಈ ಚಾಲಕರು ವಾರಕ್ಕೆ ಐದು ರಾತ್ರಿ ಕರ್ತವ್ಯವನ್ನುನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಶನಿವಾರ (Saturday) ದುಡಿದರೆ ಒಂದೂವರೆ ಪಟ್ಟು ವೇತನ ಮತ್ತು ಭಾನುವಾರಕ್ಕೆ (Sunday)ಎರಡು ಪಟ್ಟತ ವೇತನ ಪಡೆಯುತ್ತಾರೆ. ಪ್ರಸ್ತುತ ಕಂಪನಿಗಳು ವಾರಾಂತ್ಯದಲ್ಲಿ ಸೂಪರ್ ಮಾರ್ಕೆಟ್ಗಳಿಗೆ ಡೆಲಿವರಿ ಡ್ರೈವರ್ಗಳನ್ನು ಹುಡುಕುತ್ತಿವೆ ಮತ್ತು ಆ ಕಂಪನಿಗಳಿಗೆ ಹಣ ಮುಖ್ಯವಲ್ಲ ಎಂದು, ಬ್ಯಾರಿ ಹೇಳಿದ್ದಾರೆ.
ಚಾಲಕ ಸಿಗದಿದ್ದರೆ, ಹೆಚ್ಚಾಗುತ್ತದೆ ಸರಕುಗಳ ಬೆಲೆ:
ತನಗೆ ಕೆಲಸ ನೀಡುವ ಏಜೆನ್ಸಿಗಳಲ್ಲಿ ಸೇನ್ಸ್ಬರಿ ಮತ್ತು ಟೆಸ್ಕೊ (Tesco) ಒಳಗೊಂಡಿವೆ ಎಂದು ಬ್ಯಾರಿ ಹೇಳಿದ್ದಾರೆ. ಜುಲೈನಲ್ಲಿ, ಟೆಸ್ಕೊ ಕಂಪನಿಯು ಸೆಪ್ಟೆಂಬರ್ ಅಂತ್ಯದ ಮೊದಲು ಕಂಪನಿಗೆ ಸೇರಿದ ಲಾರಿ ಚಾಲಕರಿಗೆ 1,000 ಯೂರೋ ಬೋನಸ್ ನೀಡುತ್ತಿತ್ತು. ಆದರೂ, ಸಗಟು ವಿತರಕರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಬಿಎಲ್ಬಿ, ಚಾಲಕರ ಕೊರತೆಯ ಈ ಬಿಕ್ಕಟ್ಟು ಅಂತಿಮವಾಗಿ ಗ್ರಾಹಕರಿಗೆ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.