Vastu Tips:ಧನತ್ರಯೋದಶಿ-ದೀಪಾವಳಿ ಮುನ್ನ ಮನೆಯ ಈ ಜಾಗಗಳನ್ನು ಸ್ವಚ್ಛಗೊಳಿಸಿ, ದೇವಿ ಲಕ್ಷ್ಮಿ ಮನೆಯಲ್ಲಿಯೇ ನೆಲೆಸುತ್ತಾಳೆ

VASTU TIPS - ಕಾರ್ತಿಕ ಮಾಸ (Kartik Month) ಆರಂಭಗೊಂಡು ಎರಡು ದಿನಗಳು ಕಳೆದಿವೆ ಹಾಗೂ ಇದರೊಂದಿಗೆ ದೀಪಗಳ ಹಬ್ಬ ದೀಪಾವಳಿಗಾಗಿ ದಿನಗಣನೆ ಕೂಡ ಆರಂಭಗೊಂಡಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು (November 4) ದೀಪಾವಳಿ (Diwali) ಹಬ್ಬ ಆಚರಿಸಲಾಗುತ್ತದೆ. ಸಡಗರ ಸಂಭ್ರಮದಿಂದ ಹಬ್ಬ ಆಚರಣೆಗೆ ಈಗಾಗಲೇ ಸಿದ್ಧತೆಗಳೂ ಕೂಡ ಆಂಭಗೊಂಡಿವೆ. 

VASTU TIPS - ಕಾರ್ತಿಕ ಮಾಸ (Kartik Month) ಆರಂಭಗೊಂಡು ಎರಡು ದಿನಗಳು ಕಳೆದಿವೆ ಹಾಗೂ ಇದರೊಂದಿಗೆ ದೀಪಗಳ ಹಬ್ಬ ದೀಪಾವಳಿಗಾಗಿ ದಿನಗಣನೆ ಕೂಡ ಆರಂಭಗೊಂಡಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು (November 4) ದೀಪಾವಳಿ (Diwali) ಹಬ್ಬ ಆಚರಿಸಲಾಗುತ್ತದೆ. ಸಡಗರ ಸಂಭ್ರಮದಿಂದ ಹಬ್ಬ ಆಚರಣೆಗೆ ಈಗಾಗಲೇ ಸಿದ್ಧತೆಗಳೂ ಕೂಡ ಆಂಭಗೊಂಡಿವೆ. ಸ್ವಚ್ಚತೆಯಿಂದ (HOUSE CLEANING TIPS FOR DIWALI) ಹಿಡಿದು ಶಾಪಿಂಗ್ ವರೆಗೆ ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ಜನ ತೊಡಗಿದ್ದಾರೆ. ಏಕೆಂದರೆ, ದೇವಿ ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ (DEVI LAXMI BLESSINGS) ಪಾತ್ರರಾಗಿ ಜೀವನದಲ್ಲಿ ಸುಖ-ಸಮೃದ್ಧಿ ಸಿಗಲಿ ಎಂಬುದು ಅವರ ಆಶಯ. 

 

ಇದನ್ನೂ ಓದಿ-Petrol-Diesel ಮರೆತ್ಹೋಗಿ, ಭವಿಷ್ಯದಲ್ಲಿ ಈ 5 ಇಂಧನಗಳ ಮೇಲೆ ಬೈಕ್-ಕಾರುಗಳು ಚಲಿಸಲಿವೆ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

1. ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ವಾಸ್ತು ಟಿಪ್ಸ್ - ಲಕ್ಷ್ಮಿ ದೇವಿಯು ಸ್ವಚ್ಛತೆ (CLEAN THESE 3 PLACES) ಬೆಳಕನ್ನು ಪ್ರೀತಿಸುತ್ತಾಳೆ, ಅದಕ್ಕಾಗಿಯೇ ದೀಪಾವಳಿಯ ಮೊದಲು, ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಬಣ್ಣ ಬಳಿಯಲಾಗುತ್ತದೆ. ಲಕ್ಷ್ಮಿ ಜೀ ಅಂತಹ ಶುದ್ಧ ಸ್ಥಳಗಳಲ್ಲಿ ವಾಸಿಸುತ್ತಾಳೆ. ನೀವು ಸಹ ಲಕ್ಷ್ಮಿ ಜಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಿದ್ದರೆ, ಧನತ್ರಯೋದಶಿ (DHANTERAS TIPS) ಮತ್ತು ದೀಪಾವಳಿಗಾಗಿ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಕೆಲವು ವಿಷಯಗಳನ್ನು ಖಂಡಿತವಾಗಿಯೂ ಅನುಸರಿಸಿ.

2 /5

2. ಮನೆಯ ಈಶಾನ್ಯ ಕೋನವನ್ನು ಸ್ವಚ್ಛಗೊಳಿಸಿ - ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರಮುಖ ಸ್ಥಳವೆಂದರೆ ಅದು ಈಶಾನ್ಯ ದಿಕ್ಕಿನ ಜಾಗ. ಇದು ದೇವತೆಗಳ ಸ್ಥಳವಾಗಿದೆ, ಈ ದಿಕ್ಕಿನಲ್ಲಿ ಅಡುಗೆಮನೆಗಳು ಮತ್ತು ಪೂಜಾ ಮನೆಗಳನ್ನು ನಿರ್ಮಿಸಲಾಗುತದೆ. ಧನತ್ರಯೋದಶಿ ಮತ್ತು ದೀಪಾವಳಿಯ ದಿನದಂದು, ಈಶಾನ್ಯ ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಆ ಜಾಗದಲ್ಲಿಅನಗತ್ಯವಾಗಿ ಏನನ್ನೂ ಇರಿಸಬೇಡಿ. ಮನೆಯ ಈಶಾನ್ಯ ಮೂಲೆಯು ಸ್ವಚ್ಛವಾಗಿದ್ದರೆ, ಲಕ್ಷ್ಮಿ ದೇವಿ, ಧನ್ವಂತರಿ ಮತ್ತು ಕುಬೇರನ ಕೃಪೆಯಿಂದ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ.   

3 /5

3. ಬ್ರಹ್ಮ ಸ್ಥಾನದಿಂದ ಮುರಕಲುಗೊಂಡ ನಿರುಪಯುಕ್ತ ವಸ್ತುಗಳನ್ನು ತೆಗೆದು ಹಾಕಿ - ಮನೆಯ ಈಶಾನ್ಯ ಮೂಲೆಯ ನಂತರ, ಎರಡನೆಯ ಪ್ರಮುಖ ಭಾಗವೆಂದರೆ ಮನೆಯ ಬ್ರಹ್ಮ ಸ್ಥಳ. ಮನೆಯ ಮಧ್ಯ ಭಾಗವನ್ನು ಬ್ರಹ್ಮ ಸ್ಥಾನ ಎಂದು ಕರೆಯಲಾಗುತ್ತದೆ. ಸಾಧ್ಯವಾದರೆ ಈ ಸ್ಥಳವನ್ನು ಯಾವಾಗಲೂ ತೆರೆದಿರಬೇಕು ಮತ್ತುಗಾಳಿಯಾಡುವಂತಿರಬೇಕು. ಆ ಜಾಗದಲ್ಲಿ ಎಂದಿಗೂ ಭಾರವಾದ ಪೀಠೋಪಕರಣಗಳು ಅಥವಾ ಅನಗತ್ಯ ವಸ್ತುಗಳನ್ನು ಇರಿಸಬೇಡಿ. ಈ ಸ್ಥಳದಲ್ಲಿ ಮುರಿದ ಪೀಠೋಪಕರಣಗಳನ್ನು ಇಡಬೇಡಿ. ಒಂದು ವೇಳೆ ಇರಿಸಿದ್ದಾರೆ ಆ  ವಸ್ತುಗಳನ್ನು ತಕ್ಷಣ ತೆಗೆದುಹಾಕಿ ಮತ್ತು ವಿಶೇಷವಾಗಿ ಧನತ್ರಯೋದಶಿ-ದೀಪಾವಳಿಯ ದಿನದಂದು ಅದನ್ನು ಸ್ವಚ್ಛಗೊಳಿಸಿ.

4 /5

4. ಪೂರ್ವ ದಿಕ್ಕಿನಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ - ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಮತ್ತು ಮನೆಯಲ್ಲಿ ಸಕಾರಾತ್ಮಕತೆಯ ಸಂವಹನವೂ ಈ ದಿಕ್ಕಿನಿಂದಲೇ ನಡೆಯುತ್ತದೆ. ಆದ್ದರಿಂದ, ಮನೆಯ ಪೂರ್ವ ದಿಕ್ಕು ಯಾವಾಗಲೂ ಸ್ವಚ್ಛವಾಗಿರಬೇಕು. ಧನತ್ರಯೋದಶಿ ಮತ್ತು ದೀಪಾವಳಿಯ ದಿನದಂದು, ಬೆಳಿಗ್ಗೆ ಬೇಗನೆ ಎದ್ದು ಮನೆಯ ಪೂರ್ವ ದಿಕ್ಕನ್ನು ಸ್ವಚ್ಛಗೊಳಿಸಿ.

5 /5

5. ದೇವಿ ಲಕ್ಷ್ಮಿಯ ಕೃಪೆ ಖಂಡಿತ ಸಿಗಲಿದೆ - ಮನೆಯ ಈ ಮೂರು ಸ್ಥಳಗಳು ಸ್ವಚ್ಛವಾಗಿದ್ದರೆ, ಲಕ್ಷ್ಮಿಯು ಮನೆಯಲ್ಲಿ ನೆಲೆಸುತ್ತಾಳೆ. ಅಲ್ಲದೆ, ಮನೆಯಲ್ಲಿ ಯಾವಾಗಲೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ನೆಲೆಸಿ ಮನೆಯ ಸದಸ್ಯರೆಲ್ಲರೂ ಕೂಡ ಪ್ರಗತಿ ಸಾಧಿಸುತ್ತಾರೆ.