/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ದೇಶಾದ್ಯಂತ 10 ಮತ್ತು 12ನೇ ತರಗತಿಗಳಿಗೆ ಆಫ್‌ಲೈನ್ ಪರೀಕ್ಷೆಗಳನ್ನು (Board Exam) ರದ್ದುಗೊಳಿಸುವ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರ ಪೀಠವು ವಿಚಾರಣೆ ನಡೆಸಲಿದೆ ಎಂದು ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ. ಈ ಅರ್ಜಿಯು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದೆ ಎಂದು ವಕೀಲ ಪ್ರಶಾಂತ್ ಪದ್ಮನಾಭನ್ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: PM Kisan ಯೋಜನೆಯ ₹4000 ಬಂದಿಲ್ಲವೆ? ಹಾಗಿದ್ರೆ, ಈ ಕೆಲಸ ಮಾಡಿ, ಖಂಡಿತಾ ಹಣ ಬರುತ್ತೆ!

ಅರ್ಜಿಯಲ್ಲಿ, ಎಲ್ಲಾ ರಾಜ್ಯ ಮಂಡಳಿಗಳಾದ ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) 10 ಮತ್ತು 12 ನೇ ತರಗತಿಗಳ ದೈಹಿಕ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಕೋವಿಡ್‌ನಿಂದಾಗಿ (Covid 19) ದೈಹಿಕ ತರಗತಿಗಳು ನಡೆಯದ ಕಾರಣ ಆಫ್‌ಲೈನ್ ಪರೀಕ್ಷೆಯ ಬದಲು ಆನ್‌ಲೈನ್ ಪರೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಕುರಿತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು.

ವಕೀಲರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತ ಅನುಭಾ ಶ್ರೀವಾಸ್ತವ ಅವರು ಆಫ್‌ಲೈನ್ ಪರೀಕ್ಷೆಯ ಬದಲು ಪರ್ಯಾಯ ಮೌಲ್ಯಮಾಪನ ವಿಧಾನದ ಮೂಲಕ ಫಲಿತಾಂಶಗಳನ್ನು ನೀಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ. ವಿವಿಧ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಸುಧಾರಣಾ ಪರೀಕ್ಷೆಗೆ ಪರ್ಯಾಯಗಳನ್ನು ನೀಡಲು ಮತ್ತು ಸಮಯಕ್ಕೆ ಫಲಿತಾಂಶಗಳನ್ನು ಘೋಷಿಸಲು ಎಲ್ಲಾ ಮಂಡಳಿಗಳಿಗೆ ನಿರ್ದೇಶನವನ್ನು ಅರ್ಜಿಯಲ್ಲಿ ಕೋರಲಾಗಿದೆ.

CBSE, ICSE, NIOS ಮತ್ತು ರಾಜ್ಯ ಮಂಡಳಿಗಳ X, XI, XII ತರಗತಿಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಪರೀಕ್ಷೆಯ ಬದಲಿಗೆ ಪರ್ಯಾಯ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಳ್ಳಲು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದಲ್ಲದೇ ಆಂತರಿಕ ಮೌಲ್ಯಮಾಪನದಿಂದ ತೃಪ್ತರಾಗದವರಿಗೆ ತಿದ್ದುಪಡಿ ಪರೀಕ್ಷೆ ನಡೆಸುವಂತೆಯೂ ನ್ಯಾಯಾಲಯ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಪ್ರಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಿದ ಚುನಾವಣಾ ಆಯೋಗ

ಕಂಪಾರ್ಟ್‌ಮೆಂಟ್ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಮೌಲ್ಯಮಾಪನದ ಸೂತ್ರವನ್ನು ನಿರ್ಧರಿಸಲು ಮತ್ತು ನಿಗದಿತ ಸಮಯದ ಚೌಕಟ್ಟಿನೊಳಗೆ ಫಲಿತಾಂಶಗಳನ್ನು ಘೋಷಿಸಲು ಸಮಿತಿಯನ್ನು ರಚಿಸುವಂತೆಯೂ ಮನವಿಯಲ್ಲಿ ಕೋರಲಾಗಿದೆ. ಕೋವಿಡ್‌ನಿಂದಾಗಿ (Corona) ದೈಹಿಕ ತರಗತಿಗಳು ನಡೆದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶದ ದಿನಾಂಕವನ್ನು ಘೋಷಿಸಲು ಸಮಿತಿಯನ್ನು ರಚಿಸುವಂತೆ ಯುಜಿಸಿಗೆ (UGC) ಆದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Supreme Court agrees to list plea seeking cancellation offline board exams for Board Exams 2022
News Source: 
Home Title: 

Board Exams 2022: ಆಫ್‌ಲೈನ್ ಬೋರ್ಡ್ ಪರೀಕ್ಷೆ ರದ್ದುಗೊಳಿಸುವ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ

Board Exams 2022: ಆಫ್‌ಲೈನ್ ಬೋರ್ಡ್ ಪರೀಕ್ಷೆ ರದ್ದುಗೊಳಿಸುವ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ
Caption: 
ಬೋರ್ಡ್ ಪರೀಕ್ಷೆ
Yes
Is Blog?: 
No
Tags: 
Facebook Instant Article: 
Yes
Highlights: 

ಆಫ್‌ಲೈನ್ ಬೋರ್ಡ್ ಪರೀಕ್ಷೆ ರದ್ದುಗೊಳಿಸುವ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ 

ಸಿಬಿಎಸ್‌ಇ ಮತ್ತು ಐಸಿಎಸ್‌ಇಗಳ 10 ಮತ್ತು 12 ನೇ ಬೋರ್ಡ್ ದೈಹಿಕ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಮನವಿ 

ಆನ್‌ಲೈನ್ ಪರೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ

Mobile Title: 
Board Exams 2022: ಆಫ್‌ಲೈನ್ ಬೋರ್ಡ್ ಪರೀಕ್ಷೆ ರದ್ದುಗೊಳಿಸುವ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ
Zee Kannada News Desk
Zee Kannada News Desk
Publish Later: 
No
Publish At: 
Monday, February 21, 2022 - 13:24
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
1
Is Breaking News: 
No