Business Idea: ನೌಕರಿಯಲ್ಲಿನ ಒತ್ತಡಕ್ಕೆ ಒಂದು ವೇಳೆ ನೀವೂ ಕೂಡ ಬೇಸತ್ತಿದ್ದರೆ, ಈ ವಿಶೇಷ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಉತ್ತಮವಾದ ವ್ಯವಸಾಯದ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ,
Business Idea: ನೌಕರಿಯಲ್ಲಿನ ಒತ್ತಡಕ್ಕೆ ಒಂದು ವೇಳೆ ನೀವೂ ಕೂಡ ಬೇಸತ್ತಿದ್ದರೆ, ಈ ವಿಶೇಷ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಉತ್ತಮವಾದ ವ್ಯವಸಾಯದ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ವ್ಯವಸಾಯವನ್ನು ಮಾಡುವುದರ ಮೂಲಕ ನೀವು ಕೈತುಂಬಾ ಲಾಭವನ್ನು ಗಳಿಸಬಹುದು. ಈ ವ್ಯವಸಾಯದ ವಿಶೇಷತೆ ಎಂದರೆ ನೀವು ಕಡಿಮೆ ವೆಚ್ಚದಲ್ಲಿ ಈ ಇದನ್ನು ಆರಂಭಿಸಬಹುದು. ಈ ವ್ಯವಹಾರದಲ್ಲಿ ಬಂಪರ್ ಲಾಭ ಕೂಡ ಇದೆ. ಹೌದು, ನಾವು ಮಾತನಾಡುತ್ತಿರುವುದು ಸೌತೆಕಾಯಿ ಕೃಷಿಯ ಬಗ್ಗೆ. ನೀವು ಯಾವಾಗ, ಎಲ್ಲಿ ಮತ್ತು ಹೇಗೆ ಈ ವ್ಯವಸಾಯವನ್ನು ಪ್ರಾರಂಭಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Business Idea : ಕೇವಲ 50 ಸಾವಿರ ಹೂಡಿಕೆಯಲ್ಲಿ ಈ ವ್ಯವಹಾರ ಆರಂಭಿಸಿ ಬಂಪರ್ ಹಣಗಳಿಕೆ ಮಾಡಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಸೌತೆಕಾಯಿ ಕೃಷಿ ಒಂದು ಲಾಭದಾಯಕ ವ್ಯವಸಾಯ - ನೀವೂ ಕೂಡ ವ್ಯವಸಾಯದ ಮೂಲಕ ಬಂಪರ್ ಲಾಭವನ್ನು ಗಳಿಸಲು ಬಯಸುತಿದ್ದರೆ, ಸೌತೆಕಾಯಿ ಕೃಷಿ ಮತ್ತು ವ್ಯಾಪಾರ ಒಂದು ಉತ್ತಮ ಆಯ್ಕೆಯಾಗಿದೆ.ಇದರಲ್ಲಿ ನಿಮಗೆ ಸರಕಾರದಿಂದ ಸಹಾಯ ಧನವೂ ಅಥವಾ ಸಬ್ಸಿಡಿ ಕೂಡ ದೊರೆಯುತ್ತದೆ. ಈ ವ್ಯವಹಾರದಲ್ಲಿ, ನೀವು ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 8 ಲಕ್ಷ ರೂ. ಹಣ ಗಳಿಕೆ ಮಾಡಬಹುದು.
2. ಸರ್ಕಾರ ಸಬ್ಸಿಡಿ ನೀಡುತ್ತದೆ - ಸೌತೆಕಾಯಿ ಕೃಷಿ ಮೂಲಕ ಲಾಭ ಗಳಿಸಲು ನೀವು ಹೆಚ್ಚು ಸಮಯ ಬೇಕಾಗುವುದಿಲ್ಲ. ಸೌತೆಕಾಯಿ ಬೀಜಗಳನ್ನು ಬಿತ್ತಿದ ಕೇವಲ 4 ತಿಂಗಳ ನಂತರ ನೀವು ರೂ.8 ಲಕ್ಷದವರೆಗೆ ಆದಾಯ ಗಳಿಕೆ ಮಾಡಬಹುದು. ಇದಕ್ಕಾಗಿ ನೀವು ವಿಶಿಷ್ಟ ಪದ್ಧತಿಯ ಕೃಷಿಯನ್ನು ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ಜಾತಿಯ ನೆದರ್ಲ್ಯಾಂಡ್ನ ಸೌತೆಕಾಯಿಯ ಬೀಜಗಳನ್ನು ಬಿತ್ತಿದ ಮೊದಲ ರೈತ ಯುಪಿಯ ರೈತ. ಈ ಸೌತೆಕಾಯಿ ವ್ಯಾಪಾರದಲ್ಲಿ ಸಾಕಷ್ಟು ಲಾಭವಿದೆ. ಮೊದಲಬಾರಿಗೆ ಈ ವ್ಯವಸಾಯಕ್ಕೆ ಸರ್ಕಾರದಿಂದ ಸಹಾಯ ಮತ್ತು ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
3. ಎಷ್ಟು ದಿನಗಳಲ್ಲಿ ಲಾಭ ಪಡೆಯಬಹುದು? - ಈ ಸೌತೆಕಾಯಿ ಸಿದ್ಧವಾಗಲು 60 ರಿಂದ 80 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ. ಮಳೆಗಾಲದಲ್ಲಿ ಈ ಸೌತೆಕಾಯಿ ಕೃಷಿ ಹೆಚ್ಚು ಲಾಭದಾಯಕ. ಈ ಸೌತೆಕಾಯಿಯನ್ನು ಬೆಳೆಯಲು ಭೂಮಿಯ ಪಿ.ಹೆಚ್. 5.5 ರಿಂದ 6.8 ರವರೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಈ ಸೌತೆಕಾಯಿಯನ್ನು ನದಿಗಳು ಮತ್ತು ಕೊಳಗಳ ದಡದಲ್ಲಿಯೂ ಕೂಡ ಬೆಳೆಸಬಹುದು.
4. ಎಷ್ಟು ಬಂಡವಾಳದ ಅವಶ್ಯಕತೆ ಇರುತ್ತದೆ - ಇದಕ್ಕಾಗಿ, ಮೊದಲನೆಯದಾಗಿ ನೀವು ಹಸಿರು ಮನೆಯನ್ನು ತಯಾರಿಸಬೇಕು. ಯುಪಿ ರೈತ ದುರ್ಗಾ ಪ್ರಸಾದ್ ಅವರು ತಮ್ಮ ಸ್ವಂತ ಹೊಲದಲ್ಲಿ ಈ ಕೃಷಿಗಾಗಿ ಹಸಿರು ಮನೆಯನ್ನು ನಿರ್ಮಿಸಿದ್ದಾರೆ. ಆ ಬಳಿಕ ನೆದರ್ಲ್ಯಾಂಡ್ನಿಂದ 72 ಸಾವಿರ ರೂಪಾಯಿ ಮೌಲ್ಯದ ಬೀಜಗಳನ್ನು ತಂದು ಬಿತ್ತನೆ ಮಾಡಿ, 4 ತಿಂಗಳ ಬಳಿಕ 8 ಲಕ್ಷ ಮೌಲ್ಯದ ಸೌತೆಕಾಯಿ ಮಾರಾಟ ಮಾಡಿದ್ದಾರೆ. ಇದಕ್ಕಾಗಿ ದುರ್ಗಾ ಪ್ರಸಾದ್ ಅವರು ಸರ್ಕಾರದಿಂದ 18 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
5. ಈ ವ್ಯವಸಾಯಕ್ಕೆ ಭಾರಿ ಬೇಡಿಕೆ ಇದೆ - ಈ ಸೌತೆಕಾಯಿಯ ವಿಶೇಷತೆಯೆಂದರೆ, ಈ ಸೌತೆಕಾಯಿಗಳಲ್ಲಿ ಕಡಿಮೆ ಬೀಜಗಲಿರುತ್ತವೆ ಮತ್ತು ಆದ್ದರಿಂದ ಇವುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ದೇಶಿ ಸೌತೆಕಾಯಿಗಿಂತ ಇದರ ಬೆಲೆಯೂ ಹೆಚ್ಚಿರುವುದಕ್ಕೆ ಇದೇ ಕಾರಣ. ನೆದರ್ಲ್ಯಾಂಡ್ನ ಬೀಜಗಳನ್ನು ಹೊಂದಿರುವ ಈ ಸೌತೆಕಾಯಿಯನ್ನು ಕೆಜಿಗೆ 40 ರಿಂದ 45 ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಸೌತೆಕಾಯಿಗೆ ವರ್ಷವಿಡೀ ಬೇಡಿಕೆ ಇರುತ್ತದೆ.