Vivo Y53s 5G Offer on Amazon : 23 ಸಾವಿರ ಬೆಲೆಯ ಈ ಫೋನ್ ಅನ್ನು ಕೇವಲ 3 ಸಾವಿಯ ರೂ.ಗಳಿಗೆ ಖರೀದಿಸಿ

Vivo Y53s 5G Amazon Offer : ನೀವು Vivo ನ 5G ಸ್ಮಾರ್ಟ್‌ಫೋನ್, Vivo Y53s 5G ಅನ್ನು 23 ಸಾವಿರ ರೂಪಾಯಿಗಳ ಬದಲಿಗೆ 3 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಆಫರ್ ಅಮೆಜಾನ್ ನಲ್ಲಿ ಲಭ್ಯವಿದೆ. 

Written by - Ranjitha R K | Last Updated : May 14, 2022, 03:19 PM IST
  • Vivo ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾಗಿದೆ.
  • Vivo Y53s ಸ್ಮಾರ್ಟ್‌ಫೋನ್ ಅನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಬಹುದು.
  • 23 ಸಾವಿರ ರೂಪಾಯಿಗಳ ಬದಲಿಗೆ ಕೇವಲ 3 ಸಾವಿರ ರೂ.ಗೆ ಖರೀದಿ ಸಾಧ್ಯ
Vivo Y53s 5G Offer on Amazon : 23  ಸಾವಿರ ಬೆಲೆಯ ಈ ಫೋನ್ ಅನ್ನು ಕೇವಲ 3 ಸಾವಿಯ ರೂ.ಗಳಿಗೆ ಖರೀದಿಸಿ  title=
Vivo Y53s 5G Amazon Offer (file photo)

ಬೆಂಗಳೂರು : Vivo Y53s 5G Amazon Offer: Vivo ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾಗಿದೆ. ವಿವೋ ಫೋನ್‌ಗಳನ್ನು ಕೂಡಾ ಬಹಳಷ್ಟು ಜನರು ಇಷ್ಟ ಪಟ್ಟು ಖರೀದಿಸುತ್ತಾರೆ.  ಈಗ  Vivo Y53s ಸ್ಮಾರ್ಟ್‌ಫೋನ್ ಅನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಅನ್ನು 23 ಸಾವಿರ ರೂಪಾಯಿಗಳ ಬದಲಿಗೆ ಕೇವಲ 3 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. 

Vivo Y53s ಮೇಲೆ ಭಾರೀ ರಿಯಾಯಿತಿ : 
Vivo Y53s, ಫೋನ್ ಅನ್ನು  22,990 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಭಾರತೀಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ನಲ್ಲಿ 27% ರಷ್ಟು ರಿಯಾಯಿತ ನೀಡಲಾಗುತ್ತದೆ ಅಂದರೆ ಈ ರಿಯಾಯಿತಿ ನಂತರ ಈ ಫೋನ್ ಅನ್ನು 16,699  ರೂ.ಗೆ ಖರೀದಿಸಬಹುದು. ಇದನ್ನು ಖರೀದಿಸಲು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 1,500 ರೂಪಾಯಿಗಳವರೆಗೆ ಭಾರೀ ರಿಯಾಯಿತಿ ಸಿಗುತ್ತದೆ. ಇದಾದ ನಂತರ ಈ ಫೋನ್‌ನ ಬೆಲೆ 15,199 ರೂ. ಆಗುತ್ತದೆ.

ಇದನ್ನೂ ಓದಿ : ಬಿರು ಬೇಸಿಗೆಯಲ್ಲಿ ಕಾರಿನ ಎಸಿ ಕೈ ಕೊಟ್ರೆ.. ಈ 8 ಟ್ರಿಕ್ಸ್‌ ಬಳಸಿ ಕೂಲ್‌ ಆಗಿ

ವಿನಿಮಯ ಕೊಡುಗೆಯ ಲಾಭವೂ ಸಿಗಲಿದೆ : 
Vivo Y53sನ ಈ ಡೀಲ್‌ನಲ್ಲಿ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಫೋನ್ ಅನ್ನು ಖರೀದಿಸಿದರೆ 12,300 ರೂ. ವರೆಗೆ ಉಳಿಸಬಹುದು. ಈ ವಿನಿಮಯ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ,  ಈ ಸ್ಮಾರ್ಟ್‌ಫೋನ್ ಅನ್ನು  15,199 ರೂ. ಬದಲಿಗೆ 2,899 ರೂಪಾಯಿಗೆ ಖರೀದಿಸಲು ಸಾಧ್ಯವಾಗುತ್ತದೆ. ಈ ಮೂಲಕ ನೀವು 23 ಸಾವಿರ ಮೌಲ್ಯದ Vivo Y53 ಅನ್ನು Amazonನಿಂದ 2,899 ರೂ.ಗೆ ಪಡೆಯಬಹುದು.

Vivo Y53s ನ ವೈಶಿಷ್ಟ್ಯಗಳು :
Vivo Y53s 5G ಸ್ಮಾರ್ಟ್‌ಫೋನ್ ಆಗಿದ್ದು, ಇದರಲ್ಲಿ  6.58-ಇಂಚಿನ FHD + ಡಿಸ್‌ಪ್ಲೇ ಮತ್ತು 2408 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಿಗಲಿದೆ. 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ  ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಮೇನ್ ಸೆನ್ಸಾರ್ 64MP ಮತ್ತು ಇತರ ಎರಡು ಸಸೆನ್ಸಾರ್ 2-2MP. Vivo Y53s 5000mAh ಬ್ಯಾಟರಿ ಮತ್ತು 18W ಫಾಸ್ಟ್  ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದರ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 11 ಮತ್ತು ಇದು ಹೆಲಿಯೊ ಜಿ 80 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : Flipkart Turbo Carnival Sale: ಕೇವಲ 1500 ರೂಪಾಯಿಗೆ ಖರೀದಿಸಿ, Vivo 5G ಸ್ಮಾರ್ಟ್‌ಫೋನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News