ಲೋಕಸಭಾ ಚುನಾವಣೆ: ದೇಶಾದ್ಯಂತ ಪ್ರಧಾನಿ ಮೋದಿಯಿಂದ 50 ರ್ಯಾಲಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ಫೆಬ್ರವರಿ 2019 ರವರೆಗೆ 50 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Last Updated : Jul 13, 2018, 09:14 AM IST
ಲೋಕಸಭಾ ಚುನಾವಣೆ: ದೇಶಾದ್ಯಂತ ಪ್ರಧಾನಿ ಮೋದಿಯಿಂದ 50 ರ್ಯಾಲಿ title=

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ಫೆಬ್ರವರಿ 2019 ರವರೆಗೆ 50 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಅವರು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಒಳಗೊಳ್ಳಲಿವೆ.

400 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವಂತೆ ಸುಮಾರು 200 ರ್ಯಾಲಿಗಳನ್ನು ನಡೆಸಲೂ ಬಿಜೆಪಿ ತೀರ್ಮಾನಿಸಿದೆ. ಅಂದರೆ ಒಂದು ರ್ಯಾಲಿಯಲ್ಲಿ 2-3 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವಂತೆ ಮಾಡಲು ಪಕ್ಷದ ಚುನಾವಣಾ ಸಿದ್ಧತಾ ತಂಡ ಮುಂದಾಗಿದೆ. 

ಬಿಜೆಪಿ ಅಧ್ಯಕ್ಷ ಅಮಿತ್ ಷಾ, ರಾಜ್'ನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಿರಿಯ ನಾಯಕರು 50-50 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಪ್ರಧಾನಿ ಮೋದಿ ಅವರು 50 ರ್ಯಾಲಿಗಳಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌ ರಾಜ್ಯಗಳ 140ಕ್ಕೂ ಅಧಿಕ ರೈತರನ್ನು ಭೇಟಿ ಮಾಡಿದ ಬಳಿಕ ದೇಶಾದ್ಯಂತ ರೈತರ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Trending News