ಲಕ್ಷಕ್ಕೂ ಅಧಿಕ ಜನರ ಪ್ರಾಣ ಕಿತ್ತುಕೊಂಡ ವಿಶ್ವದ ಅತ್ಯಂತ ಭಯಾನಕ ದ್ವೀಪ

ಜಗತ್ತಿನಲ್ಲಿ ಇಂತಹ ಅನೇಕ ಅಪಾಯಕಾರಿ, ಭಯಾನಕ ಮತ್ತು ದುಷ್ಟ ಶಕ್ತಿಗಳಿರುವ ಸ್ಥಳಗಳಿವೆ. ಕೆಲವೊಂದು ಸ್ಥಳಗಳ ಬಗ್ಗೆ ಜನರು ಸಂಶೋಧನೆ ಮಾಡಲು ಮುಂದಾದರೂ ಸಹ ಸತ್ಯಾಂಶ ಮಾತ್ರ ಹೊರ ಬಂದಿಲ್ಲ. ಇನ್ನೂ ಕೆಲವರು ಅಂತಹ ಸ್ಥಳಗಳಿಗೆ ಹೋಗೋಕೆ ಧೈರ್ಯ ಮಾಡೋದಿಲ್ಲ. ಜಗತ್ತಿನಲ್ಲಿ ಅಂತಹದ್ದೊಂದು ದ್ವೀಪವಿದೆ. ಇದನ್ನು ಸಾಕಷ್ಟು ಭಯಾನಕವೆಂದು ಪರಿಗಣಿಸಲಾಗಿದೆ. ಆ ಸ್ಥಳ ಯಾವುದು ಎಂಬುದರ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. 

1 /5

ಇಟಲಿ ತನ್ನ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದು ಶತಮಾನಗಳಷ್ಟು ಹಳೆಯದಾದ ನಗರ. ಇಲ್ಲಿನ ಸಂಸ್ಕೃತಿ ಮತ್ತು ಸೊಬಗನ್ನು ನೋಡಿದರೆ ಎಂತವರೂ ಆಕರ್ಷಿತರಾಗುತ್ತಾರೆ. ಆದರೆ ಈ ದೇಶದಲ್ಲಿ ಭಯಾನಕತೆಯ ಅಂಶ ಕೂಡ ಹುದುಗಿದೆ ಎಂದರೆ ನೀವು ನಂಬಲೇ ಬೇಕು. ಇದರ ಹೆಸರು ಪೊವೆಗ್ಲಿಯಾ ದ್ವೀಪ. ಈ ದ್ವೀಪವು ಬಹಳಷ್ಟು ಭಯಾನಕಗಳನ್ನು ಒಳಗೊಂಡಿದೆ. 

2 /5

ಇದನ್ನು ವಿಶ್ವದ ಅತ್ಯಂತ ಭಯಾನಕ ದ್ವೀಪ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು 54 ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಇಲ್ಲಿಗೆ ಪ್ರವಾಸಿಗರಿಗೆ ಬರಲು ಅವಕಾಶವಿಲ್ಲ. 1930 ರ ಸುಮಾರಿಗೆ ಈ ಸ್ಥಳದಲ್ಲಿ ಮಾನಸಿಕ ಆಸ್ಪತ್ರೆಯನ್ನು ನಡೆಸಲಾಗುತ್ತಿತ್ತು. ಆ ಆಸ್ಪತ್ರೆಯ ನಿರ್ದೇಶಕರೊಬ್ಬರು ಇಲ್ಲಿನ ಎತ್ತರದ ಟವರ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ.

3 /5

ಪೊವೆಗ್ಲಿಯಾ ದ್ವೀಪವು ವೆನಿ ಮತ್ತು ಲಿಡೊ ನಗರಗಳ ನಡುವೆ ಇದೆ. ಇಲ್ಲಿ ಇರಿಸಲಾಗಿರುವ ಮಾನಸಿಕ ರೋಗಿಗಳ ಮೇಲೆ ಹಲವು ರೀತಿಯ ಪ್ರಯೋಗಗಳನ್ನು ಮಾಡಲಾಗಿತ್ತು ಎನ್ನಲಾಗಿದೆ. ಮೆಂಟಲ್ ಹಾಸ್ಪಿಟಲ್ ನಂತರ ಇಲ್ಲಿ ಕೆಲವು ದಿನಗಳ ಕಾಲ ನರ್ಸಿಂಗ್ ಹೋಮ್ ಕೂಡ ನಡೆಸಲಾಗಿತ್ತು. ಆದರೆ 1968 ರಿಂದ ಅದನ್ನು ಸಂಪೂರ್ಣವಾಗಿ ಮುಚ್ಚಲಾಯಿತು.

4 /5

14ನೇ ಶತಮಾನದಲ್ಲಿ ಪ್ಲೇಗ್ ಮಹಾಮಾರಿ ಇಲ್ಲಿ ಹರಡಿ ಸುಮಾರು 1 ಲಕ್ಷದ 60 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ. ಇದಾದ ನಂತರ ಎಲ್ಲಾ ಮೃತ ದೇಹಗಳನ್ನು ಸುಟ್ಟು ಹೂಳಲಾಯಿತು. ಅಂದಿನಿಂದ ಈ ಸ್ಥಳವನ್ನು ಶಾಪಗ್ರಸ್ತ ಮತ್ತು ದೆವ್ವಗಳ ತಾಣ ಎಂದು ಪರಿಗಣಿಸಲಾಗಿದೆ. ಕಳೆದ 54 ವರ್ಷಗಳಿಂದ ಇಲ್ಲಿಗೆ ಯಾರೂ ಹೋಗಿಲ್ಲ. 2015 ರಲ್ಲಿ, ಅದನ್ನು ಪುನರಾಭಿವೃದ್ಧಿ ಮಾಡಲು ಪ್ರಯತ್ನಿಸಲಾಯಿತು. ಇಲ್ಲಿ ಐಷಾರಾಮಿ ರೆಸಾರ್ಟ್ ನಿರ್ಮಿಸುವ ಮಾತು ಕೂಡ ಮುನ್ನೆಲೆಗೆ ಬಂದಿದ್ದು, ವಿಷಯ ಸಾಧ್ಯವಾಗಿಲ್ಲ.

5 /5

ಈ ದ್ವೀಪದಲ್ಲಿ ಯಾವುದೇ ಸಂಸ್ಥೆ ಹೆಚ್ಚು ಕಾಲ ಉಳಿಯುವುದಿಲ್ಲ. ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ವಿಸ್ಮಯಕಾರಿ ಸಂಗತಿಗಳು ಇಲ್ಲಿ ಆಗಾಗ ನಡೆಯುತ್ತಿರುತ್ತವೆ. ಹೀಗಾಗಿಯೃ ಈ ದ್ವೀಪವನ್ನು ಮುಚ್ಚಲಾಗಿದೆ.