Baby Olekar : ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ PSI ಬೇಬಿ : ACB ಬಲೆಗೆ ಬಿದ್ದು ವಿಲ ವಿಲ!

ಬಿಎಂಟಿಎಫ್ ಅಂದ್ರೆ ಬೆಂಗಳೂರು ಮೆಟ್ರೋ ಟಾಸ್ಕ್ ಫೋರ್ಸ್, ಇದರ ಕೆಲಸ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತ ಸರ್ಕಾರ ಸ್ವತ್ತುಗಳನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ

Written by - Manjunath Hosahalli | Last Updated : Jul 7, 2022, 07:39 PM IST
  • ಬಿಎಂಟಿಎಫ್ ಅಂದ್ರೆ ಬೆಂಗಳೂರು ಮೆಟ್ರೋ ಟಾಸ್ಕ್ ಫೋರ್ಸ್
  • ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತ ಸರ್ಕಾರ ಸ್ವತ್ತುಗಳನ್ನ ಸಂರಕ್ಷಣೆ ಜವಾಬ್ದಾರಿ
  • ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತ BMTF ಕಥೆ
Baby Olekar : ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ PSI ಬೇಬಿ : ACB ಬಲೆಗೆ ಬಿದ್ದು ವಿಲ ವಿಲ! title=

ಬೆಂಗಳೂರು : ಬಿಎಂಟಿಎಫ್ ಅಂದ್ರೆ ಬೆಂಗಳೂರು ಮೆಟ್ರೋ ಟಾಸ್ಕ್ ಫೋರ್ಸ್, ಇದರ ಕೆಲಸ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತ ಸರ್ಕಾರ ಸ್ವತ್ತುಗಳನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ. ಆದ್ರೆ ಇಲ್ಲಿನ ಅಧಿಕಾರಿಗಳು ಅದನ್ನ‌ಮಾಡೋದನ್ನ ಬಿಟ್ಟು ಭೂ ಒತ್ತುವರಿ ದಾರರು ಸೇರಿದಂತೆ ಪಾಲಿಕೆ ಕಾರ್ಪೊರೇಟರ್ ಗಳ ಬಳಿಯೇ ಸುಲಿಗೆ ಮಾಡುವ ಹಂತಕ್ಕೆ ಇಳಿದಿದ್ದು BMTF ನ ಅಧಿಕಾರಿಯೊಬ್ಬರು ಗುರುವಾರ ಮಧ್ಯಾಹ್ನ ACB ಬಲೆಗೆ ಬಿದ್ದಿದ್ದಾರೆ.

ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತ BMTF ಕಥೆ

ಹೌದು BMTF ಎಲ್ಲಿದೆ ?  ಹೇಗಿದೆ?  ಇದರ ಕಾರ್ಯವ್ಯಾಪ್ತಿ ಏನು ?  ಅನ್ನೋದು ಸಾಕಷ್ಟು ಜನರಿಗೆ ಗೊತ್ತೆ ಇಲ್ಲ. ACB ಟಾಸ್ಕ್ ಫೋರ್ಸ್, ಲೊಕಾಯುಕ್ತ, ವಿಜಿಲೆನ್ಸ್  ಯಾವರೀತಿ ಕೆಲಸ ಮಾಡುತ್ತೋ ಅದೇ ರೀತಿಯ ಕೆಲಸವನ್ನು BMTF ಮಾಡಬೇಕು. ಅದು ಕೂಡ ಬಿಬಿಎಂಪಿ ಅಧೀನದಲ್ಲಿರುವ ಅಂಗ ಸಂಸ್ಥೆ ಯಾಗಿದ್ದು ಪಾಲಿಕೆ ಆಸ್ತಿಗಳನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ ಇದರದ್ದು. ಆದ್ರೆ ಅದನ್ನ ಮಾಡದೆ ಬಿಬಿಎಂಪಿಯ ಜನಪ್ರತಿನಿಧಿಗಳ ಬಳಿಯೇ ಸುಲಿಗೆ ಮಾಡಯವ ಮಟ್ಟಕ್ಕೆ BMTF ಇಳಿದಿದ್ದು BMTF ನ PSI ಬೇಬಿ ಓಲೆಕಾರ್ ACB ಅಧಿಕಾರಿಗಳ ಅತಿಥಿ ಆಗಿದ್ದಾರೆ. 

ಇದನ್ನೂ ಓದಿ : ಪಿಎಸ್ಐ ಪ್ರಕರಣ : ಎಡಿಜಿಪಿ ಅಮೃತ್ ಪಾಲ್ ಹಠದಿಂದ ಸರ್ಕಾರಕ್ಕೆ ಗಂಡಾತರ!

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೇಬಿ

ಬಿಎಂಟಿ ಎಫ್ ನ ಪಿಎಸ್ಐ ಆಗಿರುವ ಬೇಬಿ ಓಲೇಕಾರ್ ಹೊರಮಾವಿನ ಅಗರ ಸರ್ವೆ ನಂಬರ್ 153 ರ ವ್ಯಾಜ್ಯಕ್ಕೆ ಸಂಭಂದಿಸಿದಂತೆ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.  ಈ ಪ್ರಕರಣ ಕಳೆದ 2 ವರ್ಷಗಳ ಹಿಂದೆಯೇ ಕೇಸ್ ಕ್ಲೋಸ್ ಆಗಿದ್ರೂ, ಗಿರೀಶ್ ಎಂಬ ದೂರು ದಾರನಿಗೆ ಎರಡು ತಿಂಗಳ ಹಿಂದೆ ಬೇಬಿ ಓಲೆಕಾರ್ ಕರೆ ಮಾಡಿ ನಿಮ್ಮ ಕೇಸ್ ಇನ್ನೂ  ಪೆಂಡಿಂಗ್ ಇದೆ ಬನ್ನಿ ಮಾತಾಡ್ಬೇಕು ಅಂತಾ ಹೇಳಿದ್ದಾರೆ. ಕೇಸ್ ಇನ್ವೆಷ್ಟಿಗೇಷನ್ ಮಾಡ್ಬೇಕು ಮೂರು ಲಕ್ಷ ಆಗುತ್ತೆ ಅಂತ ನೇರವಾಗಿ ಬೇಬಿ ಮೇಡಂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ದೂರುದಾರ ನಾವು ಅಷ್ಟು ದುಡ್ಡು ಕೊಡೋಕೆ ಆಗಲ್ಲ ಎಂದಾಗಿ, ಕೊನೆಗೆ ಒಂದು ಲಕ್ಷ ತಂದ್ಕೊಡಿ ಅಂತಾ ಬೇಬಿ ರವರು ಡೀಲ್ ಕುದುರಿಸಿದ್ದಾರೆ. ಅದತಂತೆ ನಿನ್ನೆ ಐವತ್ತು ಸಾವಿರ ತೆಗೆದುಕೊಂಡು ಬಿಬಿಎಂಪಿ ಆವರಣದಲ್ಲಿರುವ ಬಿಎಂಟಿಎಫ್ ಕಚೇರಿಗೆ ತರೋಕೆ ಹೇಳಿದ್ದ ಕಾರಣ, ಹೇಳಿದ್ಸ ಮೊತ್ತವನ್ನ ತೆಗೆದುಕೊಂಡು ಬೇಬಿ ಓಲೇಕರ್ ಗೆ ಕೊಡೋಕೆ ದೂರು ದಾರ ಬಂದಿದ್ದಾರೆ. ಆದ್ರೆ ಕಚೇರಿಯ ಸಿಬ್ಬಂದಿಗಳು ಮೇಡಂ ಇಲ್ಲ ನಾಳೆ‌ ಬನ್ನಿ ಎಂದು ವಾಪಸ್ ಕಳುಹಿಸಿದ್ದಾರೆ. 

ಇವತ್ತು ಒಂದು ಲಕ್ಷ ಸಮೇತ ಎಸಿಬಿ ಅಧಿಕಾರಿಗಳೊಂದಿಗೆ ಆಗಮನ

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೇಬಿ ಓಲೇಕರ್ ರವರ ವಿಚಾರ ಎಸಿಬಿಗೆ ದೂರು ದಾರ ಕಂಪ್ಲೇಂಟ್ ನೀಡಿದ್ದಾರೆ. ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಇಂದು ನೇರವಾಗಿ ದೂರುದಾರನೊಂದಿ ಬಿಎಂಟಿಎಫ್ ನ ಬೇಬಿ ಕಚೇರಿಗೆ ದಾಳಿ ನಡೆಸಿದ್ದಾರೆ. ಒಂದು ಲಕ್ಷ ಲಂಚ ಸ್ವೀಕರಿಸಿದ ಬೇಬಿ ರವರನ್ನ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.

ತಲೆ ಸುತ್ತುವ ನಾಟಕ ಆಡಿದ ಬೇಬಿ

ಎಸಿಬಿ ಅಧಿಕಾರಿಗಳ ದಾಳಿಗೆ ಸಿಕ್ಕಿದ ಕೂಡಲೇ ಬೇಬಿ ಓಲೆಕಾರ್ ವಿಲವಿಲ ಒದ್ದಾಡಿದ್ದಾರೆ.  ದುಡ್ಡು ಕೊಟ್ಟಿಲ್ಲ ಎಂದು ಅಧಿಕಾರಿಗಳ ಎದುರೇ ಹೈ ಡ್ರಾಮ ಕ್ರಿಯೆಟ್ ಮಾಡಿದ್ದಾರೆ. ಯಾವುದಕ್ಕೂ ತಲೆಕೆಡಸಿಕೊಳ್ಳದ ಎಸಿಬಿ ಅಧಿಕಾರಿಗಳು ಅವರ ಟೇಬಲ್ ಬಳಿ ಹುಡುಕಾಟ ನಡೆಸಿದಾಗ ಒಂದು ಲಕ್ಷ ಲಂಚ ಸ್ವೀಕರಿಸಿದ್ದ ದುಡ್ಡು ಸಿಕ್ಕಿದೆ.‌ ಈ ವೇಳೆ ತಲೆ ಸುತ್ತಿರೋ ಹಾಗೆ ನಾಟಕವನ್ನ ಬೇಬಿ ಮೇಡಂ ಆಡಿದ್ದಾರೆ. ಸದ್ಯ ಅರೆಸ್ಟ್ ಮಾಡಿರುವ ಅಧಿಕಾರಿಗಳು ಅವ್ರನ್ನ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ : 'ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ'

ಒಟ್ಟಾರೆ ಜನರ ಪರವಾಗಿ ಕೆಲಸ ಮಾಡಬೇಕಿರೋ ಅಧಿಕಾರಿಗಳು ಬೇನಾಮಿ ಆಸ್ತಿ, ಲಕ್ಷಲಕ್ಷ ,ಕೋಟಿ ಕೋಟಿ ಅಂತ ಭ್ರಷ್ಟಾಚಾರದ ಹಾದಿ ತುಳಿದಿದ್ದಾರೆ. ಅಂತಹರ ವಿರುದ್ಧ ಪೊಲೀಸ್ ಇಲಾಖೆ, ಎಸಿಬಿ ಅಧಿಕಾರಿಗಳ ತಂಡ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗ್ತಿದ್ದು, ಇನ್ನುಳಿದ ಭ್ರಷ್ಟರ ಎದೆ ನಡುಕ ಶುರುವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News