ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಇನ್ವರ್ಟರ್ ಎಲ್ಇಡಿ ಬಲ್ಬ್ ಗಳು ಲಭ್ಯವಿದ್ದು, ಕರೆಂಟ್ ಇಲ್ಲದಿದ್ದಾಗಲೂ ಇವುಗಳನ್ನು ಗಂಟೆಗಟ್ಟಲೆ ಬಳಸಬಹುದು.
ಮಳೆಗಾದಲ್ಲಿ ಅತಿ ಹೆಚ್ಚು ಕಾಡುವ ಸಮಸ್ಯೆ ಎಂದರೆ ವಿದ್ಯುತ್ ಕಡಿತ. ಕೆಲವೊಮ್ಮೆ ಧಾರಾಕಾರ ಮಳೆಗೆ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿರುತ್ತವೆ, ಇಲ್ಲವೇ, ವಿದ್ಯುತ್ ತಂತಿಗಳು ಧರೆಗುರುಳುತ್ತವೆ. ಈ ಕಾರಣಗಳಿಂದಾಗಿ ಹಲವು ಬಾರಿ ಗಂಟೆಗಟ್ಟಲೆ ಕರೆಂಟ್ ಇರುವುದೇ ಇಲ್ಲ. ಈ ಸಮಸ್ಯೆಯನ್ನು ತಪ್ಪಿಸಲು, ಕೆಲವರು ಇನ್ವರ್ಟರ್ಗಳನ್ನು ಸ್ಥಾಪಿಸುತ್ತಾರೆ. ಆದರೆ, ಎಲ್ಲರೂ ಸಹ ಈ ಸೌಕರ್ಯವನ್ನು ಹೊಂದಿರುವುದಿಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಇನ್ವರ್ಟರ್ ಎಲ್ಇಡಿ ಬಲ್ಬ್ ಗಳು ಲಭ್ಯವಿದ್ದು, ಕರೆಂಟ್ ಇಲ್ಲದಿದ್ದಾಗಲೂ ಇವುಗಳನ್ನು ಗಂಟೆಗಟ್ಟಲೆ ಬಳಸಬಹುದು. ಮಾತ್ರವಲ್ಲ, ಇವುಗಳಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
PHILIPS 8W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್: PHILIPS 8W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್ ಸಹ 4 ಗಂಟೆಗಳ ಬ್ಯಾಕಪ್‌ನೊಂದಿಗೆ ಬರುತ್ತದೆ. ನೀವು ಈ ಬಲ್ಬ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 399 ರೂ.ಗೆ ಖರೀದಿಸಬಹುದು.
HALONIX 12W ರೌಂಡ್ B22 ಇನ್ವರ್ಟರ್ ಬಲ್ಬ್: ದೊಡ್ಡ ಕೊಠಡಿಗಳಿಗೆ, 12W ಬಲ್ಬ್ ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ. ಕರೆಂಟ್ ಇಲ್ಲದಿದ್ದಾಗ HALONIX 12W ರೌಂಡ್ B22 ಇನ್ವರ್ಟರ್ ಬಲ್ಬ್ 4 ಗಂಟೆಗಳವರೆಗೆ ಬ್ಯಾಕಪ್ ನೀಡುತ್ತದೆ ಎನ್ನಲಾಗುತ್ತದೆ. ಈ ಬಲ್ಬ್ ಫ್ಲಿಪ್ ಕಾರ್ಟ್ ನಲ್ಲಿ ರೂ.413ಕ್ಕೆ ಲಭ್ಯವಿದೆ.
ಎವೆರೆಡಿ 9 W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್: 9 W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್ ಮನೆಯಲ್ಲಿ ತಂಪಾದ ಬೆಳಕನ್ನು ಒದಗಿಸುತ್ತದೆ. ವಿದ್ಯುತ ಇಲ್ಲದಿದ್ದಾಗ ಈ ಬಲ್ಬ್ ಗಳು 4 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 405 ರೂ.ಗೆ ಖರೀದಿಸಬಹುದು.
ಫಿಲಿಪ್ಸ್ 10W B22 LED ಎಮರ್ಜೆನ್ಸಿ ಇನ್ವರ್ಟರ್ ಬಲ್ಬ್: 10W ಬಲ್ಬ್ ಅನ್ನು ಹೆಚ್ಚಿನ ಮನೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ, ಏಕೆಂದರೆ ಕೋಣೆಗಳಲ್ಲಿ ಹೆಚ್ಚು ಬೆಳಕನ್ನು ನೀಡುತ್ತದೆ. ಆನ್ ಮಾಡಿದಾಗ ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಈ ಬಲ್ಬ್ ಲೈಟ್ ಆಫ್ ಆದಾಗ ಪೂರ್ಣ ಚಾರ್ಜ್‌ನಲ್ಲಿ 4 ಗಂಟೆಗಳವರೆಗೆ ಬ್ಯಾಕಪ್ ನೀಡಬಹುದು. ಅಂದರೆ, ಇದು ಬಲವಾದ ಬ್ಯಾಟರಿಯೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 499 ರೂ.ಗೆ ಖರೀದಿಸಬಹುದು.
Syska 9W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್: Syska 9W ಸ್ಟ್ಯಾಂಡರ್ಡ್ B22 ಇನ್ವರ್ಟರ್ ಬಲ್ಬ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ನಿಮಗೆ 9W ಬಲ್ಬ್ ಅಗತ್ಯವಿದ್ದರೆ, ನೀವು ಅದನ್ನು ಖರೀದಿಸಬಹುದು. ಇದು ಸ್ವಯಂಚಾಲಿತ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಸಂಪೂರ್ಣ ಚಾರ್ಜ್ ಮಾಡಿದ ನಂತರ, ಇದನ್ನು ವಿದ್ಯುತ್ ಇಲ್ಲದಿದ್ದರೂ 6 ಗಂಟೆಗಳ ಕಾಲ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 399 ರೂ.ಗೆ ಖರೀದಿಸಬಹುದು.