ʼ20 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದು ಆಟವಾಡಿದ ಭೂಪʼ : ಮೆಚ್ಚಿದೆ ಮಗ ನಿನ್ನ ಗುಂಡಿಗೆನಾ..!

ಹಾವುಗಳನ್ನು ನೋಡಿ ಅನೇಕರು ಭಯಭೀತರಾಗುತ್ತಾರೆ. ಕೆಲ ವಿಷಕಾರಿ ಸರ್ಪಗಳು ಮಾನವನ ಸಾವಿಗೆ ಕಾರಣವಾಗುತ್ತವೆ. ಹಾವಿನ ವಿಷ ದೇಹದಲ್ಲಿ ಸೇರಿದರೆ ಮನುಷ್ಯ ಸಾಯುವ ಅವಕಾಶಗಳು ಅಧಿಕ. ಹೀಗಿದ್ದರೂ ಆಹಾರ ಹರಸಿ ಮನೆಗೆ ಬಂದ ಹಾವುಗಳನ್ನು ಹಿಡಿಯುವ ಸ್ನೆಕ್ ಕ್ಯಾಚರ್ಸ್ ಸಾಹಸ ರೋಚಕವಾಗಿರುತ್ತದೆ. 

Written by - Krishna N K | Last Updated : Sep 17, 2022, 08:20 PM IST
  • ಆಹಾರ ಹರಸಿ ಮನೆಗೆ ಬಂದ ಹಾವುಗಳನ್ನು ಹಿಡಿಯುವ ಸ್ನೆಕ್ ಕ್ಯಾಚರ್ಸ್ ಸಾಹಸ ರೋಚಕ
  • ಸ್ನೆಕ್‌ ಕ್ಯಾಚರ್‌ ಒಬ್ಬರು 20 ಅಡಿ ಉದ್ದದ ಹಾವನ್ನು ಹಿಡಿಯುವ ವಿಡಿಯೋ ಒಂದು ಯೂಟೂಬ್‌ನಲ್ಲಿ ವೈರಲ್‌
  • ಕಾಳಿಂಗ್‌ ಸರ್ಪವನ್ನು ಹಿಡಿಯುವ ವಿಡಿಯೋದಲ್ಲಿನ ದೃಶ್ಯಗಳು ಎಲ್ಲರಿಗೂ ಭಯ ಹುಟ್ಟಿಸುವಂತಿವೆ.
ʼ20 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದು ಆಟವಾಡಿದ ಭೂಪʼ : ಮೆಚ್ಚಿದೆ ಮಗ ನಿನ್ನ ಗುಂಡಿಗೆನಾ..! title=

King Cobra Caught : ಹಾವುಗಳನ್ನು ನೋಡಿ ಅನೇಕರು ಭಯಭೀತರಾಗುತ್ತಾರೆ. ಕೆಲ ವಿಷಕಾರಿ ಸರ್ಪಗಳು ಮಾನವನ ಸಾವಿಗೆ ಕಾರಣವಾಗುತ್ತವೆ. ಹಾವಿನ ವಿಷ ದೇಹದಲ್ಲಿ ಸೇರಿದರೆ ಮನುಷ್ಯ ಸಾಯುವ ಅವಕಾಶಗಳು ಅಧಿಕ. ಹೀಗಿದ್ದರೂ ಆಹಾರ ಹರಸಿ ಮನೆಗೆ ಬಂದ ಹಾವುಗಳನ್ನು ಹಿಡಿಯುವ ಸ್ನೆಕ್ ಕ್ಯಾಚರ್ಸ್ ಸಾಹಸ ರೋಚಕವಾಗಿರುತ್ತದೆ. 

ಸ್ನೆಕ್‌ ಕ್ಯಾಚರ್‌ ಒಬ್ಬರು 20 ಅಡಿ ಉದ್ದದ ಹಾವನ್ನು ಹಿಡಿಯುವ ವಿಡಿಯೋ ಒಂದು ಯೂಟೂಬ್‌ನಲ್ಲಿ ವೈರಲ್‌ ಆಗುತ್ತಿದ್ದು, ಯುವಕನ ಧೈರ್ಯಕ್ಕೆ ನೆಟ್ಟಿಗರು ಸಲಾಂ ಎಂದಿದ್ದಾರೆ. ಪ್ರಸ್ತುತ ಭೂಮಿಯ ಮೇಲೆ ಇರುವ ಹಾವುಗಳಲ್ಲಿ ಅಧಿಕ ಹಾವುಗಳು ಮಾನವರಿಗೆ ಹಾನಿಯನ್ನುಂಟುಮಾಡುತ್ತವೆ. ಆದಾಗ್ಯೂ ಇತ್ತೀಚೆಗೆ ಸ್ನೆಕ್ ಕ್ಯಾಚರ್ಸ್‌ ನಗರ ಪ್ರದೇಶಕ್ಕೆ ನುಗ್ಗಿದ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದಾರೆ. ಸದ್ಯ ಕಾಳಿಂಗ್‌ ಸರ್ಪವನ್ನು ಹಿಡಿಯುವ ವಿಡಿಯೋದಲ್ಲಿನ ದೃಶ್ಯಗಳು ಎಲ್ಲರಿಗೂ ಭಯ ಹುಟ್ಟಿಸುವಂತಿವೆ.

ಇದನ್ನೂ ಓದಿ: Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚ ಲುಕ್‌ಗೆ ಫ್ಯಾನ್ಸ್‌ ಫಿದಾ

ವೀಡಿಯೊವನ್ನು ಗಮನಿಸಿದರೆ ಭಯಂಕರವಾದ ಕಿಂಗ್ ಕೋಬ್ರಾ ಒಂದು ಮನೆಗೆ ಪ್ರವೇಶಿಸುತ್ತದೆ. ಆ ಮನೆಯ ಮಾಲೀಕ ಸ್ನೇಕ್ ಕ್ಯಾಚರ್‌ಗೆ ಮಾಹಿತಿ ನೀಡುತ್ತಾನೆ. ಮನೆಗೆ ಬಂದ ಕ್ಯಾಚರ್‌ ಭಯಂಕರವಾಗಿ ಬುಸುಗುಟ್ಟುತ್ತಿದ್ದ ನಾಗನ ಎದುರು ನಿಂತು ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದ್ರೆ ಕಿಂಗ್ ಕೋಬ್ರಾ ಕೋಪಗೊಂಡು ಸ್ನೆಕ್‌ ಕ್ಯಾಚರ್‌ನ ಮೇಲೆ ಅಟ್ಯಾಕ್‌ ಮಾಡುತ್ತದೆ. ಮೈತುಂಬ ಕಣ್ಣಾಗಿಸಿಕೊಂಡಿದ್ದ ವ್ಯಕ್ತಿ ಹಾವಿನ ಕಡಿತದಿಂದ ಜಸ್ಟ್‌ ಮಿಸ್‌ ಆಗ್ತಾನೆ. ಮತ್ತೊಂದು ಬಾರಿ ಕಡಿಯಲು ಯತ್ನಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಕಟ್ಟಿಗೆಯನ್ನು ಬಳಸುತ್ತಾನೆ. ಹೀಗೆ ಹಾವಿನೊಂದಿಗೆ ಸೆಣಸಾಟಕ್ಕೆ ನಿಲ್ಲುತ್ತಾನೆ.

 

ಸ್ವಲ್ಪ ಸಮಯ ಪ್ರಯತ್ನಿಸಿ ಕೈಯಲ್ಲಿ ಹಾವನ್ನು ಹಿಡಿದು ಸಾಹಸಮಯ ಆಟವಾಡುತ್ತಾನೆ. ನಂತರ ಅದನ್ನು ಚೀಲದೊಳಗೆ ಹಾಕಿಕೊಳ್ಳುತ್ತಾನೆ. ಈ ಎಲ್ಲಾ ದೃಶ್ಯಗಳು ಭಯವನ್ನುಂಟುಮಾಡುವಂತಿವೆ. ಒಟ್ಟಾರೆಯಾಗಿ ಹೀಗೆ ಸ್ನೆಕ್ ಕ್ಯಾಚರ್ಸ್ ಅವರ ಪ್ರಾಣಗಳನ್ನು ಪಣವಾಗಿಟ್ಟು ಹಾವುಗಳನ್ನು ರಕ್ಷಿಸುತ್ತಿದ್ದಾರೆ. ಆದ್ರೆ ಅವರು ಅದಕ್ಕಾಗಿಯೇ ವಿಶೇಷ ತರಬೇತಿ ಪಡೆದಿರುತ್ತಾರೆ. ಯಾರೂ ಸಹ ತರಬೇತಿ ಇಲ್ಲದೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News