Gold Price Today : ಇಳಿಕೆಯಾಯಿತು ಚಿನ್ನದ ಬೆಲೆ, ಏರಿಕೆಯಾಯಿತು ಬೆಳ್ಳಿ ದರ

Gold Price Today :  ವಾರದ ಮೊದಲೆರಡು ದಿನಗಳಲ್ಲಿ ತಟಸ್ಥವಾಗಿದ್ದ ಚಿನ್ನದ ಬೆಲೆಯಲ್ಲಿ ನಂತರ ಏರಿಕೆ ಇಳಿಕೆ ಕಂಡು ಬರುತ್ತಿದೆ.   

Written by - Ranjitha R K | Last Updated : Sep 22, 2022, 08:04 AM IST
  • ಅಗ್ಗವಾಯಿತು ಚಿನ್ನದ ಬೆಲೆ
  • ಬೆಳ್ಳಿ ದರ ಮಾತ್ರ ಏರಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಇಳಿಕೆಯಾಯಿತು ಚಿನ್ನದ ಬೆಲೆ, ಏರಿಕೆಯಾಯಿತು ಬೆಳ್ಳಿ ದರ  title=
Gold silver price today

ಬೆಂಗಳೂರು : Gold Price Today : ವಾರದ ಮೊದಲೆರಡು ದಿನಗಳಲ್ಲಿ ತಟಸ್ಥವಾಗಿದ್ದ ಚಿನ್ನದ ಬೆಲೆಯಲ್ಲಿ ನಂತರ ಏರಿಕೆ ಇಳಿಕೆ ಕಂಡು ಬರುತ್ತಿದೆ.  ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ದಾಖಲಾಗಿದೆ. ಹಳದಿ ಲೋಹದ ಬೆಲೆ ಇಳಿಕೆಯಾಗುವುದರೊಂದಿಗೆ  24 ಕ್ಯಾರೆಟ್ ಚಿನ್ನದ ಬೆಲೆ 49,960 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 45800 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ      22 ಕ್ಯಾರೆಟ್ ಚಿನ್ನದ ಬೆಲೆ     24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 46,500 50,730
 ಮುಂಬಯಿ 45,800 49,960
ದೆಹಲಿ 45,950 50,110
ಕೋಲ್ಕತ್ತಾ 45,800 49,960
ಬೆಂಗಳೂರು 45,850 50,040
ಹೈದರಾಬಾದ್ 45,800 49,960
ಕೇರಳ 45,800 49,960

ಇದನ್ನೂ ಓದಿ ಬೋನಸ್ ವಾಪಸ್ ಕೊಡಲು ನೌಕರರಿಗೆ ಕಟ್ಟಪ್ಪಣೆ ಹೊರಡಿಸಿದ ಹೊಂಡಾ...!

ಸತತ ಎರಡು ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇಂದು ಕೂಡ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 62,200
 ಮುಂಬಯಿ 57,400
ದೆಹಲಿ 57,400
ಕೋಲ್ಕತ್ತಾ 57,400
ಬೆಂಗಳೂರು 62,200
ಹೈದರಾಬಾದ್ 62,200
ಕೇರಳ 62,200

ಇದನ್ನೂ ಓದಿ : TATA SUV: ಟಾಟಾದ ಅತ್ಯಂತ ಚಿಕ್ಕ SUVಯ ವಿಶೇಷ ಆವೃತ್ತಿ ನಾಳೆ ಬಿಡುಗಡೆ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News