7th Pay Commission DA Hike Update : ಜುಲೈನಿಂದ 65 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ 28 ರಂದು ಸರ್ಕಾರವು ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು. ಆದರೆ , ಈ ಘೋಷಣೆಗೂ ಮುನ್ನ ಸರ್ಕಾರಿ ನೌಕರರಿಗೆ ಸರ್ಕಾರ ಆಘಾತ ನೀಡಿದೆ. 7ನೇ ವೇತನ ಆಯೋಗದ ಪ್ರಕಾರ ಬಡ್ತಿಗಾಗಿ ಕನಿಷ್ಠ ಸೇವಾ ಷರತ್ತುಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕನಿಷ್ಠ ಸೇವಾ ಷರತ್ತುಗಳನ್ನು ಬದಲಿಸಲು ನಿರ್ಧಾರ :
ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಟ್ರೈನಿಂಗ್ ಸೆ.20ರಂದು ಹೊರಡಿಸಿರುವ ಕಚೇರಿ ಜ್ಞಾಪಕ ಪತ್ರದಲ್ಲಿ ಬಡ್ತಿಗೆ ಕನಿಷ್ಠ ಸೇವಾ ಷರತ್ತುಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಉಲ್ಲೇಖಿಸಿದೆ. 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಸೂಕ್ತ ತಿದ್ದುಪಡಿಗಳನ್ನು ಮಾಡುವ ಮೂಲಕ ಬಡ್ತಿಗೆ ಅಗತ್ಯವಿರುವ ಬದಲಾವಣೆಗಳನ್ನು ನೇಮಕಾತಿ ನಿಯಮಗಳು/ಸೇವಾ ನಿಯಮಗಳಲ್ಲಿ ಅಳವಡಿಸಿಕೊಳ್ಳಬಹುದು ಎಂದು ಇಲಾಖೆ ಸೂಚಿಸಿದೆ.
ಇದನ್ನೂ ಓದಿ : Gold Price Today : ಇಳಿಕೆಯಾಯಿತು ಚಿನ್ನದ ಬೆಲೆ, ಏರಿಕೆಯಾಯಿತು ಬೆಳ್ಳಿ ದರ
ಪ್ರಮೋಷನ್ ಬೇಕೆಂದರೆ ಇಷ್ಟು ವರ್ಷ ದುಡಿಯಬೇಕು :
ಎಲ್ಲಾ ಸಚಿವಾಲಯಗಳು ಇಲಾಖೆಗಳು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ ನೇಮಕಾತಿ ನಿಯಮಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ತಿದ್ದುಪಡಿ ನಿಯಮಗಳ ಪ್ರಕಾರ, ಹಂತ 1 ಮತ್ತು ಹಂತ 2 ಕ್ಕೆ ಮೂರು ವರ್ಷಗಳ ಸೇವೆಯನ್ನು ಹೊಂದಿರುವುದು ಅವಶ್ಯಕ. ಹಂತ 6 ರಿಂದ 11 ನೇ ಹಂತಕ್ಕೆ 12 ವರ್ಷಗಳ ಸೇವೆ ಅಗತ್ಯ. ಈ ನಡುವೆ ಹಂತ 7 ಮತ್ತು ಹಂತ 8 ಗೆ, ಕೇವಲ ಎರಡು ವರ್ಷಗಳ ಸೇವೆಯ ಕಡ್ದಾಯವಾಗಿರುತ್ತದೆ. ಬದಲಾವಣೆಯ ನಂತರ ಹೊಸ ಸೇವಾ ನಿಯಮಗಳು ಏನಿರಲಿದೆ ನೋಡೋಣ.
ಏಳನೇ ವೇತನ ಆಯೋಗದ ಅಡಿಯಲ್ಲಿ, ಮಾರ್ಚ್ 2022 ರಲ್ಲಿ ಕೇಂದ್ರ ನೌಕರರ DA ಅನ್ನು ಹೆಚ್ಚಿಸಲಾಗಿದೆ. ಆಗ ಸರ್ಕಾರ ಅದನ್ನು ಶೇ.3ರಷ್ಟು ಹೆಚ್ಚಿಸಿತ್ತು. ಈ ಮೂಲಕ ತುಟ್ಟಿ ಭತ್ಯೆ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿತ್ತು. ಜುಲೈನಿಂದ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಬಾಕಿ ಇದೆ.
ಇದನ್ನೂ ಓದಿ : ನಿಮ್ಮ PPF ಖಾತೆಯ ಅವಧಿ ಮುಗಿದಿದೆಯೇ? ತ್ವರಿತವಾಗಿ ಮಾಡಿ ಈ ಕೆಲಸ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.