New Rules From 1st November 2022: ಶ್ರೀಸಾಮಾನ್ಯನ ಜೇಬಿನ ಮೇಲೆ ನೇರ ಪ್ರಭಾವ ಬೀರುವ ನವೆಂಬರ್ ತಿಂಗಳ ಬದಲಾವಣೆಗಳು ಇಲ್ಲಿವೆ

New Rules From 1st November 2022: ನವೆಂಬರ್ 1, 2022 ರಿಂದ ಹಲವು ನಿಯಮಗಳು ಬದಲಾಗುತ್ತಿದ್ದು, ಇವು ಶ್ರೀಸಾಮಾನ್ಯನ ಜೀವನದ ಮೇಲೆ ನೇರ ಪ್ದ್ರಭಾವ ಬೀರಲಿವೆ. ಇದರ ಅಡಿಯಲ್ಲಿ, ವಿಮೆ, ಎಲ್‌ಪಿಜಿ ಖರೀದಿ, ವಿದ್ಯುತ್ ಸಬ್ಸಿಡಿ, ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಸೇರಿದಂತೆ ಹಲವು ನಿಯಮಗಳು ಬದಲಾಗುತ್ತವೆ. 

New Rules From 1st November 2022: ನವೆಂಬರ್ 1, 2022 ರಿಂದ ಹಲವು ನಿಯಮಗಳು ಬದಲಾಗುತ್ತಿದ್ದು, ಇವು ಶ್ರೀಸಾಮಾನ್ಯನ ಜೀವನದ ಮೇಲೆ ನೇರ ಪ್ದ್ರಭಾವ ಬೀರಲಿವೆ. ಇದರ ಅಡಿಯಲ್ಲಿ, ವಿಮೆ, ಎಲ್‌ಪಿಜಿ ಖರೀದಿ, ವಿದ್ಯುತ್ ಸಬ್ಸಿಡಿ, ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಸೇರಿದಂತೆ ಹಲವು ನಿಯಮಗಳು ಬದಲಾಗುತ್ತವೆ. ಇದು ಪಿಎಂ ಕಿಸಾನ್ ಯೋಜನೆಯಂತಹ ದೊಡ್ಡ ಯೋಜನೆಗಳಲ್ಲಿನ ಬದಲಾವಣೆಯನ್ನು ಸಹ ಒಳಗೊಂಡಿದೆ. ಇವುಗಳಲ್ಲಿ ಕೆಲವು ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವ ಬೀರುತ್ತವೆ. ಬನ್ನಿ ಅವು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Investment Tips: ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದನ್ನು ಬಿಟ್ರೆ, ನೀವು ಕೋಟ್ಯಾಧೀಶರಾಬಹುದು ಗೊತ್ತಾ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

1, ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ, ವಿದ್ಯುತ್ ಮೇಲಿನ ಸಬ್ಸಿಡಿಗಾಗಿ ನೋಂದಾಯಿಸಿಕೊಳ್ಳದ ಜನರಿಗೆ ನವೆಂಬರ್ 1 ರಿಂದ ಈ ಸಬ್ಸಿಡಿ ಸಿಗುವುದಿಲ್ಲ ಎನ್ನಲಾಗಿದೆ. ದೆಹಲಿಯ ಜನರು ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಮತ್ತು ಅದಕ್ಕಾಗಿ ಅವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.  

2 /6

2. ಮಾಧ್ಯಮ ವರದಿಗಳ ಪ್ರಕಾರ, ಆಕಾಶ್ ಏರ್ ಮುಂದಿನ ತಿಂಗಳಿನಿಂದ ನಿಮ್ಮ ಸಾಕು ಪ್ರಾಣಿಯನ್ನೂ ಕೂಡ ನೀವು ವಿಮಾನದಲ್ಲಿ ಕರೆದುಕೊಂಡು ಹೋಗಬಹುದು ಎಂದು ಹೇಳಿದೆ. ಇದರೊಂದಿಗೆ ಕಂಪನಿಯು ನವೆಂಬರ್‌ನಿಂದ ಕಾರ್ಗೋ ಸೇವೆಯನ್ನು ಸಹ ಆರಂಭಿಸುತ್ತಿದೆ. ಅಂದರೆ, ನವೆಂಬರ್‌ನಿಂದ ಅನೇಕ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ.  

3 /6

3. ನವೆಂಬರ್ 1 ರಿಂದ ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಇನ್ಮುಂದೆ ಫಲಾನುಭವಿ ರೈತರು ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆಯಿಂದ ತಮ್ಮ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಮತ್ತು ಇದಕ್ಕಾಗಿ ಅವರು ಇದೀಗ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ, ಆದರೆ ಈ ಹಿಂದೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಅವರು ಯಾವುದೇ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯಿಂದ ತಮ್ಮ ಸ್ಥಿತಿಯನ್ನು ಪರಿಶೀಲಿಸಬಹುದಾಗಿತ್ತು..  

4 /6

4. ನವೆಂಬರ್ 1 ರಿಂದ ಜಿಎಸ್‌ಟಿ ರಿಟರ್ನ್ಸ್‌ನಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರ ಅಡಿಯಲ್ಲಿ, 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರು ಜಿಎಸ್‌ಟಿ ರಿಟರ್ನ್‌ನಲ್ಲಿ ಹಿಂದಿನ ಎರಡು-ಅಂಕಿಯ ಎಚ್‌ಎಸ್‌ಎನ್ ಕೋಡ್‌ಗೆ ವಿರುದ್ಧವಾಗಿ ನಾಲ್ಕು-ಅಂಕಿಯ ಎಚ್‌ಎಸ್‌ಎನ್ ಕೋಡ್ ಅನ್ನು ನಮೂದಿಸುವುದು ಇನ್ಮುಂದೆ ಕಡ್ದಾಯವಾಗಿರಲಿದೆ. ಈ ಮೊದಲು, ಐದು ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ತೆರಿಗೆದಾರರು ಏಪ್ರಿಲ್ 1 ರಿಂದ ನಾಲ್ಕು ಅಂಕಿಗಳ ಕೋಡ್ ಮತ್ತು ನಂತರ ಆಗಸ್ಟ್ 1 ರಿಂದ ಆರು ಅಂಕಿಗಳ ಕೋಡ್ ಅನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.  

5 /6

5. ನವೆಂಬರ್ 1 ರಿಂದ LPG ಸಿಲಿಂಡರ್ ಅನ್ನು ಬುಕ್ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್‌ಗೆ OTP ಬರುತ್ತದೆ. ನೀವು ಗ್ಯಾಸ್ ವಿತರಣೆಯ ಸಮಯದಲ್ಲಿ OTP ಅನ್ನು ಹೇಳಬೇಕಾಗುತ್ತದೆ, ಆಗ ಮಾತ್ರ ನೀವು ಅದನ್ನು ಪಡೆಯಲು ಸಾಧ್ಯ. ಯಾವುದೇ ರೀತಿಯ ವಂಚನೆಯನ್ನು ತಡೆಯಲು ಸರ್ಕಾರ ಅದನ್ನು ಇದೀಗ ಕಡ್ಡಾಯಗೊಳಿಸಿದೆ. ವಾಸ್ತವದಲ್ಲಿ, ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಬದಲಾವಣೆಯ ಸಾಧ್ಯತೆಯಿದೆ, ಏಕೆಂದರೆ ಪ್ರತಿ ತಿಂಗಳ ಮೊದಲ ದಿನದಂದು ಈ ದರವನ್ನು ಪರಿಷ್ಕರಿಸಲಾಗುತ್ತದೆ.  

6 /6

6. ನವೆಂಬರ್ 1 ರಿಂದ, ವಿಮಾ ನಿಯಂತ್ರಕ IRDA ಜೀವೇತರ ವಿಮಾ ಪಾಲಿಸಿಗಳನ್ನು ಖರೀದಿಸಲು KYC ಅನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಜೀವ ವಿಮೆಗೆ ಮಾತ್ರ ಇದು ಕಡ್ಡಾಯವಾಗಿತ್ತು ಮತ್ತು ಆರೋಗ್ಯ ಮತ್ತು ವಾಹನ ವಿಮೆಯಂತಹ ಜೀವ ವಿಮಾ ಪಾಲಸಿಗಳಲ್ಲಿ  1 ಲಕ್ಷ ರೂ.ಗಿಂತ ಹೆಚ್ಚಿನ ಕ್ಲೈಮ್‌ಗಳ ಸಂದರ್ಭದಲ್ಲಿ ಇದು ನವೆಂಬರ್ 1 ರಿಂದ ಕಡ್ಡಾಯವಾಗಿರಲಿದೆ.