ಮಧುಮೇಹಿಗಳಿಗೆ ದಿವೌಷಧ ʼಈʼ ಬೀಜ.. ಹೀಗೆ ಸೇವಿಸಿದ್ರೆ ಮತ್ತೆಂದೂ ಹೆಚ್ಚಾಗಲ್ಲ ಬ್ಲಡ್‌ ಶುಗರ್!!

‌ Flax seeds to control Blood Sugar: ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸಿದರೆ ಅಗಸೆಬೀಜವು ಪ್ರಯೋಜನಕಾರಿಯಾಗಿದೆ.  
 

1 /7

 ಚಿಕ್ಕದಾಗಿ ಕಾಣುವ ಅಗಸೆ ಬೀಜಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾದ ನಾರಿನಂಶವಿದ್ದು, ನಿಯಮಿತವಾಗಿ ಸೇವಿಸುವ ಮೂಲಕ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು.   

2 /7

ಅಗಸೆ ಬೀಜಗಳು ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿ. ಫೈಬರ್, ಪ್ರೋಟೀನ್, ಮೆಗ್ನೀಸಿಯಮ್ ಮತ್ತು ರಂಜಕ ಸೇರಿದಂತೆ ಅನೇಕ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಕಂಡುಬರುತ್ತವೆ. ಇದೀಗ ಇದರ ಆಶ್ಚರ್ಯಕರ ಪ್ರಯೋಜನಗಳನ್ನು ತಿಳಿಯೋಣ.  

3 /7

ಇತ್ತೀಚಿನ ದಿನಗಳಲ್ಲಿ, ಕೊಲೆಸ್ಟ್ರಾಲ್ ಸಮಸ್ಯೆಯು ಚಿಕ್ಕ ವಯಸ್ಸಿನಲ್ಲಿ ಕಂಡುಬರುತ್ತಿದೆ. ಅಲ್ಲದೇ ಹೃದಯಾಘಾತಕ್ಕೆ, ಅಧಿಕ ಕೊಲೆಸ್ಟ್ರಾಲ್ ಮಟ್ಟವು ಒಂದು ಕಾರಣವೆಂದು ಕಂಡುಬಂದಿದೆ.   

4 /7

ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸಿದರೆ, ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

5 /7

ರಕ್ತದೊತ್ತಡವು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.. ಇದು ಹೃದಯದ ಮೇಲೆ ನೇರ ಪರಿಣಾಮ ಬೀರಿ.. ಹೃದಯಾಘಾತಕ್ಕೂ ಕಾರಣವಾಗಬಹುದು. ಹೀಗಾಗಿ ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸಿದರೆ ಬಿಪಿಯನ್ನು ನಿಯಂತ್ರಿಸಬಹುದು.    

6 /7

ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಮಧುಮೇಹಿಗಳು ಅಗಸೆ ಬೀಜಗಳಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಈ ಬೀಜಗಳು ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಬಿಡದೇ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

7 /7

(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)