ಒಮ್ಮೆ ಚಾರ್ಜ್‌ ಮಾಡಿದ್ರೆ 195KM ಗ್ಯಾರಂಟಿ!; ಭಾರತದ ಟಾಪ್ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು

Top 5 Electric Scooters in India: Ola S1 Pro ಎಲೆಕ್ಟ್ರಿಕ್‌ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಅತ್ಯಧಿಕ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿದ್ರೆ ಸಾಕು 195 ಕಿಮೀ ಕ್ರಮಿಸುತ್ತದೆ.

Top 5 Electric Scooters: ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಹವಾ ಜೋರಾಗಿದೆ. ಹಲವಾರು ಕಂಪನಿಗಳ ಇ-ಸ್ಕೂಟರ್‌ಗಳ ಮಾರಾಟದ ಭರಾಟೆ ಜೋರಾಗಿದೆ. ಬಹುತೇಕರು ಇಂದು ಇ-ಸ್ಕೂಟರ್‌ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ. ಒಂದೇ ಒಂದು ಸಾರಿ ಚಾರ್ಜ್‌ ಮಾಡಿದ್ರೆ ೧೫೦-೨೦೦ ಕಿಮೀವರೆಗೂ ಮೈಲೇಜ್‌ ನೀಡುವ ಇ-ಸ್ಕೂಟರ್‌ಗಳು ದೇಶೀಯ ಮಾರುಕಟ್ಟೆಯಲ್ಲಿವೆ. ಹೀಗಾಗಿ ಗ್ರಾಹಕರ ಗಮನವಿಗ ಅತಿಹೆಚ್ಚು ಮೈಲೇಜ್‌ ನೀಡುವ ಇ-ಸ್ಕೂಟರ್‌ಗಳ ಮೇಲೆ ನೆಟ್ಟಿದೆ. ಇ-ಸ್ಕೂಟರ್‌ ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಸವಾರಿ ಶ್ರೇಣಿ. ಇದರ ವ್ಯಾಪ್ತಿಯು EVಯ ಬ್ಯಾಟರಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪವರ್‌ಫುಲ್‌ ಬ್ಯಾಟರಿಯೊಂದಿಗೆ ವಾಹನವು ಒಂದೇ ಚಾರ್ಜ್‌ನಲ್ಲಿ ಹೆಚ್ಚು ದೂರ ಪ್ರಯಾಣಿಸಬಹುದು. ‌EV ತಯಾರಿಕಾ ಕಂಪನಿಗಳು ಗ್ರಾಹಕರ ಆದ್ಯತೆಗೆ ಅನುಸಾರವಾಗಿ ವಿವಿಧ ವಿಭಾಗಗಳಲ್ಲಿ ವಾಹನಗಳನ್ನು ತಯಾರಿಸುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿರುವ ಟಾಪ್‌ 5 ಇ-ಸ್ಕೂಟರ್‌ಗಳು ಯಾವುವು ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Ola S1 Pro ಎಲೆಕ್ಟ್ರಿಕ್‌ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಅತ್ಯಧಿಕ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿದ್ರೆ ಸಾಕು 195 ಕಿಮೀ ಕ್ರಮಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 120 ಕಿಮೀ. Ola S1 Pro ಎಕ್ಸ್‌ ಶೋರೂಂ ಬೆಲೆ 1.32 ಲಕ್ಷ ರೂ. ಇದೆ. ನ್ಯಾವಿಗೇಷನ್‌, TFT ಡ್ಯಾಶ್‌, ಮ್ಯೂಸಿಕ್‌ ಸ್ಪೀಕರ್‌ಗಳು ಮತ್ತು ಇತರ ಹಲವಾರು ವೈಶಿಷ್ಟ್ಯಗಳೊಂದಿಗೆ ಇದು ಗ್ರಾಹಕರ ಗಮನ ಸೆಳೆದಿದೆ. 

2 /5

ಓಕಿನಾವಾ ಬ್ರ್ಯಾಂಡ್‌ ಭಾರತೀಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಇ-ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟರ್‌ Okhi-90 160ಕಿಮೀವರೆಗೆ ಸವಾರಿ ಶ್ರೇಣಿಯನ್ನು ನೀಡುತ್ತದೆ. ವಾಹನದ ಗರಿಷ್ಠ ವೇಗ ಗಂಟೆಗೆ 90 ಕೀಮೀ ಇದೆ. ಇದರ ಎಕ್ಸ್‌ ಶೋರೂಂ ಬೆಲೆ 1.86 ಲಕ್ಷ ರೂ. ಇದೆ. Okhi-90 ಮಾದರಿಯು 16 ಇಂಚಿನ ಚಕ್ರಗಳೊಂದಿಗೆ ಬರುತ್ತದೆ. ಇದು ಕಂಪನಿಯ ಶ್ರೇಣಿಯಲ್ಲಿನ ಪ್ರಮಾಣಿತ ವೈಶಿಷ್ಟ್ಯವಾಗಿದೆ. 

3 /5

ಒಕಾಯಾ ಕಂಪನಿಯು ಭಾರತೀಯ ಎಲೆಕ್ಟ್ರಿಕ್‌ ಸ್ಕೂಟರ್ ಬ್ರಾಂಡ್ ಆಗಿದೆ. ಈ ಕಂಪನಿಯಿಂದ ಮಾರುಕಟ್ಟೆಗೆ ಬಂದಿರುವ ಒಕಾಯಾ ಫಾಸ್ಟ್ ಮಾದರಿಯು ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಎಕ್ಸ್ ಶೋರೂಂ ಬೆಲೆ 1.44 ಲಕ್ಷ ರೂ. ಇದೆ. ಈ ವಾಹನವು ಗಂಟೆಗೆ 70 ಕಿಮೀ ಗರಿಷ್ಠ ವೇಗ ಮತ್ತು 160 ಕಿಮೀ ರೈಡಿಂಗ್ ಶ್ರೇಣಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

4 /5

ಬೆಂಗಳೂರು ಮೂಲದ ಭಾರತೀಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬ್ರ್ಯಾಂಡ್‌ Ather ಎನರ್ಜಿ ಮಾರುಕಟ್ಟೆಗೆ ವಿವಿಧ ಇ-ಸ್ಕೂಟರ್‌ಗಳನ್ನು ಪರಿಚಯಿಸಿದೆ. ಈ ಪೈಕಿ Ather Rizta 159KM ರೈಡಿಂಗ್‌ ಶ್ರೇಣಿಯನ್ನು ನೀಡುತ್ತದೆ. ಇದರ ಎಕ್ಸ್‌ ಶೋರೂಂ ಬೆಲೆ 1.11 ಲಕ್ಷ ರೂ. ಇದೆ. ದಿನಸಿ & ಇತರ ಅಗತ್ಯ ವಸ್ತು ಸಾಗಿಲು ಇದು ಉತ್ತಮ ಬೂಟ್‌ಸ್ಪೇಸ್‌ ಸಹ ಹೊಂದಿದೆ.

5 /5

ಈಥರ್ 450 ಅಪೆಕ್ಸ್ ಎಲೆಕ್ಟ್ರಿಕ್‌ ಸ್ಕೂಟರ್ ಕಂಪನಿಯ 450 ಸರಣಿಯ ಉನ್ನತಮಟ್ಟದ ಆವೃತ್ತಿಯಾಗಿದೆ. ಇದು 157km ರೈಡಿಂಗ್ ಶ್ರೇಣಿ, 100kmph ಗರಿಷ್ಠ ವೇಗ ಮತ್ತು ಇತರ ಹಲವಾರು ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಸ್ಕೂಟರ್‌ನ ಬೆಲೆ 1.96 ಲಕ್ಷ (ಎಕ್ಸ್ ಶೋರೂಂ) ರೂ. ಇದೆ.