ಮನೆಯಿಂದಲೇ ಹಣ ಗಳಿಸಬಹುದಾದ 5 ಉತ್ತಮ ಮಾರ್ಗಗಳು ಇವು, ನೀವು ಕೂಡಾ ಟ್ರೈ ಮಾಡಬಹುದು

ಮನೆಯಲ್ಲಿ ಕುಳಿತು ಹಣ ಗಳಿಸುವ ಪಟ್ಟಿಯಲ್ಲಿ Pop-up Meal ಅಗ್ರ ಸ್ಥಾನದಲ್ಲಿದೆ.  ಇದು ಹಬ್ಬಕ್ಕೆ 5-8 ಜನರನ್ನು ಆಹ್ವಾನಿಸಿದಂತೆ. 

  • Sep 24, 2021, 16:16 PM IST

ನವದೆಹಲಿ : Best Ways to Earn Money at Home: ನೀವು ಮನೆಯಿಂದಲೇ ಸಂಪಾದನೆ ಮಾಡಲು ಬಯಸಿದರೆ, ಹೆಚ್ಚು ಕಷ್ಟಪಡಬೇಕಾಗಿಲ್ಲ. ಈ 5 ವಿಧಾನಗಳನ್ನು ಅನುಸರಿಸುವ ಮೂಲಕ, ಮನೆಯಲ್ಲಿ ಕುಳಿತೇ ಬಹಳಷ್ಟು ಹಣ ಸಂಪಾದಿಸಬಹುದು. ಈ ವಿಧಾನಗಳನ್ನು ಬಳಸಿಕೊಂಡು ಅನೇಕ ಜನರು ಹಣವನ್ನು ಗಳಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಮನೆಯಲ್ಲಿ ಕುಳಿತು ಹಣ ಗಳಿಸುವ ಪಟ್ಟಿಯಲ್ಲಿ Pop-up Meal ಅಗ್ರ ಸ್ಥಾನದಲ್ಲಿದೆ.  ಇದು ಹಬ್ಬಕ್ಕೆ 5-8 ಜನರನ್ನು ಆಹ್ವಾನಿಸಿದಂತೆ. ಇದರಲ್ಲಿ, ನೀವು ನಿಮ್ಮ ಪ್ರದೇಶ ಅಥವಾ ರಾಜ್ಯದ ವಿಶೇಷ ಖಾದ್ಯವನ್ನು ಅತಿಥಿಗಳಿಗೆ ಪರಿಚಯಿಸಬಹುದು. ಆರಂಭಿಕರಿಗಾಗಿ, ನೀವು 'Authenticook' ಮತ್ತು 'Eat With India' ನಂತಹ ಪ್ಲಾಟ್ ಫಾರಂನಲ್ಲಿ ನೋಂದಾಯಿಸಿಕೊಳ್ಳಬಹುದು. ವರದಿಯ ಪ್ರಕಾರ, Pop-up Meal ವ್ಯಾಪಾರದಿಂದ 15000 ರಿಂದ 22000 ರೂಪಾಯಿಗಳವರೆಗೆ ಆದಾಯವನ್ನು ಸುಲಭವಾಗಿ ಗಳಿಸಬಹುದು.  

2 /5

ಗಳಿಕೆಯ ಈ ವಿಧಾನವು ಅತ್ಯಂತ ಸೃಜನಶೀಲವಾಗಿದೆ. ಛಾಯಾಗ್ರಹಣವನ್ನು ಇಷ್ಟಪಡುವ ಜನರು ಈ ವ್ಯವಹಾರವನ್ನು ಮಾಡಬಹುದು. ಇದರಲ್ಲಿ, ನೀವು ಪ್ರಕೃತಿ, ಪ್ರಾಣಿಗಳು ಮತ್ತು ನಿಮ್ಮ ಸುತ್ತಲಿನ ವಸ್ತುಗಳ ಸೃಜನಶೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಇದಕ್ಕಾಗಿ, Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ತಾಣಗಳಲ್ಲಿ ಫೋಟೋಗಳಿಗೆ ಪರವಾನಗಿ ನೀಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.  

3 /5

ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಉತ್ತಮ ಸಂವಹನ ಕೌಶಲ್ಯ ಹೊಂದಿದ್ದರೆ, ವರ್ಚುವಲ್ ಅಸಿಸ್ಟೆಂಟ್ ಆಗುವ ಮೂಲಕ ಗಳಿಸಬಹುದು. ಇದಕ್ಕಾಗಿ, ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ವರ್ಚುವಲ್ ಅಸಿಸ್ಟೆಂಟ್ ಆಗಲು, ಲಿಂಕ್ಡ್‌ಇನ್ ಕರಿಯೆರ್ ಸೈಟ್ ಮತ್ತು UpWork.com ಮತ್ತು Freelancer.com ನಂತಹ ವೆಬ್‌ಸೈಟ್‌ಗಳೊಂದಿಗೆ ಪ್ರಾರಂಭಿಸಬಹುದು. ಇದರೊಂದಿಗೆ ಆರಂಭದಲ್ಲಿ ಗಂಟೆಗೆ 250 ರೂ.ಗಳನ್ನು ಗಳಿಸಬಹುದು, ಹೆಚ್ಚುತ್ತಿರುವ ಅನುಭವದೊಂದಿಗೆ ನೀವು ಪ್ರತಿ ಗಂಟೆಗೆ 800 ರೂ. ಗಳಿಸಲು ಸಾಧ್ಯವಾಗುತ್ತದೆ.    

4 /5

ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಕ್ರಿಯೇಟರ್ ಗೆ ಸಾಕಷ್ಟು ಬೇಡಿಕೆ ಇದೆ. ಜನರು ಮನೆಯಲ್ಲಿ ಕುಳಿತು ಬರಹಗಾರರಾಗುವ ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಭಾಷೆಯ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದು, ಸೃಜನಶೀಲತೆಯಿದ್ದರೆ ಈ ಕೆಲಸವನ್ನು ಆರಂಭಿಸಬಹುದು.  ಪ್ರತಿ ಪದಕ್ಕೆ 1-3 ರೂ ಸಂಪಾದಿಸಬಹುದು. ಸ್ಪೆಷಲ್ ಕಮಟೆಂಟ್ ಗಳಿಗೆ ಪ್ರತಿ ಪದಕ್ಕೆ ರೂ 8-10 ಗಳಿಸಬಹುದು.  

5 /5

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಟ್ಯುಶನ್ ಹೆಚ್ಚು ಪ್ರಚಲಿತದಲ್ಲಿದೆ. ಕರೋನಾ ಸಾಂಕ್ರಾಮಿಕದ ನಂತರ ಅದರ ಕ್ರೇಜ್ ಹೆಚ್ಚಾಗಿದೆ. ನಿಮಗೆ ಬೋಧನೆಯಲ್ಲಿ ಆಸಕ್ತಿ ಇದ್ದರೆ, ಮನೆಯಲ್ಲಿಯೇ ಕುಳಿತು ಈ ಕ್ಷೇತ್ರದಲ್ಲಿ ಪ್ರಯತ್ನಪಡಬಹುದು. ಇದಕ್ಕಾಗಿ ನೀವು ಕಂಪ್ಯೂಟರ್ ಮತ್ತು ಮೊಬೈಲ್ ಹೊಂದಿರಬೇಕು. ವೇದಾಂತು, ಭಾರತ್ ಟ್ಯೂಟರ್ ಮತ್ತು ಟ್ಯೂಟರ್ ಇಂಡಿಯಾ ಮುಂತಾದ ವೇದಿಕೆಗಳೊಂದಿಗೆ ಆನ್‌ಲೈನ್ ಟ್ಯೂಶನ್ ಪ್ರಾರಂಭಿಸಬಹುದು.

You May Like

Sponsored by Taboola