7th pay commission : ಸದ್ಯದಲ್ಲೇ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ .! ಹೊರಬೀಳಲಿದೆ ಬಹುನಿರೀಕ್ಷಿತ ಡಿಎ ಆದೇಶ

ಇನ್ನು ಕೆಲವೇ ದಿನಗಳಲ್ಲಿ 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ. 
 

ನವದೆಹಲಿ : ಇನ್ನು ಕೆಲವೇ ದಿನಗಳಲ್ಲಿ 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ.  ಹೋಳಿ ಹಬ್ಬಕ್ಕೆ ಮುನ್ನವೇ ಸರ್ಕಾರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಇದರರ್ಥ ಯಾವುದೇ ಹೊತ್ತಲ್ಲಿ ಸರ್ಕಾರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಸಾಧ್ಯತೆಗಳು ದಟ್ಟವಾಗಿವೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಪಿಂಚಣಿದಾರರಿಗೂ ಸಿಗಲಿದೆ ಲಾಭ : ನೆನಪಿರಲಿ. ಇದು ಕೇವಲ ಪ್ತಸ್ತುತ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಅಷ್ಟೆಅಲ್ಲ. ಪೆಂನ್ಶನ್ ಪಡೆಯುತ್ತಿರುವವರಿಗೂ 2021 ಜನವರಿಯಿಂದ ಜೂನ್ ತನಕದ ಡಿಎ ಮೊತ್ತದಲ್ಲಿ ಹೆಚ್ಚಳ ಅನ್ವಯವಾಗಲಿದೆ. ಸುಮಾರು 40 ಲಕ್ಷ ಪಿಂಚಣಿದಾರರು ಈ ಮೊತ್ತದ  ನಿರೀಕ್ಷೆಯಲ್ಲಿದ್ದಾರೆ. 

2 /7

LTC ನಿಯಮದಲ್ಲಿ ಬದಲಾವಣೆ : ಕೊವಿಡ್ ಕಾರಣದಿಂದ ಕೇಂದ್ರ ಸರ್ಕಾರ Leave Travel concession (LTC) ಸ್ಕೀಮ್ ನಿಯಮದಲ್ಲಿ ಬದಲಾವಣೆ ಮಾಡಿದೆ.   ಅದರ ಪ್ರಕಾರ LTC ಕ್ಲೈಮ್ ಮಾಡಲು ನೀವು ಪ್ರವಾಸ ಹೋಗಬೇಕಾದ ಅಗತ್ಯವೇನಿಲ್ಲ. 12,ಅಕ್ಟೋಬರ್ 2020 ರಿಂದ ಮಾರ್ಚ್ 31 ರಅವಧಿಯಲ್ಲಿ  ನೀವು  ಖರೀದಿಸಿದ ವಸ್ತುವಿನ ಮೇಲೆ ಶೇ. 12 ರಷ್ಟು ಆದಾಯ ತೆರಿಗೆ ವಿನಾಯಿತಿ ಸಿಗಲಿದೆ.   

3 /7

LTC ಬದಲಿಗೆ ವಿಮೆ ಪ್ರಿಮಿಯಂ ಮೊತ್ತ ಕ್ಲೈಮ್ ಮಾಡಿ : ಕೇಂದ್ರ ನೌಕರರಿಗೆ ಬಹು ದೊಡ್ಡ ರೀಲೀಫ್ ನೀಡಿರುವ ಕೇಂದ್ರ ಸರ್ಕಾರ LTC ಸ್ಕೀಮ್ ನಲ್ಲಿ ಲೈಫ್ ಇನ್ಶೂರೆನ್ಸ್ ಪಾಲಿಸಿಯನ್ನೂ ಸೇರಿಸಿದೆ.

4 /7

ಡಿಎಯಲ್ಲಿ ಹೆಚ್ಚಳ ಎಷ್ಟಾಗುತ್ತದೆ : ಕೆಲವು ಮೀಡಿಯಾ ವರದಿಗಳ ಪ್ರಕಾರ ತುಟ್ಟಿಭತ್ಯೆಯಲ್ಲಿ ಶೇ 4 ರಷ್ಟು ಏರಿಕೆಯಾಗಲಿದೆ. 

5 /7

ತುಟ್ಟಿ ಭತ್ಯೆ ಶೇ. 25ರಷ್ಟಾಗಲಿದೆ: ತುಟ್ಟಿ ಭತ್ಯೆ ಘೋಷಣೆ ಮಾಡುವಾಗ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಪರಿಹಾರ ಕೂಡಾ ಘೋಷಣೆ ಮಾಡಲಿದೆ. ಅಂದರೆ, ಒಟ್ಟು ಶೇ. 25 ರಷ್ಟು ಭತ್ಯೆ ಸಿಗುವ ಸಾಧ್ಯತೆ ಗಳಿವೆ. ಅಂದರೆ, ಈಗಾಗಲೇ ಶೇ. 17 ರಷ್ಟಿದೆ ತುಟ್ಟಿ ಭತ್ಯೆ. ಇದರ ಜೊತೆ ಏರಿಕೆ ಶೇ.  ಜೊತೆಗೆ ಡಿಎ ಪರಿಹಾರ ಶೇ. 4 ಸಿಗಲಿದೆ.   

6 /7

ವೇತನ ಏರಿಕೆಯಾಗಲಿದೆ : ತುಟ್ಟಿ ಭತ್ಯೆಯ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ವೇತನ ಕೂಡಾ ಏರಿಕೆಯಾಗಲಿದೆ.  ಶೇ. 8 ರಷ್ಟು ಡಿಎ ಸಿಗುವ ಸಾಧ್ಯತೆಗಳಿವೆ. ಇದಕ್ಕೆ ಅನುರೂಪವಾಗಿ ಟಿಎ ಅಂದರೆ ಪ್ರವಾಸ ಭತ್ಯೆ ಕೂಡಾ ಏರಿಕೆಯಾಗಲಿದೆ. 

7 /7

 ಅರಿಯರ್ಸ್ ಕೂಡಾ ಸಿಗಲಿದೆ : ಜುಲೈ 2020ರಂದು ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ರದ್ದುಪಡಿಸಿತ್ತು, ಕರೋನಾ ಇದಕ್ಕೆ ಕಾರಣವಾಗಿತ್ತು.  ತುಟ್ಟಿಭತ್ಯೆ ಮತ್ತೆ ಸಿಗಲು ಆರಂಭಿಸಿದರೆ, ಹಳೆಯಅರಿಯರ್ಸ್ ಕೂಡಾ ಸಿಗಲಿದೆ ಎಂಬ ಆಶಾವಾದ  ಇಟ್ಟು ಕೊಂಡಿದ್ದಾರೆ ಕೇಂದ್ರ ನೌಕರರು.   

You May Like

Sponsored by Taboola