7th Pay Commission Latest News: ನೀವೂ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
7th Pay Commission Latest News: ನೀವೂ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ರಷ್ಟು ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. ಏಕೆಂದರೆ, ನೌಕರರಿಗೆ ಮತ್ತೆ 4 ಇತರ ಭತ್ಯೆಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಒಂದೊಮ್ಮೆ ಈ ಭತ್ಯೆಗಳ ಮೇಲೆ ಸರ್ಕಾರ ಮುದ್ರೆಯೋತ್ತಿದರೆ, ನೌಕರರ ವೇತನದಲ್ಲಿ ಬಂಪರ್ ಏರಿಕೆಯಾಗಲಿದೆ. ಈ ಭತ್ಯೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Share Market Update: ಷೇರು ಮಾರುಕಟ್ಟೆಯಲ್ಲಿ ಮುಂದುವರೆದ ಕೋಲಾಹಲ, ಇಂದು ಮತ್ತೆ 700 ಅಂಕಗಳಿಂದ ಕುಸಿದ ಸೆನ್ಸೆಕ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್ - ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳದ ನಂತರ ಇದೀಗ ಇತರ ಭತ್ಯೆಗಳಲ್ಲಿಯೂ ಕೂಡ ಏರಿಕೆಯಾಗಲಿದೆ. ಮುಂದಿನ ತಿಂಗಳು ನೌಕರರ ವೇತನದಲ್ಲಿ ಈ ಏರಿಕೆಯಾಗಲಿದೆ ಎನ್ನಲಾಗಿದ್ದು, ಇದರ ಜೊತೆಗೆ 3 ತಿಂಗಳ ಅರಿಯರ್ ಕೂಡ ಸಿಗಲಿದೆ.
2. TA ಹಾಗೂ CAಯಲ್ಲಿಯೂ ಕೂಡ ಹೆಚ್ಚಳ - ತುಟ್ಟಿ ಭತ್ಯೆ ಏರಿಕೆಯ ನಂತರ ಕೇಂದ್ರ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಹಾಗೂ ನಗರ ಭತ್ಯೆ ಕೂಡ ಏರಿಕೆಯಾಗಲಿದೆ. ಏಕೆಂದರೆ, DA ಹೆಚ್ಚಳದ ನಂತರ TA ಹಾಗೂ CA ಹೆಚ್ಚಳದ ದಾರಿ ಕೂಡ ಸುಗಮವಾಗಲಿದೆ.
3. ಗ್ರ್ಯಾಚ್ಯುಟಿ ಹೆಚ್ಚಾಗಲಿದೆ - ಇದಾದ ಬಳಿಕ ಪ್ರಾವಿಡೆಂಟ್ ಫಂಡ್ ಹಾಗೂ ಗ್ರ್ಯಾಚ್ಯುಟಿಗಳಲ್ಲಿಯೂ ಕೂಡ ಏರಿಕೆಯಾಗಲಿದೆ. ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಹಾಗೂ ಡಿಎ ಆಧಾರದ ಮೇಲೆ ಗ್ರ್ಯಾಚುಟಿಯನ್ನು ಲೆಕ್ಕ ಹಾಕಲಾಗುತ್ತದೆ. ಹೀಗಿರುವಾಗ ತುಟ್ಟಿಭತ್ಯೆ ಹೆಚ್ಚಳದಿಂದ ಪಿಎಫ್ ಹಾಗೂ ಗ್ರ್ಯಾಚ್ಯುಟಿಗಳು ಕೂಡ ಹೆಚ್ಚಾಗಲಿವೆ.
4. ಸರ್ಕಾರಿ ನೌಕರರಿಗೆ ಡಬಲ್ ಲಾಭ -DA ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಹಾಗೂ ಹೌಸ್ ಅಲೌಂಸ್ ಹೆಚ್ಚಳ ಕೂಡ ನಿರೀಕ್ಷಿಸಬಹುದು. ಸರ್ಕಾರಿ ನೌಕರರ DA ಕೇವಲ 9 ತಿಂಗಳಲ್ಲಿ ಡಬಲ್ ಆಗಿದೆ. ಇದಲ್ಲದೆ ಪಿಂಚಣಿದಾರರಿಗೂ ಕೂಡ ಶೇ.34ರಷ್ಟು ತುಟ್ಟಿಭತ್ಯೆ ಲಭಿಸಲಿದೆ.
5. ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ - ಕೇಂದ್ರ ಸರ್ಕಾರದ ಈ ಘೋಷಣೆಯ ಬಳಿಕ ಸುಮಾರು 50 ಲಕ್ಷ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಲಾಭ ಸಿಗಲಿದೆ. ಆದರೆ, ಇನ್ನೊಂದೆಡೆ ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 9455.50 ಕೋಟಿ ರೂ.ಗಳ ಆರ್ಥಿಕ ಹೊರೆ ಬೀಳಲಿದೆ. ಇದರ ಹೊರತಾಗಿ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಕೊರೊನಾ ಕಾಲದ 18 ತಿಂಗಳ ಬಾಕಿ ಇರುವ ಡಿಎ ಪಾವತಿಗೂ ಕೂಡ ಒತ್ತಡ ಹೆಚ್ಚಿಸುತ್ತಿವೆ. ವೇತನ ಹಾಗೂ ಭತ್ಯೆಗಳು ಸರ್ಕಾರಿ ನೌಕರರ ಹಕ್ಕುಗಳಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯ ಕೂಡ ಹೇಳಿದೆ ಎಂದು ನೌಕರರು ವಾದಿಸಿದ್ದಾರೆ.