ವಿಶ್ವದಲ್ಲಿಯೇ ಸುದೀರ್ಘ ಕಾಲ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಿ..!

 ಸುದೀರ್ಘ ಕಾಲ ಜೈಲು ಶಿಕ್ಷೆ ವಿಧಿಸಿ ಥೈಲ್ಯಾಂಡ್ ವಿಶ್ವ ದಾಖಲೆ ನಿರ್ಮಿಸಿದೆ.

ಅಪರಾಧಿಗೆ ಅಬ್ಬಾಬ್ಬಾ ಎಂದರೆ ಎಷ್ಟು ವರ್ಷ ಜೈಲು ಶಿಕ್ಷೆ ವಿಧಿಸಬಹುದು. 10, 50, 100 ವರ್ಷ. ಮಾಡಿರುವ ಅಪರಾಧಕ್ಕೆ ತಕ್ಕಂತೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಕೆಲವೊಮ್ಮೆ ಅಪರಾಧಿಗಳಿಗೆ ನ್ಯಾಯಾಲಯವು ಸಾವಿರ ವರ್ಷಗಳಿಂದ ಹಿಡಿದು ಮಿಲಿಯನ್ ವರ್ಷಗಳವರೆಗೆ ಶಿಕ್ಷೆ ವಿಧಿಸುತ್ತದೆ ಎಂದರೆ ನೀವು ನಂಬುತ್ತೀರಾ..?

ಹೌದು, ಅಚ್ಚರಿಯಾದರೂ ಇದು ನಿಜ, ನೀವು ನಂಬಲೇಬೇಕು. ಪಿರಮಿಡ್ ಸ್ಕೀಮ್ ನಲ್ಲಿ ವಂಚಿಸಿದ ಆರೋಪದ ಮೇಲೆ ಚಮೋಯ್ ತಿಪ್ಯಾಸೊಗೆ ಬರೋಬ್ಬರಿ 1,41,078 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ಮೂಲಕ ಸಜೆ ನೀಡುವ ವಿಚಾರದಲ್ಲಿ ಥೈಲ್ಯಾಂಡ್ ವಿಶ್ವದಾಖಲೆ ನಿರ್ಮಿಸಿದೆ. ಲಕ್ಷಾಂತರ ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕೆಲವು ಪ್ರಖ್ಯಾತ ಅಪರಾಧಿಗಳ ಬಗ್ಗೆ ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

1 /5

ಅಪರಾಧಿಯೊಬ್ಬರಿಗೆ ಸುದೀರ್ಘ ಕಾಲದ ಜೈಲು ಶಿಕ್ಷೆ ವಿಧಿಸಿರುವ ವಿಷಯದಲ್ಲಿ ಥೈಲ್ಯಾಂಡ್ ವಿಶ್ವದಾಖಲೆ ನಿರ್ಮಿಸಿದೆ. ಪಿರಮಿಡ್ ಸ್ಕೀಮ್ ಹೆಸರಿನಲ್ಲಿ 16 ಸಾವಿರ ಜನರಿಗೆ ವಂಚಿಸಿದ ಆರೋಪದ ಮೇರೆಗೆ ಚಮೋಯ್ ತಿಪ್ಯಾಸೊ ಎಂಬ ಮಹಿಳೆಗೆ ಲಕ್ಷಾಂತರ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಅಪರಾಧಕ್ಕಾಗಿ ಅವರಿಗೆ ಬರೋಬ್ಬರಿ 1,41,078 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಅಪರಾಧಿಗಳಿಗೆ ಎಷ್ಟೇ ಕಾಲ ಶಿಕ್ಷೆ ನೀಡಿದರೂ ಅವರನ್ನು 20 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂಬ ಕಾನೂನನ್ನು ಥೈಲ್ಯಾಂಡ್‌ನಲ್ಲಿ ಜಾರಿಗೆ ತರಲಾಯಿತು. ಈ ಕಾನೂನಿನ ಕಾರಣದಿಂದ ತಿಪ್ಯಾಸೊಳನ್ನು 8 ವರ್ಷಗಳ ನಂತರ ಬಿಡುಗಡೆ ಮಾಡಲಾಯಿತು.

2 /5

ಸ್ಪೇನ್ ದೇಶದ 22 ವರ್ಷದ ಪೋಸ್ಟ್‌ ಮ್ಯಾನ್ ಗೇಬ್ರಿಯಲ್ ಮಾರ್ಚ್ ಗ್ರಾನಡೋಸ್‌ಗೆ 1972 ರಲ್ಲಿ 3,84,912 ವರ್ಷಗಳ ಶಿಕ್ಷೆ ವಿಧಿಸಲಾಯಿತು. 40 ಸಾವಿರಕ್ಕಿಂತ ಹೆಚ್ಚು ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ತಲುಪಿಸದ ಆರೋಪದಲ್ಲಿ ಆತನಿಗೆ ಈ ಶಿಕ್ಷೆ ನೀಡಲಾಗಿತ್ತು. ಬಳಿಕ ಆತನ ಶಿಕ್ಷೆಯನ್ನು 14 ವರ್ಷಕ್ಕೆ ಇಳಿಸಲಾಯಿತು.

3 /5

1994 ಅಲೆನ್ ವೇಯ್ನ್ ಮೆಕ್ಲೌರಿನ್ ಎಂಬ ವ್ಯಕ್ತಿಗೆ ಒಟ್ಟು 21, 250 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅಲೆನ್ ವಿರುದ್ಧದ  4 ಅತ್ಯಾಚಾರ ಪ್ರಕರಣಕ್ಕೆ 8 ಸಾವಿರ ವರ್ಷ, 4 ಬಲವಂತದ ಅಸ್ವಾಭಾವಿಕ ಲೈಂಗಿಕತೆ ಪ್ರಕರಣಕ್ಕೆ 8 ಸಾವಿರ ವರ್ಷ, ಆಯುಧದಿಂದ ಹಲ್ಲೆ ಮಾಡಿದ್ದಕ್ಕೆ 1,500 ವರ್ಷ, ಕೆಲವು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ 500-500 ವರ್ಷಗಳಂತೆ ಶಿಕ್ಷೆ ವಿಧಿಸಲಾಗಿತ್ತು. ಇದಲ್ಲದೆ ಅಲೆನ್ ಸಹಚರನಿಗೆ ಒಟ್ಟು 11,250 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಇಬ್ಬರಿಗೂ ಒಟ್ಟಿಗೆ 32,500 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

4 /5

ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಾರ್ಲ್ಸ್ ಸ್ಕಾಟ್ ರಾಬಿನ್ಸನ್ ಗೆ ಅಮೆರಿಕದ ಒಕ್ಲಹೋಮದಲ್ಲಿ 30 ಸಾವಿರ ವರ್ಷಗಳ ಶಿಕ್ಷೆ ವಿಧಿಸಲಾಯಿತು. ಈತ 1994 ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಕುತೂಹಲಕಾರಿ ಅಂಶವೆಂದರೆ ಚಾರ್ಲ್ಸ್ 108 ವರ್ಷ ತುಂಬಿದಾಗ ಮೊದಲ ಪೆರೋಲ್ ಪಡೆಯಲು ಅರ್ಹನಾಗಿದ್ದ.

5 /5

 2017 ರಲ್ಲಿ ನಡೆದ ಇಸ್ತಾಂಬುಲ್ ನೈಟ್ ಕ್ಲಬ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಬ್ದುಲ್ಕಾದಿರ್ ಮಾಶರಿಪೋವ್ ಎಂಬ ಉಜ್ಬೇಕ್ ಪ್ರಜೆಗೆ 40 ವರ್ಷ ಜೀವಾವಧಿ ಶಿಕ್ಷೆ ಜೊತೆಗೆ 1,368 ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಲಾಗಿದೆ.