AB de Villiers: ತಾಜ್ ಮಹಲ್ ಮುಂದೆ ಗೆಳತಿಗೆ ಪ್ರಪೋಸ್ ಮಾಡಿದ್ದ ಡಿವಿಲಿಯರ್ಸ್, ಇಲ್ಲಿದೆ ಕುತೂಹಲಕಾರಿ ಪ್ರೇಮಕಥೆ

                              

AB de Villiers: ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ನವೆಂಬರ್ 19 ರ ಬೆಳಿಗ್ಗೆ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದ ಅವರು ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಈಗ ಐಪಿಎಲ್ ಮತ್ತು ವಿಶ್ವದ ಯಾವುದೇ ಟಿ20 ಲೀಗ್‌ನಲ್ಲಿ ಆಡುವುದಿಲ್ಲ. 'ಜಂಟಲ್‌ಮ್ಯಾನ್ಸ್‌' ಗೇಮ್‌ ಅಲ್ಲದೆ, ಪ್ರೀತಿಯ ಪಿಚ್‌ನಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ಇಂದು ನಾವು ಅವರ ಆಸಕ್ತಿದಾಯಕ ಪ್ರೇಮಕಥೆಯ ಬಗ್ಗೆ ತಿಳಿಯೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ತುಂಬಾ ಮುದ್ದಾದ ಡೇನಿಯಲ್ಸ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಸ್ವಾರ್ಟ್ ಕೂಡ ತುಂಬಾ ಮುದ್ದಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ.  

2 /5

ಅವರ ಪ್ರೇಮಕಥೆ ಕುತೂಹಲಕಾರಿಯಾಗಿದೆ: ಎಬಿ ಡಿವಿಲಿಯರ್ಸ್ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಅವನು ತನ್ನ ಗೆಳತಿ ಡೇನಿಯಲ್ ಸ್ವಾರ್ಟ್ ಜೊತೆ 5 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ. ಈ ವೇಳೆ ಇಬ್ಬರೂ ತುಂಬಾ ಹತ್ತಿರವಾಗಿದ್ದರು.

3 /5

ತಾಜ್ ಮಹಲ್ ಮುಂದೆ ಪ್ರಪೋಸ್ ಮಾಡಿದ್ದ  ಎಬಿ ಡಿವಿಲಿಯರ್ಸ್: ಎಬಿ ಡಿವಿಲಿಯರ್ಸ್ 2012 ರಲ್ಲಿ ಆಗ್ರಾದ ತಾಜ್ ಮಹಲ್ ಮುಂದೆ ತನ್ನ ಗೆಳತಿ ಡೇನಿಯಲ್ ಸ್ವಾರ್ಟ್ ಅನ್ನು ಚಲನಚಿತ್ರ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದರು.  ಆ ಸಮಯದಲ್ಲಿ ಐಪಿಎಲ್ ಪಂದ್ಯಾವಳಿಯ ಕಾರಣದಿಂದ ಈ ಜೋಡಿ ಭಾರತದಲ್ಲಿದ್ದರು.  ಇದನ್ನೂ ಓದಿ- AB de Villiers: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್

4 /5

ರಾಜ ಶೈಲಿಯಲ್ಲಿ ಮದುವೆ:  ಎಬಿ ಡಿವಿಲಿಯರ್ಸ್ ಮತ್ತು ಡೇನಿಯಲ್ ಸ್ವಾರ್ಟ್ ಅವರು ದಕ್ಷಿಣ ಆಫ್ರಿಕಾದ ಬೆಲ್ಲಾ-ಬೆಲಾ ನಗರದಲ್ಲಿ 30 ಮಾರ್ಚ್ 2013 ರಂದು ರಾಜಮನೆತನದ ಶೈಲಿಯಲ್ಲಿ ವಿವಾಹವಾದರು.

5 /5

ನಿವೃತ್ತಿಯ ನಂತರ ಕುಟುಂಬಕ್ಕೆ ಸಮಯ: ಎಬಿ ಡಿವಿಲಿಯರ್ಸ್ ಮತ್ತು ಡೇನಿಯಲ್ ಸ್ವಾರ್ಟ್ ಇಂದು ಅತ್ಯಂತ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ನಿವೃತ್ತಿಯ ನಂತರ, 'Mr 360 Degree' ಅವರು ತಮ್ಮ ಪತ್ನಿ 2 ಪುತ್ರರು ಮತ್ತು 1 ಪುತ್ರಿಯೊಂದಿಗೆ ವಿರಾಮ ಸಮಯವನ್ನು ಕಳೆಯುವುದಾಗಿ ತಿಳಿಸಿದ್ದಾರೆ.