Actress Life : ನಿರ್ದೇಶಕರು ಹೇಳಿದರು ಅಂತ 15 ವರ್ಷದ ನಟಿಯ ಒಪ್ಪಿಗೆ ಇಲ್ಲದೆ ಖ್ಯಾತ ನಟರೊಬ್ಬರು ಲಿಪ್ ಕಿಸ್ ಮಾಡಿದ್ದರಿಂದ ಹಿರೋಯಿನ್ ಸೆಟ್ನಲ್ಲೇ ಅತ್ತ ಘಟನೆ ನಡೆದಿದೆ. ಅಲ್ಲದೆ, ಈ ದಶ್ಯವನ್ನು ಸ್ವಲ್ಪವೂ ಕಟ್ ಮಾಡದಂತೆ ಸಿನಿಮಾದಲ್ಲಿ ಹಾಕಲಾಗಿತ್ತು. ಈ ಕಿಸ್ಸ್ ಸೀನ್ ಪ್ರೇಕ್ಷಕರಿಗೂ ಇಷ್ಟಾಗಿತ್ತು.. ಅಷ್ಟಕ್ಕೂ ಕಣ್ಣೀರಿಟ್ಟ ನಟಿ ಯಾರು.. ಕಿಸ್ ಮಾಡಿದ ನಟ ಯಾರು..? ಬನ್ನಿ ನೋಡೋಣ...
ಬಹುಚರ್ಚಿತ ಭಾರತೀಯ ನಟಿಯ ಮೊದಲ ಚಿತ್ರದಲ್ಲಿ, ಚಿತ್ರದ ನಾಯಕ ನಟಿಯ ಒಪ್ಪಿಗೆಯಿಲ್ಲದೆ ಅವಳನ್ನು ಬಲವಂತವಾಗಿ ಚುಂಬಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ..
ದಿವಂಗತ ಲೆಜೆಂಡರಿ ನಟ ಜೆಮಿನಿ ಗಣೇಶನ್ ಅವರ ಪುತ್ರಿಯರಲ್ಲಿ ಒಬ್ಬರಾದ ರೇಖಾ ಭಾರತದಾದ್ಯಂತ ಪ್ರಸಿದ್ಧ ನಟಿ. 1970 ರ ದಶಕದಲ್ಲಿ ಅವರು ಚೊಚ್ಚಲ ಪ್ರವೇಶ ಮಾಡಿದಾಗ, ಕೆಲ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು.
ರೇಖಾ 1969 ರಲ್ಲಿ ಅಂಜನಾ ಸಫರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ನಟಿಸುವಾಗ ರೇಖಾ ಅವರಿಗೆ 15 ವರ್ಷ. ಹೀರೋ ಬಿಸ್ವಜಿತ್ ಚಟರ್ಜಿಗೆ 32 ವರ್ಷ.
ರೇಖಾ ಈ ಸಿನಿಮಾ ನಂತರ ಅನೇಕ ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರೂ, ಮೊದಲ ಚಿತ್ರದಲ್ಲಿನ ಆಘಾತಕಾರಿ ಅನುಭವದ ಬಗ್ಗೆ ಆಗಾಗ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ..
ರೇಖಾ ಅವರ ಮೊದಲ ಚಿತ್ರ ಅಂಜನಾ ಸಫರ್.. ಈ ಚಿತ್ರದ ಟೈಟಲ್ ಅನ್ನು ದೋ ಶಿಕಾರಿ ಎಂದು ಮರುನಾಮಕರಣ ಮಾಡಲಾಯಿತು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದೃಶ್ಯವೊಂದರಲ್ಲಿ ಚಿತ್ರದ ಹೀರೋ ರೇಖಾ ಅವರ ಒಪ್ಪಿಗೆಯಿಲ್ಲದೆ ತುಟಿಗಳಿಗೆ ಬಲವಂತವಾಗಿ ಚುಂಬಿಸುತ್ತಾನೆ.
ರೇಖಾ ಅವರ ಅನುಮತಿಯಿಲ್ಲದೆ ನಿರ್ದೇಶಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿಯೂ ಈ ದೃಶ್ಯವನ್ನು ಒಂದು ಸೆಕೆಂಡ್ ಕೂಡ ಕಟ್ ಮಾಡಿಲ್ಲ.
ಶೂಟಿಂಗ್ ವೇಳೆ 15 ವರ್ಷದ ಬಾಲಕಿಯಾಗಿದ್ದ ರೇಖಾ ಕಿಸ್ ನಿಂದ ಬೆಚ್ಚಿಬಿದ್ದು ಎಲ್ಲರ ಮುಂದೆ ಕಣ್ಣೀರಿಟ್ಟಿದ್ದರಂತೆ..
ಈ ಘಟನೆಯ ಬಗ್ಗೆ ನಟ ಬಿಸ್ವಜಿತ್, ನಿರ್ದೇಶಕರು ಕೇಳಿದ್ದರಿಂದ ರೇಖಾಗೆ ಕಿಸ್ ಮಾಡಿದ್ದೇನೆ.. ಪ್ರೇಕ್ಷಕರು ಕೂಡ ಈ ದೃಶ್ಯವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದರು..
ಅಂಜನಾ ಜಾಫರ್ 1970 ರ ಮೊದಲು ಚಿತ್ರೀಕರಣಗೊಂಡಿದ್ದರೂ, ಅದು 1979 ರಲ್ಲಿ ದೋ ಶಿಕಾರಿಯಾಗಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ..