ಅರೇ ಈ ಸ್ಟಾರ್‌ ನಟಿ ಡಾಕ್ಟರ್..? ಸಿನಿಮಾಗಳಲ್ಲಿ ಗ್ಲಾಮರ್ ಕ್ವೀನ್‌, ಅದ್ಭುತ ನಟಿ.. ಹೊರಗೆ ವೈದ್ಯೆ... ಸೂಪರ್‌...

Sai Kamakshi Bhaskarla : ಈ ಸೌತ್‌ಇಂಡಸ್ಟ್ರಿಯ ಸ್ಟಾರ್‌ ನಟಿ.. ತನ್ನ ಅಭಿನಯ ಮತ್ತು ಗ್ಲಾಮರ್‌ನಿಂದ ಒಳ್ಳೆಯ ಹೆಸರು ಪಡೆದಿದ್ದಾರೆ... ಚೀನಾದಲ್ಲಿ ಎಂಬಿಬಿಎಸ್ ಮಾಡಿ.. ಅಪೋಲೋ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡಿದ ಈ ಚೆಲುವೆ ಈಗ ಚಿತ್ರರಂಗದಲ್ಲಿ ನಾಯಕಿಯಾಗಿ ತನ್ನದೇ ಆದ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾಳೆ... ಯಾರು ಈ ನಟಿ..? ಬನ್ನಿ ನೋಡೋಣ..
 

1 /8

ಚಿತ್ರರಂಗದ ಹಲವು ನಾಯಕಿಯರು ಡಾಕ್ಟರ್ ಆಗಬೇಕು ಎಂಬ ಆಸೆಯಿಂದ ನಟನಾದೆವು ಎನ್ನುತ್ತಾರೆ.. ಆದರೆ ಕೆಲವರು ಒಂದೆಡೆ ಎಂಬಿಬಿಎಸ್ ಓದಿ ಮತ್ತೊಂದೆಡೆ ನಾಯಕಿಯಾಗಿ ಮುಂದುವರಿಯುತ್ತಿದ್ದಾರೆ.   

2 /8

ತಮ್ಮ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದೂ.. ಸಾಯಿ ಪಲ್ಲವಿ, ಐಶ್ವರ್ಯ ಲಕ್ಷ್ಮಿ, ಶ್ರೀಲೀಲಾ, ಆಶಿಕಾ ರಂಗನಾಥ್, ಶ್ರೀಲೀಲಾ ಮುಂತಾದ ಸ್ಟಾರ್ ನಾಯಕಿಯರು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.   

3 /8

ಈ ಪೈಕಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ತನಗೊಂದು ಇಮೇಜ್ ಕ್ರಿಯೇಟ್ ಮಾಡುತ್ತಿರುವ ಈ ನಾಯಕಿಯೂ ಡಾಕ್ಟರ್. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋವನ್ನು ನೋಡಿ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.   

4 /8

ಈ ನಟಿ ವೈದ್ಯೆ..? ಅಂತ ಶಾಕ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆ ಸುಂದರಿ ಯಾರು ಗೊತ್ತಾ?.. ಯಸ್‌ ಆಕೆ ಬೇರೆ ಯಾರೂ ಅಲ್ಲ.. ತೆಲುಗು ಚಿತ್ರನಟಿ.. ಡಾ. ಸಾಯಿ ಕಾಮಾಕ್ಷಿ ಭಾಸ್ಕರ್ಲಾ.. ತೆಲುಗು ಚಿತ್ರರಂಗದ ಹೆಸರಾಂತ ನಟಿಯಲ್ಲಿ ಒಬ್ಬರು.  

5 /8

ಸಾಯಿ ಕಾಮಾಕ್ಷಿ ಭಾಸ್ಕರ್ ತೆಲುಗು ಸುಂದರಿ... ಚೀನಾದಲ್ಲಿ ಎಂಬಿಬಿಎಸ್ ಮಾಡಿದ ನಂತರ ಕೆಲವು ವರ್ಷಗಳ ಕಾಲ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡಿದಳು. 2018 ರಲ್ಲಿ ಮಿಸ್‌ ತೆಲಂಗಾಣ ಪಟ್ಟ ಪಡೆದ ನಂತರ, ಈಕೆಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದವು.   

6 /8

ಪ್ರಿಯುರಾಲು ಚಿತ್ರದ ಮೂಲಕ ತೆಲುಗು ತೆರೆಗೆ ನಾಯಕಿಯಾಗಿ ಪರಿಚಯವಾದ ಈ ಚೆಲುವೆ, ನಂತರ ʼಮಾ ಉರಿ ಪೊಲಿಮೆರʼ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇಟ್ಲು ಮರೆದುಮಿಲ್ಲಿ ಪ್ರಜನಿಕಂ, ವಿರೂಪಾಕ್ಷ, ಪೊಲಿಮೆರ 2, ಓಂ ಭೀಮ್ ಬುಷ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.   

7 /8

ಸಾಯಿ ಕಾಮಾಕ್ಷಿ ಅವರು ನಟನೆಗೆ ಸ್ಕೋಪ್ ಇರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಝಾನ್ಸಿ, ಸೈತಾನ್, ದೂತಾ ಮುಂತಾದ ವೆಬ್ ಸಿರೀಸ್‌ನಲ್ಲಿ ನಟಿಸುವ ಮೂಲಕ ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಿದರು..   

8 /8

ಈ ನಟಿ ಹೆಚ್ಚಾಗಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಹಾಟ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾರೆ. ಇತ್ತೀಚೆಗಷ್ಟೇ ಈ ಬ್ಯೂಟಿ ಫೋಟೋಗಳು ವೈರಲ್ ಆಗಿದ್ದವು..