Sai Pallavi: ನಟಿ ಸಾಯಿಪಲ್ಲವಿ ಮದುವೆಗೆ ಸಂಬಂಧಿಸಿದಂತೆ ಅನೇಕ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇತ್ತೀಚಿಗೆಯಷ್ಟೇ ಅವರ ಸಹೋದರಿ ವಿವಾಹ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ಜರುಗಿತ್ತು. ಈ ಮದುವೆಯ ಫೋಟೋಗಳನ್ನು ಸಾಯಿಪಲ್ಲವಿ ಹಂಚಿಕೊಂಡಿರಲಿಲ್ಲ. ಇದೀಗ ಕೊನೆಗೂ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಟಿ ಸಾಯಿಪಲ್ಲವಿ ಮದುವೆಗೆ ಸಂಬಂಧಿಸಿದಂತೆ ಅನೇಕ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇತ್ತೀಚಿಗೆಯಷ್ಟೇ ಅವರ ಸಹೋದರಿ ವಿವಾಹ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ಜರುಗಿತ್ತು. ಈ ಮದುವೆಯ ಫೋಟೋಗಳನ್ನು ಸಾಯಿಪಲ್ಲವಿ ಹಂಚಿಕೊಂಡಿರಲಿಲ್ಲ. ಇದೀಗ ಕೊನೆಗೂ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.Sai Pallavi
ಸಾಯಿ ಪಲ್ಲವಿ ತನ್ನ ಸಹೋದರಿ ಪೂಜಾ ಅವರ ಮದುವೆಯಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದವು. ಆದರೆ ಮದುವೆಯ ಸಂಪ್ರದಾಯಗಳ ಫೋಟೋಗಳು ಶೇರ್ ಮಾಡಿರಲಿಲ್ಲ. ಇದೀಗ ಆ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಈ ವರ್ಷ ಜನವರಿಯಲ್ಲಿ ವಿನೀತ್ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೆಪ್ಟೆಂಬರ್ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟಿ ಸಾಯಿ ಪಲ್ಲವಿ ಫೋಟೋ ಹಂಚಿಕೊಂಡು, ಹೀಗೆ ಬರೆದಿದ್ದಾರೆ, "ನನ್ನ ಸಹೋದರಿಯ ಮದುವೆಯು ನನ್ನ ಜೀವನದ ಮುಂದಿನ ಹಂತವಾಗಿದೆ ಎಂದು ನನಗೆ ತಿಳಿದಿತ್ತು! ಸಮಾರಂಭದಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಅವರನ್ನು ಆಶೀರ್ವದಿಸಿ ಮತ್ತು ಸಂತೋಷದಿಂದ ಕುಣಿದಾಡಿರುವುದನ್ನು ನಾನು ನೋಡಿದೆ! ಪೂಜಾಗೆ ಮದುವೆ ಪ್ರಸ್ತಾಪ ಬಂದಾಗ ನಾನು ಸಿದ್ಧಳಿರಲಿಲ್ಲ. ಇದಕ್ಕೆ ಕಾರಣ.. ನನ್ನಂತೆ ಆಕೆಗೆ ಯಾರೂ ಕೂಡ ಸಲಹೆ ನೀಡುವುದು, ಸಾಧಕ-ಬಾಧಕಗಳನ್ನು ತಿಳಿಸಿಹೇಳಲು ಸಾಧ್ಯವಿಲ್ಲ ಎಂದನಿಸಿತ್ತು. ಆದರೆ ನನ್ನ ಆತ್ಮೀಯ ವಿನೀತ್ ಸಿವಕುಮಾರ್ ನನ್ನಂತೆ ಪೂಜಾಳನ್ನು ಪ್ರೀತಿಸುತ್ತಾನೆ, ಮುದ್ದಾಡುತ್ತಾನೆ. ಇನ್ನು ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ" ಎಂದು ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ.
ಸಾಯಿ ಪಲ್ಲವಿ ಅವರು, ನಟ ನಾಗ ಚೈತನ್ಯ ಜೊತೆ ʼತಾಂಡೇಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತಿಷ್ಠಿತ ಗೀತಾ ಆರ್ಟ್ಸ್ ಬ್ಯಾನರ್ನಡಿಯಲ್ಲಿ ಬನ್ನಿ ವಾಸ್ ನಿರ್ಮಿಸಿರುವ ಚಂದೂ ಮೊಂಡೇಟಿ ನಿರ್ದೇಶನದ ಮತ್ತು ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಿರುವ ಚಿತ್ರದ ನಿರ್ಮಾಣವು ಮುಕ್ತಾಯದ ಹಂತದಲ್ಲಿದೆ. ಫೆಬ್ರವರಿ 7, 2025 ರಂದು ಬಿಡುಗಡೆ ದಿನಾಂಕವನ್ನು ತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ.
ಇನ್ನೊಂದೆಡೆ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಣಬೀರ್ ಕಪೂರ್ ಜೊತೆ ಸಾಯಿ ಕಾಣಿಸಿಕೊಳ್ಳಲಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ.