ಇನ್ನು ಐದು ದಿನಗಳಲ್ಲಿ ಈ ರಾಶಿಯವರು ಯಾವ ಕೆಲಸ ಮಾಡಿದರೂ ಯಶಸ್ಸು, ಧನ ಲಾಭ

ಜ್ಯೋತಿಷ್ಯದ ಪ್ರಕಾರ, ಜನವರಿ 12, 2023 ರಂದು, ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಧನು ರಾಶಿಯ ಮೇಲೆ ಈಗಾಗಲೇ ಗುರುವಿನ ಪ್ರಭಾವವಿದೆ. ಬುಧ ಮತ್ತು ಗುರು ಗ್ರಹಗಳ ನಡುವೆ ಸ್ನೇಹ ಸಂಬಂಧವಿದೆ. ಹೀಗಾಗಿ ಬುಧನ ಉದಯದಿಂದಾಗಿ, ಅನೇಕ ರಾಶಿಯವರು ವಿಶೇಷ ಲಾಭವನ್ನು  ಗಳಿಸಲಿದ್ದಾರೆ. 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಜನವರಿ 12, 2023 ರಂದು, ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಧನು ರಾಶಿಯ ಮೇಲೆ ಈಗಾಗಲೇ ಗುರುವಿನ ಪ್ರಭಾವವಿದೆ. ಬುಧ ಮತ್ತು ಗುರು ಗ್ರಹಗಳ ನಡುವೆ ಸ್ನೇಹ ಸಂಬಂಧವಿದೆ. ಹೀಗಾಗಿ ಬುಧನ ಉದಯದಿಂದಾಗಿ, ಅನೇಕ ರಾಶಿಯವರು ವಿಶೇಷ ಲಾಭವನ್ನು  ಗಳಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಸಿಂಹ :ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಬುಧ ಗ್ರಹವು ಐದನೇ ಮನೆಯಲ್ಲಿ ಉದಯಿಸಲಿದೆ. ಇದು ಮಕ್ಕಳ ಮನೆ, ಶಿಕ್ಷಣ ಮತ್ತು ಪ್ರೀತಿ ಸಂಬಂಧಗಳ ಮನೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಯಾವುದೇ ಕೆಲಸ ಮಾಡುವುದಾದರೂ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದ ಹುಡುಕಾಟದಲ್ಲಿರುವವರ ನಿರೀಕ್ಷೆ ಪೂರ್ಣಗೊಳ್ಳಲಿದೆ. ಈ ಸಮಯದಲ್ಲಿ, ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.    

2 /3

ವೃಶ್ಚಿಕ ರಾಶಿ : ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಬುಧ ಉದಯಿಸಲಿದ್ದಾರೆ. ಇದನ್ನು ಮಾತು ಮತ್ತು ಸಂಪತ್ತಿನ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಯಾವುದಾದರೊಂದು ರೀತಿಯಲ್ಲಿ ಆಕಸ್ಮಿಕವಾಗಿ  ಧನಲಾಭಾವಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಮೂಲಕವೇ ಜನರನ್ನು ನಿಮ್ಮತ್ತ ಸೆಳೆಯುವುದು ಸಾಧ್ಯವಾಗುತ್ತದೆ. ಆರ್ಥಿಕ ವಿಷಯಗಳಲ್ಲಿಯೂ ಪ್ರಗತಿ  ಕಂಡುಬರುತ್ತವೆ. ಬುಧಗ್ರಹದ ಉದಯದಿಂದಾಗಿ ಭಾರೀ ಧನ ಲಾಭಾವಾಗುವುದು. 

3 /3

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹದ ಉದಯವು ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯವು ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಲಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಯೋಚನೆಯಿದ್ದರೆ, ಈ ಸಮಯ ಸೂಕ್ತವಾಗಿದೆ.  ಉದ್ಯೋಗಿಗಳ ಪಾಲಿಗೂ ಈ ಅವವಧಿ ಶುಭಾವಾಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)