Venus Transit 2023 Tula: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿಯ ಬಳಿಕ ಶುಕ್ರ ಮಾಲವ್ಯ ರಾಜಯೋಗ ರೂಪಿಸುತಿದ್ದು, ಇದರಿಂದ ಒಟ್ಟು ಐದು ರಾಶಿಗಳ ಜನರಿಗೆ ಅಪಾರ ಧನ=ಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಮಾಲವ್ಯ ರಾಜಯೋಗಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಯಾವ ವ್ಯಕ್ತಿಯ ಜಾತಕದಲ್ಲಿ ಈ ರಾಜಯೋಗವಿರುತ್ತದೆಯೋ, ಆ ವ್ಯಕ್ತಿ ರಾಜನಂತೆ ಬದುಕುತ್ತಾನೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಆ ವ್ಯಕ್ತಿ ಅಪಾರ ಧನಿಕನಾಗುತ್ತಾನೆ ಎನ್ನಲಾಗುತ್ತದೆ. ಬರುವ ದೀಪಾವಳಿ ಹಬ್ಬದ ಬಳಿಕ ಧನವೈಭವದಾತ ಶುಕ್ರನ ಸ್ವರಾಶಿ ಗೋಚಾರದಿಂದ ಈ ಯೋಗ ರೂಪುಗೊಳ್ಳುತ್ತಿದೆ. ಏಕೆಂದರೆ ನವೆಂಬರ್ 30, 2023 ರಂದು ಶುಕ್ರ ತುಲಾ ರಾಶಿಗೆ ಪ್ರವೇಶಿಸುತ್ತಿದ್ದಾನೆ ಮತ್ತು ಇದರಿಂದ ತುಲಾ ರಾಶಿಯಲ್ಲಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಅಷ್ಟೇ ಅಲ್ಲ ಇದರಿಂದ ಹಲವು ರಾಶಿಗಳ ಭಾಗ್ಯ ಚಿನ್ನದಂತೆ ಹೊಳೆಯಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮಕರ ರಾಶಿ: ಈ ರಾಜಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಿಸಲು ಹೊಸ ಉಪಾಯ ಮಾಡುವುದರ ಮೇಲೆ ನೀವು ಕೆಲಸ ಮಾಡುವಿಡಿ ಮತ್ತು ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಪಿತ್ರಾರ್ಜಿತ ಸಂಪತ್ತಿನಿಂದ ನಿಮಗೆ ಅಪಾರ ಲಾಭ ಉಂಟಾಗಲಿದೆ. ಶುಕ್ರ ಗ್ರಹ ನಿಮ್ಮ ಗೋಚರ ಜಾತಕದ ಪಂಚಮ ಭಾವಕ್ಕೆ ಅಧಿಪತಿಯಾದ ಕಾರಣ ಮಕ್ಕಳಿಗೆ ಸಂಬಂಧಿಸಿದಂತೆ ನಿಮಗೆ ಸಂತಸದ ಸುದ್ದಿಯ ಜೊತೆಗೆ ಕಾಲಕಾಲಕ್ಕೆ ಅಪಾರ ಧನಲಾಭ ಉಂಟಾಗಲಿದೆ.
ತುಲಾ ರಾಶಿ: ಮಾಲವ್ಯ ರಾಜಯೋಗ ನಿರ್ಮಾಣಗೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದೆ. ಏಕೆಂದರೆ ಈ ಯೋಗ ನಿಮ್ಮ ರಾಶಿಯಲ್ಲಿಯೇ ರೂಪುಗೊಳ್ಳುತ್ತಿದೆ. ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ವ್ಯಾಪಾರಿಗಳಿಗೆ ಭಾರಿ ಧನಲಾಭವಾಗಲಿದೆ. ನಿಮ್ಮ ಕಾರ್ಯಶೈಲಿ ಈ ಅವಧಿಯಲ್ಲಿ ಉತ್ತಮವಾಗಿರಲಿದೆ. ನಿಂತು ಹೋದ ನಿಮ್ಮ ಯೋಜನೆಗಳು ಪುನಾರಂಭಗೊಳ್ಳಲಿವೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ಬಾಳಸಂಗಾತಿಯ ಬೆಂಬಲ ನಿಮಗೆ ಸಿಗಲಿದೆ. ಶುಕ್ರ ಗ್ರಹ ನಿಮ್ಮ ರಾಶಿಯ ಎಂಟನೇ ಮನೆಗೆ ಅಧಿಪತಿಯಾಗಿರುವ ಕಾರಣ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮಯ ಅತ್ಯದ್ಭುತ ಸಾಬೀತಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ.
ಕನ್ಯಾ ರಾಶಿ: ಈ ಯೋಗ ನಿಮ್ಮ ಜಾತಕದ ಧನ ಹಾಗೂ ವಾಣಿ ಭಾವದಲ್ಲಿ ಸಂಭವಿಸಲಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನ ಪ್ರಾಪ್ತಿಯ ಸಂಕೇತಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಇರಲಿದ್ದು, ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾನೆ. ವಿದೇಶಕ್ಕೆ ಹೋಗಲು ಬಯಸುವವರ ಆಸೆ ಈಡೇರಲಿದೆ. ವ್ಯಾಪಾರದಲ್ಲಿ ಸಿಲುಕಿಕೊಂಡ ಹಣ ನಿಮತ್ತ ಮರಳಲಿದೆ. ಶುಕ್ರ ಗ್ರಹ ನಿಮ್ಮ ಜಾತಕದ ನವಮ ಭಾವಕ್ಕೆ ಅಧಿಪತಿ. ಹೀಗಾಗಿ ಕಾಲಕಾಲಕ್ಕೆ ನಿಮ್ಮ ಭಾಗ್ಯೋದಯ ಕೂಡ ನೆರವೇರಲಿದೆ. ಧಾರ್ಮಿಕ-ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸಮಯ ಸಾಕಷ್ಟು ಅನುಕೂಲಕರವಾಗಿದೆ.
ವೃಷಭ ರಾಶಿ: ಹಾಗೆ ನೋಡಿದರೆ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ತುಲಾ ರಾಶಿಗೆ ಅಧಿಪತಿಯಾಗುವುದರ ಜೊತೆಗೆ ನಿಮ್ಮ ರಾಶಿಯ ಅಧಿಪತಿಯೂ ಆಗಿದ್ದಾನೆ. ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಆರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಅಷ್ಟೇ ಅಲ್ಲ ನಿಮಗೆ ಆಕಸ್ಮಿಕ ಧನಪ್ರಾಪ್ತಿ ಕೂಡ ಆಗಲಿದೆ. ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ, ವ್ಯಾಪಾರದಲ್ಲಿ ಬಾಳಸಂಗಾತಿಯ ಸಲಹೆಯಿಂದ ಮಾಡುವ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗಲಿವೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಪಾಟ್ನರ್ಶಿಪ್ ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಸಿಗಲಿದೆ.
ಕುಂಭ ರಾಶಿ: ಮಾಲವ್ಯ ರಾಜಯೋಗದ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಅವುಗಳಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ನೌಕರಿಯಲ್ಲಿ ಮನಸ್ಸಿಗೆ ಮುದ ನೀಡುವ ಫಲಿತಾಂಶಗಳು ಸಿಗಳಿವೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಬಂದು ನಿಮ್ಮ ಕೈಸೇರುವುದರಿಂದ ನಿಮಗೆ ಸಂತೋಷ ಸಿಗಲಿದೆ. ವೈವಾಹಿಕ ಜೀವನ ಪ್ರೇಮ ಸಂಬಂಧಗಳಲ್ಲಿ ಸುಮಧುರತೆ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯಂತ ಅದ್ಭುತವಾಗಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)